22.7 C
Bengaluru
Monday, December 23, 2024

ಬೆಂಗಳೂರಿನಲ್ಲಿ ಮನೆ ಖರೀದಿಸುವ ಯೋಚನೆ ಇದೆಯೇ? ಹಾಗಾದರೆ ಇಲ್ಲಿದೆ ಸೂಕ್ತ ಜಾಗಗಳ ಸಂಪೂರ್ಣ ಮಾಹಿತಿ

ಐಟಿ ರಾಜಧಾನಿ ಎಂದೇ ಕರೆಸಿಕೊಂಡಿರುವ ಬೆಂಗಳೂರು ನಗರವು ಉದ್ಯೋಗಸ್ಥರಿಗೆ ಹಾಗೂ ನಗರಜೀವನಶೈಲಿ ಬಯಸುವ ಮಂದಿಗೆ ಆಕರ್ಷಿತ ಹಾಗೂ ಸೂಕ್ತ ಜಾಗ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ನಗರವು ವೇಗವಾಗಿ ವಸತಿ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

ಜನಸಂಖ್ಯೆ ಹೆಚ್ಚಳ, ವಸತಿ ಹಾಗೂ ಉದ್ಯೋಗಾವಕಾಶಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗುತ್ತಿದ್ದಂತೆ ಬೆಂಗಳೂರು, ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ಹಾಗೂ ಮನೆ ಖರೀದಿದಾರರ ಹಾಟ್‌ ಡೆಸ್ಟಿನೇಷನ್‌ ಆಗಿದೆ. ಕೈಗೆಟಕುವ ದರದಲ್ಲಿ ಆಯ್ಕೆ ಹಾಗೂ ಜನರ ಬಜೆಟ್‌ಗೆ ತಕ್ಕಂತೆ ಇಲ್ಲಿ ಮನೆ, ಅಪಾರ್ಟ್‌ಮೆಂಟ್‌, ವಿಲ್ಲಾ ಖರೀದಿಗೆ ವಿಪುಲ ಅವಕಾಶಗಳು ಇರುವುದರಿಂದ ಎಲ್ಲಾ ವರ್ಗದ ಜನರಿಗೆ ಇದು ನೆಚ್ಚಿನ ತಾಣವಾಗಿದೆ.

ನಗರ ಅಭಿವೃದ್ಧಿಯಾಗುತ್ತಿದ್ದಂತೆ ನಗರದ ಹೊರವಲಯದ ಕೆಲವೊಂದು ಪ್ರದೇಶಗಳು ಕಡಿಮೆ ಬಜೆಟ್‌ಗೂ ಪೂರಕವಾಗಿರುವುದರಿಂದ ಅಂತಹ ಸ್ಥಳಗಳ ಮೇಲೆ ಹೊಸ ಖರೀದಿದಾರರು ದೃಷ್ಟಿ ನೆಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮನೆ ಖರೀದಿಗೆ ಬೇಡಿಕೆ ಹೊಂದಿರುವ, ಕೈಗೆಟಕುವ, ಆಕರ್ಷಿಕ ದರದಲ್ಲಿ ಮನೆ ಖರೀದಿ ಮಾಡಬಹುದಾದ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ

ಚಂದಾಪುರ
ವಸತಿ ಯೋಗ್ಯವಾದ ಉಪನಗರವಿದು. ಅಪಾರ್ಟ್‌ಮೆಂಟ್‌, ಸ್ವಂತ ಮನೆ ಕೊಂಡುಕೊಳ್ಳುವ ಕನಸುವುಳ್ಳವರಿಗೆ ಅವರ ಕೈಗೆಟಕುವ ದರದಲ್ಲಿ ನಾನಾ ಆಯ್ಕೆಗಳು ಇಲ್ಲಿವೆ. ಇಲ್ಲಿ ಮನೆ ಖರೀದಿಗೆ ಬೇಡಿಕೆ ಯಾಕೆಂದರೆ ಚಂದಾಪುರವು ‘ಐಟಿ ಹಬ್‌’ ಎಂದು ಪ್ರಸಿದ್ಧವಾಗಿರುವ ಎಲೆಕ್ಟ್ರಾನಿಕ್‌ ಸಿಟಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಹಾಗೇ ರಾಷ್ಟ್ರೀಯ ಹೆದ್ದಾರಿ–7, ಏರ್‌ಫೋರ್ಟ್‌, ಮೆಟ್ರೊ ಸ್ಟೇಷನ್‌, ರೈಲ್ವೆ ಸ್ಟೇಷನ್‌ಗೆ ಹತ್ತಿರವಾಗಿರುವುದರಿಂದ ಎಲ್ಲಾ ಕಡೆಗಳಿಂದ ಜನರಿಗೆ ಯೋಗ್ಯವಾಗಿದೆ. ಈಗ ರಿಯಲ್ ಎಸ್ಟೇಟ್‌ನ ಖ್ಯಾತ ಡೆವಲಪರ್‌ಗಳು ಇಲ್ಲಿ ಇಂಡಿಪೆಂಡೆಂಟ್‌ ವಿಲ್ಲಾಗಳ ಜೊತೆಗೆ ಬಹುಮಹಡಿ ಅಪಾರ್ಟ್‌ಮೆಂಟ್‌ ಮೇಲೂ ಅನೇಕ ಆಫರ್‌ಗಳನ್ನು ನೀಡುತ್ತಿದ್ದಾರೆ. ಇಲ್ಲಿ ಚದರ ಕಿ.ಮೀಗೆ 2,500ರಿಂದ 3,300ರವರೆಗೆ ಬೆಲೆ ನಿಗದಿ ಇದೆ. 1ಬಿಎಚ್‌ಕೆ ಬೆಲೆ ₹25–30 ಲಕ್ಷವಿದ್ದರೆ, 2 ಬಿಎಚ್‌ಕೆ ಬೆಲೆ 30ರಿಂದ 40 ಲಕ್ಷಗಳಿವೆ.

ಕೆಂಗೇರಿ
ಬೆಂಗಳೂರಿನಲ್ಲಿ ಸ್ಯಾಟಲೈಟ್‌ ಟೌನ್‌ ಎಂದೇ ಹೆಸರಾಗಿರುವ ಕೆಂಗೇರಿಯು ಪೂರ್ವ ಬೆಂಗಳೂರಿನ ಪ್ರಮುಖ ಸ್ಥಳ. ಈ ಪ್ರದೇಶವು ಮೈಸೂರು ರಸ್ತೆ, ನೈಸ್‌ ರಸ್ತೆ, ಹೊರ ವರ್ತುಲ ರಸ್ತೆಯನ್ನು ಸುಲಭವಾಗಿ ಸಂಪರ್ಕಿಸುವುದರಿಂದ ಇಲ್ಲಿ ಮನೆ, ಅಪಾರ್ಟ್‌ಮೆಂಟ್‌ ಹೊಂದಲು ಜನ ಇಷ್ಟಪಡುತ್ತಾರೆ. ಅಗತ್ಯ ಮೂಲಸೌಕರ್ಯ, ಮಾರುಕಟ್ಟೆ ಹಾಗೂ ನಗರದ ಪ್ರಮುಖ ಜಾಗಗಳಿಗೆ ಸಂಪರ್ಕ ಹೊಂದುವುದರಿಂದ ಕೆಂಗೇರಿಯಲ್ಲಿ ರಿಯಲ್‌ ಎಸ್ಟೇಟ್ ಡೆವಲಪರ್‌ಗಳು ಹಾಗೂ ಗುಣಮಟ್ಟದ ಮನೆ ಹೊಂದುವವರಿಗೆ ಇದು ಯೋಗ್ಯವಾದ ಸ್ಥಳವಾಗಿದೆ. ಹಾಗೇ ಕೈಗೆಟಕುವ ದರದಲ್ಲಿ ಮನೆಗಳ ಆಯ್ಕೆಗಳಿವೆ. ಈಗ ‘ನಮ್ಮ ಮೆಟ್ರೋ’ ಸಂಪರ್ಕವು ಕೆಂಗೇರಿಗೆ ಮತ್ತೊಂದು ಪ್ಲಸ್‌ ಪಾಯಿಂಟ್‌. ಇಲ್ಲಿ ಒನ್‌ ಬಿಎಚ್‌ಕೆ ಬೆಲೆ 30 ಲಕ್ಷದಿಂದ ಆರಂಭವಾದರೆ, 2 ಬಿಎಚ್‌ಕೆ ಬೆಲೆ 50 ಲಕ್ಷದಿಂದ ಆರಂಭ.

ಸರ್ಜಾಪುರ
ಈ ಪ್ರದೇಶವು ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಬೈಪಾಸ್‌ ರಸ್ತೆ ಹಾಗೂ ನಗರದ ಬೇರೆ ಬೇರೆ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು ಕೊಂಡಿಯಾಗಿದ್ದು, ಬೆಂಗಳೂರಿನಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಟೌನ್‌ಗಳಲ್ಲಿ ಇದೂ ಒಂದಾಗಿದೆ. ಈ ಪ್ರದೇಶವು ವಸತಿ ಯೋಜನೆ ಹಾಗೂ ಹೂಡಿಕೆ ವಿಚಾರದಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇಲ್ಲಿ ಮಲ್ಟಿಪ್ಲೆಕ್ಸ್‌, ಸೂಪರ್‌ ಮಾರ್ಕೆಟ್‌, ಮಾಲ್‌, ಶಿಕ್ಷಣಸಂಸ್ಥೆಗಳು ಈ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದು, ಎಲ್ಲಾ ವರ್ಗದ ಜನ, ಖರೀದಿದಾರರು ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ಸಾಹ ತೋರುತ್ತಿದ್ದಾರೆ. ಇಲ್ಲಿಯೂ ಒನ್‌ಬಿಎಚ್‌ಕೆ ಬೆಲೆ 30 ಲಕ್ಷದಿಂದ ಆರಂಭ. ಇನ್ನು ಸರ್ಜಾಪುರದಲ್ಲಿ ಚದರ ಕಿ.ಮೀ ಬೆಲೆ 3,300ರಿಂದ ಆರಂಭವಾದರೆ, ಸರ್ಜಾಪುರ ರಸ್ತೆ ಸುತ್ತಮುತ್ತ ಚದರ ಕಿ.ಮೀ ಬೆಲೆ 4,400ರಿಂದ ಆರಂಭ. ಸರ್ಜಾಪುರ– ಅತ್ತಿಬೆಲೆ ರಸ್ತೆಯಲ್ಲಿ 2,600ರಿಂದ ಶುರು.

ಯಲಹಂಕ– ದೊಡ್ಡಬಳ್ಳಾಪುರ ರಸ್ತೆ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ ನಂತರ ಈ ಪ್ರದೇಶವು ಅತಿ ವೇಗವಾಗಿ ಬೆಳವಣಿಗೆಯಾಗುತ್ತಾ ಸಾಗುತ್ತಿದೆ. ಬಿಎಂಟಿಸಿ ಬಸ್‌ ಸೌಕರ್ಯ ಈ ಪ್ರದೇಶದಲ್ಲಿ ಚೆನ್ನಾಗಿರುವುದರಿಂದ ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಮೆಜೆಸ್ಟಿಕ್‌ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ಸುಗಮವಾಗಿ ಸಂಚಾರ ಮಾಡಬಹುದು. ಇಲ್ಲಿ 1 ಬಿಎಚ್‌ಕೆ ಬೆಲೆ 40 ಲಕ್ಷದಿಂದ ಆರಂಭ. ಈ ಪ್ರದೇಶದ ಸುತ್ತಮುತ್ತ ಅನೇಕ ಅಪಾರ್ಟ್‌ಮೆಂಟ್‌ ಯೋಜನೆಗಳು ಇದ್ದು, ಕೈಗೆಟಕುವ ದರದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಬಹುದು.

ಹೊಸಕೋಟೆ
ಇದು ನವ ಬೆಂಗಳೂರು ಎಂದೇ ಈಗ ಖ್ಯಾತ. ರಾಷ್ಟ್ರೀಯ ಹೆದ್ದಾರಿ 207 ಹಾಗೂ 4ನ್ನು ಇದು ಸಂಧಿಸುವುದರಿಂದ ನಗರದ ಮತ್ತೊಂದು ಭರವಸೆಯ ರಿಯಲ್‌ ಎಸ್ಟೇಟ್ ತಾಣವಾಗಿದೆ. ಇಲ್ಲಿ ಐಟಿ ಕಂಪೆನಿಗಳು ಆರಂಭವಾಗಿರುವುದರಿಂದ ಈ ಪ್ರದೇಶದಲ್ಲಿ ರಿಯಾಲ್ಟಿ ಕ್ಷೇತ್ರವು ಕ್ಷಿಪ್ರವಾಗಿ ಬೆಳವಣಿಗೆಯಾಗುತ್ತಿದೆ. ಇಲ್ಲಿಯೂ 1ಬಿಎಚ್‌ಕೆ ಬೆಲೆ 30 ಲಕ್ಷದಿಂದ ಶುರುವಾದರೆ, 2 ಬಿಎಚ್‌ಕೆ 40 ಲಕ್ಷಕ್ಕೆ ಖರೀದಿ ಮಾಡಬಹುದು.

Related News

spot_img

Revenue Alerts

spot_img

News

spot_img