ಬೆಂಗಳೂರು, ಜು. 15 : ಆಸ್ತಿಯ ಮೇಲೆ ಹೂಡಿಕೆ ಮಾಡುವಾಗ ಯಾವಾಗಲೂ ಲೆಕ್ಕಾಚಾರ ಹಾಕಬೇಕು. ಹಣಕಾಸು, ಖರೀದಿ ಮಾಡುತ್ತಿರುವ ಜಾಗ, ಅದರಿಂದ ತಮಗೆ ಮುಂದಿನ ದಿನಗಳಲ್ಲಿ ಸಿಗುವ ರಿಟರ್ನ್ಸ್ ಸೇರಿದಂತೆ ಎಲ್ಲದರ ಬಗೆಯೂ ಪ್ಲಾನ್ ಮಾಡಿ ಮುಂದುವರೆಯಬೇಕು. ಯಾವುದನ್ನು ಖರೀದಿಸಿದರೆ ಲಾಭ, ಯಾವುದರಿಂದ ನಷ್ಟ. ದೀರ್ಘಾವಧಿ ಹೂಡಿಕೆಯಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂದು ತಿಳಿಯಬೇಕು.
ನಿರ್ಮಾಣ ಹಂತದಲ್ಲಿ ಇರುವಾಗಲೇ ನಿರ್ವಹಣಾ ಶುಲ್ಕ, ಸಾಲದ ಬಡ್ಡಿ, ಆಸ್ತಿ ತೆರಿಗೆ ವೆಚ್ಚಗಳನ್ನು ಲೆಕ್ಕ ಹಾಕಬೇಕು. ಇನ್ನು ಭಾರತದ ರಿಯಲ್ ಎಸ್ಟೇಟ್ ನ ವರದಿಯ ಪ್ರಕಾರ, ನಿರ್ಮಾಣ ಹಂತದ ಕಟ್ಟಡ ಅಥವಾ ಮನೆಯನ್ನು ಖರೀದಿಸುವುದರಿಂದ ಹೆಚ್ಚು ರಿಟರ್ನಸ್ ಅನ್ನು ಪಡೆಯಬಹುದು. ಯಾಕೆಂದರೆ, ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಡೆವಲಪರ್ ಗಳು ಆಫರ್ ಬೆಲೆಗಳನ್ನು ನೀಡಿರುತ್ತಾರೆ. ಇದರಿಂದ ನಿರ್ಮಾಣ ಕಾರ್ಯ ಪೂರ್ಣಗೊಂಡ ಮೇಲೆ ಅದರ ಬೆಲೆ ಹೆಚ್ಚಾಗುತ್ತದೆ.
ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿಸುವುದರಿಂದ ಮನೆಯ ವಿನ್ಯಾಸ ಹಾಗೂ ಕೆಲ ಸೌಕರ್ಯಗಳನ್ನು ನಮಗೆ ಬೇಕಾದಂತೆ ನಿರ್ಮಿಸಿಕೊಳ್ಳಲು ಅವಕಾಶವಿರುತ್ತದೆ. ಅಲ್ಲದೇ, ನಿರ್ಮಾಣ ಹಂತದಲ್ಲಿರುವಾಗಲೇ ಖರೀದಿ ಮಾಡಿದರೆ, ಇದನ್ನು ನಿರ್ವಹಣೆ ಮಾಡುವುದು ಕೂಡ ಸುಲಭವಾಗಿರುತ್ತದೆ. ಇದರಿಂದ ಫ್ಲೆಕ್ಸಿಬಿಲಿಟಿ ಹೆಚ್ಚಾಗಿರುತ್ತದೆ. ಖರ್ಚು ಕೂಡ ತಗ್ಗುತ್ತದೆ. ನಿರ್ಮಾಣದ ಖರ್ಚು ಹೆಚ್ಚು ಇರುವುದಿಲ್ಲ. ಲೋನ್ ಕೂಡ ಒಂದೇ ಬಾರಿಗೆ ಮಾಡಿದಂತೆ ಆಗುತ್ತದೆ.
ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿಸಿದಾಗ, ಪ್ಲಾನ್ ಗಳು ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ನಿರ್ಮಾಣ ಮುಗಿಯುವ ಸಮಯ ಹೆಚ್ಚಾಗಬಹುದು. ಇದರಿಂದ ಮನೆ ಶಿಫ್ಟ್ ಆಗುವುದಕ್ಕೆ ಕಷ್ಟವಾಗಬಹುದು. ಇನ್ನು ನಿರ್ಮಾಣಗೊಂಡ ಮನೆಯನ್ನು ಖರೀದಿಸಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಸಂಪೂರ್ಣವಾಗಿ ಪ್ಲಾನ್ ಪ್ರಕಾರವೇ ನಡೆಯುತ್ತದೆ. ನಿರ್ಮಾಣಗೊಂಡ ಮನೆಯಿಂದಲೂ ಲಾಭ ದೊರಕುತ್ತದೆ.