ಬೆಂಗಳೂರು, ಮೇ. 31 : ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಎಫ್ಎಂ ತೆರಿಗೆ ವಿನಾಯಿತಿ ಮಿತಿಯನ್ನು ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಹೆಚ್ಚಿಸಿದೆ. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ₹ 50,000 ಪ್ರಮಾಣಿತ ಕಡಿತವನ್ನು ಪರಿಚಯಿಸಲಾಗಿದೆ. ಈ ಬದಲಾವಣೆಗಳು ಮುಂದಿನ ವರ್ಷದಿಂದ ಜಾರಿಗೆ ಬರುತ್ತವೆ. ಅವರು ಒಟ್ಟು ಆದಾಯ 10 ಲಕ್ಷ ರೂಪಾಯಿಯನ್ನು ಗಳಿಸಿದರೆ ಅವರು ತಮ್ಮ ತೆರಿಗೆ ದರವನ್ನು ಶೂನ್ಯಕ್ಕೆ ಇಳಿಸಬಹುದು. ಈ ಬಗ್ಗೆ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಅದರಲ್ಲೂ ಕೂಡ ನಿಮಗೆ ಬಾಡಿಗೆ ಆದಾಯವೇ 10ಲಕ್ಷದವರೆಗೂ ಬರುತ್ತಿದೆ ಎಂದರೆ, ಇದಕ್ಕೆ ಎಷ್ಟು ತೆರಿಗೆ ವಿನಾಯ್ತಿ ಸಿಗುತ್ತದೆ. ಮನೆ ಬಾಡಿಗೆ ಭತ್ಯೆ, ಪ್ರಯಾಣ ರಿಯಾಯಿತಿ, ರಜೆ ಎನ್ಕ್ಯಾಶ್ಮೆಂಟ್ ಇತ್ಯಾದಿಗಳಿಗೆ ಸಂಬಂಧ ಪಟ್ಟಂತೆ ವಿನಾಯಿತಿಗಳನ್ನು ಸಹ ಪಡೆಯಬಹುದು. ಅಂತಹ ಕಡಿತಗಳ ಮಿತಿಗಳನ್ನು ಸಾಮಾನ್ಯವಾಗಿ ಮೂಲ ವೇತನ, ತುಟ್ಟಿಭತ್ಯೆ ಇತ್ಯಾದಿಗಳಂತಹ ಕೆಲವು ಸಂಬಳದ ಅಂಶಗಳ ಆಧಾರದ ಮೇಲೆ ಗುಣಿಸಲಾಗುತ್ತದೆ.
ನಿಮ್ಮ ಬಾಡಿಗೆ ಮೊತ್ತ 10 ಲಕ್ಷವಾಗಿದ್ದು, ವರ್ಷಕ್ಕೆ 10 ಲಕ್ಷ ಆದಾಯವನ್ನು ಬಾಡಿಗೆ ಮನೆಯಿಂದಲೇ ಗಳಿಸುತ್ತಿದ್ದರೆ, ನೀವು ಗೃಹ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ಐಟಿ ಕಾಯಿದೆಯ ಸೆಕ್ಷನ್ 24(ಬಿ) ಅಡಿಯಲ್ಲಿ 2,00,000 ರೂ.ವರೆಗೆ ಪಾವತಿಸಿದರೆ, 80C ಅಡಿಯಲ್ಲಿ ಕ್ಲೈಮ್ ಮಾಡಬಹುದು. ಇದರ ಜೊತೆಗೆ ಮನೆ ರಿಪೇರಿ, ನವೀಕರಣ, ಮನೆ ಆದಾಯ ತೆರಿಗೆ ಸೇರಿದಂತೆ ಹಲವು ಅಂಶಗಳ ಮೂಲಕ ನಿಮ್ಮ ತೆರಿಗೆಯಲ್ಲಿ ಕಡಿತವನ್ನು ಪಡೆಯಬಹುದು.
ಒಟ್ಟಾಗಿ ವಾರ್ಷಿಕ ಆದಾಯವು 10 ಲಕ್ಷವಿದ್ದರೆ, 3 ರಿಂದ 6 ಲಕ್ಷದವರೆಗೂ ಆದಾಯ ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಇದಕ್ಕಾಗಿ ನೀವು, ಹಲವು ಬಗೆಯ ಉಳಿತಾಯ ಯೋಜನೆಗಳು, ವಿಮೆಗಳನ್ನು ಪಡೆದಿದ್ದರೆ, ಸಹಕಾರಿಯಾಗುತ್ತದೆ. ಹೊಸ ತೆರಿಗೆ ಪದ್ಧತಿ ಪ್ರಕಾರ 7 ಲಕ್ಷ ಆದಾಯ ಪಡೆಯುತ್ತಿರುವವರು ತೆರಿಗೆಯನ್ನು ವಿಧಿಸುವಂತಿಲ್ಲ.