22.9 C
Bengaluru
Friday, July 5, 2024

ಅಪಾರ್ಟ್‌ ಮೆಂಟ್‌ ಗಳಲ್ಲಿ ದೇವರ ಮನೆ ಇಲ್ಲದಿದ್ದರೆ, ಹೀಗೆ ಮಾಡಿ..

ಬೆಂಗಳೂರು, ಜ. 16 : ನಗರಗಳಲ್ಲಿ ಎಲ್ಲಾ ಜನಾಂಗದ ಜನರು ವಾಸ ಮಾಡುತ್ತಾರೆ. ಆದರೆ, ಕೆಲವರಿಗೆ ಮನೆಯಲ್ಲಿ ದೇವರ ಕೋಣೆಗಾಗಿ ಬೇರೊಂದು ಜಾಗವನ್ನು ಮೀಸಲಿಡಬೇಕು ಎನಿಸದು. ಇನ್ನು ಬಾಡಿಗೆಗೆ ಗಳಿಗಾಗಿಯೇ ಮನೆ ನಿರ್ಮಿಸುವವರು ಕೂಡ ಪ್ರತ್ಯೇಕವಾದ ದೇವರ ಕೋಣೆಯನ್ನು ನಿರ್ಮಿಸುವುದಿಲ್ಲ. ಆದರೆ, ಕೆಲವರಿಗೆ ದೇವರ ಕೋಣೆ ಇಲ್ಲದಿದ್ದರೆ, ಮನೆಯನ್ನೇ ಇಷ್ಟಪಡುವುದಿಲ್ಲ. ಬಾಡಿಗೆ ಮನೆ ಎಂದರೆ ಹೇಗೋ ಅಡ್ಜಸ್ಟ್‌ ಮಾಡಿಕೊಳ್ಳುತ್ತಾರೆ. ಕೆಲವರಿಗೆ ಇದು ಸಾಧ್ಯವಿಲ್ಲ. ಇನ್ನು ಅಪಾರ್ಟ್‌ ಮೆಂಟ್‌ ಗಳಲ್ಲೂ ಈಗ ದೇವರ ಮನೆಯನ್ನು ನಿರ್ಮಿಸುವುದು ತೀರಾ ಅಪರೂಪವಾಗಿದೆ. ಮನೆಯನ್ನು ಖರೀದಿಸುವವರು ತಮಗೆ ಬೇಕಾದ ಹಾಗೆ ವಿನ್ಯಾಸ ಮಾಡಿಕೊಳ್ಳಲಿ ಎಂದು ಬಿಟ್ಟು ಬಿಡುತ್ತಾರೆ.

 

ಇತ್ತೀಚೆಗೆ ನಗರಗಳಲ್ಲಿ ಅಪಾರ್ಟ್‌ಮೆಂಟ್ಗಳ ಸಂಕ್ಯೆ ಎಣಿಸಲಾಗದಷ್ಟು ಹೆಚ್ಚಾಗುತ್ತಿದೆ, ಜನರು ಕೂಡ ನಗರಗಳಲ್ಲಿ ಅಪಾರ್ಟ್‌ಮೆಂಟ್ ಬೆಸ್ಟ್‌ ಎನ್ನುತ್ತಾರೆ. ಈ ಅಪಾರ್ಟ್‌ ಮೆಂಟ್‌ ಗಳಲ್ಲಿ ದೇವರ ಕೋಣೆಯೂ ಇರುವುದಿಲ್ಲ. ಆದರೆ ಹಿಂದೂಗಳಿಗೆ ದೇವರ ಕೋಣೆ ಇದ್ದರೆ ಚೆನ್ನ. ದೇವರ ಕೋಣೆಗೆ ಪ್ರಾಮುಖ್ಯತೆ ಕೊಡುವವರು ರೆಡಿಮೇಡ್‌ ದೇವರ ಕೋಣೆಯನ್ನು ಖರೀದಿಸಿ, ಮನೆಯಲ್ಲಿ ಇಷ್ಟ ಬಂದ ದಿಕ್ಕಿನಲ್ಲಿ ಇರಿಸಬಹುದು. ಈಗ ಮರದ ದೇವರ ಖೋಣೆಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಿರಲಾಗುತ್ತದೆ. ಇದರಲ್ಲಿ ನಿಮ್ಮ ಮನೆಗೆ ಸೂಕ್ತ ಎನಿಸುವ ದೇವರ ಕೋಣೆಯನ್ನು ಆಯ್ಕೆ ಮಾಡಹುದು.

ಹಾಗಾದರೆ ಬನ್ನಿ ಈ ದೇವರ ಕೋಣೆಯನ್ನು ಅಪಾರ್ಟ್ ಮೆಂಟ್ ಗಳಲ್ಲಿ ಎಲ್ಲಿ ಇಡಬೇಕು. ಹೇಗೆ ವಿನ್ಯಾಸಗೊಳಿಸಬೇಕು. ಯಾವ ರೀತಿಯಲ್ಲಿ ದೇವರ ಕೋಣೆಯನ್ನು ನಿರ್ಮಿಸಬೇಕು ಎಂದು ತಿಳಿಯೋಣ.

ಕೆಲ ಅಪಾರ್ಟ್ ಮೆಂಟ್ ಗಳಲ್ಲಿ ಅಡುಗೆ ಮನೆ ತುಂಬಾ ವಿಶಾಲವಾಗಿರುತ್ತದೆ. ಅಲ್ಲದೇ, ಓಪನ್ ಕಿಚನ್ ಇರುತ್ತದೆ. ಇಂತಹ ಅಡುಗೆ ಮನೆ ಇರುವ ಅಪಾರ್ಟ್ ಮೆಂಟ್ ಗಳಲ್ಲಿ ದೇವರ ಮನೆಯನ್ನು ವಿನ್ಯಾಸಗೊಳಿಸಬಹುದು. ಅಡುಗೆ ಮನೆಗೆ ಎಂಟ್ರಿಯಾಗು ಕಡೆ ಗೋಡೆ ಖಾಲಿ ಇದ್ದರೆ, ಅಥವಾ ಅಡುಗೆ ಮನೆಯ ಶೆಲ್ಫ್ ತುಂಬಾ ಉದ್ದಗಿದ್ದರೆ, ಎರಡು ಗೋಡೆ ನಡುವಿನ ಸ್ಥಳದಲ್ಲಿ ಅರಾಮವಾಗಿ ದೇವರ ಕೋಣೆಯನ್ನು ಮಾಡಿಕೊಳ್ಳಬಹುದು. ಇದನ್ನು ಬಾಗಿಲು ಇಲ್ಲದ ಓಪನ್ ದೇವರ ಕೋಣೆಯಾಗಿರುತ್ತದೆ. ಶೆಲ್ಫ್ ಇರುವ ಕಾರಣ ವಯಸ್ಸಾದವರಿಗೆ ಬಗ್ಗಿ ದೇವರ ಪೂಜೆ ಮಾಡಬೇಕು ಎಂಬ ಕಷ್ಟವೂ ಇರುವುದಿಲ್ಲ.

 

ಇಲ್ಲವೇ ಯಾವುದಾದರೂ ಒಂದು ಗೋಡೆ ಖಾಲಿ ಇರುತ್ತದೆ. ಆ ಜಾಗದಲ್ಲೂ ನೀವು ದೇವರ ಕೋಣೆಯನ್ನು ಇಡಬಹುದು. ಮರದ ಹಲಗೆಗಳನ್ನು ಬಳಸಿ, ಆಕರ್ಷಕವಾಗಿ ನಿಮ್ಮ ದೇವರ ಕೋಣೆಯನ್ನು ವಿನ್ಯಾಸಗೊಳಿಸಲು ನಿಮಗೆ ಅವಕಾಶವಿರುತ್ತದೆ. ಆಗ ಖಾಲಿ ಗೋಡೆಯ ಜಾಗವೂ ಎದ್ದು ಕಾಣುತ್ತದೆ. ಇಲ್ಲವೇ ಈ ಖಾಲಿ ಗೋಡೆಗೆ ನೀವು ರೆಡಿಮೆಡ್ ದೇವರ ಕೋಣೆಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅವನ್ನು ಖರೀದಿಸಿ ತಂದು ಇರಿಸಬಹುದು. ನಂತರ ಇದನ್ನು ಅಲಂಕರಿಸಿ ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇಲ್ಲವೇ ಮನೆಯ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಪೂಜಾ ಕೊಠಡಿಯನ್ನು ಇರಿಸಬಹುದು. ಮೂಲೆಯಲ್ಲಿ ದೇವರ ಕೋಣೆಯನ್ನು ಇರಿಸಿದರೆ, ಮನೆಯ ಹೆಚ್ಚಿನ ಜಾಗವೂ ಆಕ್ರಮಿಸಿಕೊಳ್ಳುವುದಿಲ್ಲ.

ಮನೆಯ ಲಿವಿಂಗ್ ರೂಮ್ ನಲ್ಲೂ ದೇವರ ಕೋಣೆ ಇದ್ದರೆ ನೋಡಲು ಆಕರ್ಷಕವಾಗಿರುತ್ತದೆ. ಮಾರುಕಟ್ಟೆಗಳಲ್ಲಿ ಮರ, ಟೈಲ್ಸ್, ಕಲ್ಲುಗಳಿಂದ ತಯಾರಿಸಿದ ದೇವರ ಕೋಣೆ ಲಭ್ಯವಿದೆ. ನಿಮ್ಮ ಮನೆಗೆ ಯಅವುದು ಸೂಕ್ತ ಎನಿಸುತ್ತದೆಯೋ ಅಂತಹ ದೇವರ ಕೋಣೆಯನ್ನು ತರಬಹುದು. ನಿಮಗೆ ಬೇಕಾದ ಹಾಗೆ ಇದನ್ನು ವಿನ್ಯಾಸವನ್ನೂ ಮಾಡಬಹುದು. ಆದರೆ, ನಿಮ್ಮ ಮನೆಗೆ ದೇವರ ಕೋಣೆಯನ್ನು ಆಯ್ಕೆ ಮಾಡುವಾಗ ಕೊಂಚ ಯೋಚಿಸಿ ನಿರ್ಧರಿಸಿ. ಬಜೆಟ್, ವಾಸ್ತು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಸೂಕ್ತ.

Related News

spot_img

Revenue Alerts

spot_img

News

spot_img