23.6 C
Bengaluru
Thursday, December 19, 2024

ನಿಮ್ಮ ವಯಸ್ಸು 40ರ ಆಸು-ಪಾಸಿನಲ್ಲಿದೆಯಾ..? ಹಾಗಾದರೆ ಈ ಸುದ್ದಿಯನ್ನು ಮಿಸ್‌ ಮಾಡದೇ ನೋಡಿ..

ಬೆಂಗಳೂರು, ಮೇ. 29 : ಮನುಷ್ಯನಿಗೆ ವಯಸ್ಸಾದಷ್ಟೂ ಜವಾಬ್ದಾರಿಗಳು ಹೆಚ್ಚಾಗುತ್ತಿರುತ್ತವೆ. ಮದುವೆ, ಮಕ್ಕಳು, ಆರೋಗ್ಯ ಹೀಗೆ ಎಲ್ಲದರ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಇನ್ನು ವಯಸ್ಸು 40 ಆಯ್ತು ಎಂದರಂತೂ ಹೇಳುವಂತೇ ಇಲ್ಲ. ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಹೀಗಾಗಿ ಆರೋಗ್ಯ ವಿಮೆಯನ್ನು ಮಾಡಿಸಬೇಕು. ಬಳಿಕ ಮುಂದಿನ ಬದುಕಿನ ಹಣಕಾಸಿನ ಬಗ್ಗೆ ಪ್ಲಾನ್‌ ಇರಬೇಕು. ಮಕ್ಕಳ ಓದಿಗೆ ಸಮಸ್ಯೆಗ ಆಗದಂತೆ ನೋಡಿಕೊಳ್ಳಬೇಕು. ಇರುವ ದುಡಿಮೆಯಲ್ಲಿ 40ರ ಆಸು ಪಾಸಿನವರು ಏನೆಲ್ಲಾ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ..

ವಯಸ್ಸಾದಂತೆ ಹಣ ಕಾಸಿನ ರಿಸ್ಕ್‌ ತೆಗೆದುಕೊಲ್ಳುವ ಸಾಮರ್ಥ್ಯ ಮನುಷ್ಟುನಲ್ಲಿ ಕುಗ್ಗುತ್ತಾ ಹೋಗುತ್ತದೆ. ಹಾಗಾಗಿ 40 ವರ್ಷವಾಗುವ ಮುನ್ನವೇ ಆರೋಗ್ಯ ವಿಮೆ ಕವರೇಜ್‌ ಪಡೆಯುವುದು ಸೂಕ್ತ. ನಂತರವೆಂದರೆ, ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಆಗ ಮತ್ತಷ್ಟು ಕರ್ಚಿನ ಜೊತೆಗೆ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ, ವಿಮೆಯ ಸಂಪೂರ್ಣ ಲಾಭ ಪಡೆಯಲಾಗುವುದಿಲ್ಲ. ಹಾಗಾಗಿ ಆದಷ್ಟು Eಬಗನೇ ಆರೋಗ್ಯ ವಿಮೆಯನ್ನು ಮಾಡಿಸುವುದು ಸೂಕ್ತ.

ತುರ್ತು ನಿಧಿಯನ್ನು ಈ ಸಂದರ್ಭದಲ್ಲಿ ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ಅಕಸ್ಮಾತ್‌ ಆಗಿ ಯಾವುದಾದರೂ ಸಮಸ್ಯೆ ಕಾಣಿಸಿಕೊಂಡರೆ, ಅದಕ್ಕೆ ಹಣ ಹೊಂದಿಸಲು ಪರದಾಡುವ ಗೋಜು ಇರುವುದಿಲ್ಲ. ಆಕಸ್ಮಿಕ ಕರ್ಚಿಗೆ ತುರ್ತು ನಿಧೀ ಬಹಳ ಮುಖ್ಯವಾಗುತ್ತದೆ. ಇನ್ನು ಜೀವ ವಿಮೆ. ಈ ಸಂದರ್ಭದಲ್ಲಿ ಜೀವ ವಿಮೆಯನ್ನು ಹೊಂದಿರುವುದು ಬ ಹಳ ಮುಖ್ಯವಾಗುತ್ತದೆ. ಇದರಿಂದ ನಿಮ್ಮ ನಿವೃತ್ತಿ ಬದುಕಿಗೆ ಸಹಾಯವಾಗುತ್ತದೆ.

ಹಣವನ್ನು ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಇರಲಿ. ಕೈಲಾದಷ್ಟು ಹಣವನ್ನು ಮಾರುಕಟ್ಟೆ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ. ಇದರಿಂದ ನಿಮ್ಮ ಹಣ ನಿಮಗೆ ತಿಳಿಯದಂತೆ ಬೆಳೆಯುತ್ತಿರುತ್ತದೆ. 40 ರ ಆಸು ಪಾಸಿಗೆ ಬರುವ ವೇಳೆಗೆ ಆದಷರ್ಟು ಒಂದಷ್ಟು ಹಣವನ್ನು ಎಫ್‌ ಡಿ ಮಾಡುವುದು, ಮ್ಯೂಚ್ಯುವಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇನ್ನು ನಿಮ್ಮ ಆಸ್ತಿಯ ಬಗ್ಗೆ ವಿಲ್‌ ಮಾಡಿದ್ದಲ್ಲಿ ಅದನ್ನೊಮ್ಮೆ ಪರಿಶೀಲಿಸುವುದು ಸೂಕ್ತ.

Related News

spot_img

Revenue Alerts

spot_img

News

spot_img