27.6 C
Bengaluru
Friday, October 11, 2024

ಪಾರ್ಕಿಂಗ್ ‌ ಲಾಟ್ ‌ನಲ್ಲಿ ವಾಹನ ಕಳವಾದರೆ ಮ್ಯಾನೇಜ್‌ಮೆಂಟ್‌ ಹೊಣೆ – ಗ್ರಾಹಕರ ನ್ಯಾಯಾಲಯ ತೀರ್ಪು!

ಬೆಂಗಳೂರು ಜೂನ್ 2:Consumer Court Verdict : ಪಾರ್ಕಿಂಗ್ ‌ ತಾಣಗಳಲ್ಲಿ ವಾಹನ ನಿಲ್ಲಿಸುವುದಕ್ಕೆ ಹಣ ಪಡೆದು ಆನಂತರ ವಾಹನಕ್ಕೆ ಹಾನಿಯಾದರೆ, ಕಳುವಾದರೆ ನಾವು ಜವಾಬ್ದಾರಿ ಅಲ್ಲ ಎಂದು ಹೇಳುವ ಸಂಸ್ಥೆಗಳಿಗೆ ಗ್ರಾಹಕರ ನ್ಯಾಯಾಲಯ ಬಿಸಿಮುಟ್ಟಿಸಿದೆ. ಪಾರ್ಕಿಂಗ್ ‌ನಲ್ಲಿ ನಿಲ್ಲಿಸಿದ್ದ ಬೈಕ್ ‌ ಕಳೆದುಕೊಂಡಿದ್ದ ಯುವಕನಿಗೆ 1.21ಲಕ್ಷ ರೂ. ಪರಿಹಾರ ಪಾವತಿಗೆ ಆದೇಶ ನೀಡಿದೆ.

ಮಾಲ್ ‌ಗಳ ಪಾರ್ಕಿಂಗ್ ‌ ಲಾಟ್ ‌ಗಳಲ್ಲಿ ವಾಹನ ನಿಲುಗಡೆಗೆ ಹಣ ಸಂಗ್ರಹ ಮಾಡುವವರೇ ವಾಹನ ಕಳವಿಗೆ ಹೊಣೆಗಾರರು ಎಂದು ಗ್ರಾಹಕ ನ್ಯಾಯಾಲಯ ತೀರ್ಪು.ಬೈಕ್ ‌ ಕಳೆದುಕೊಂಡಿದ್ದ ಯುವಕನಿಗೆ 1.21ಲಕ್ಷ ರೂ. ಪರಿಹಾರ ಪಾವತಿಗೆ ಆದೇಶ.ನಿಲುಗಡೆ ತಾಣದಲ್ಲಿ ಹಣ ಪಾವತಿಸಿದ್ದ ಸಂದರ್ಭದಲ್ಲಿ ಗ್ರಾಹಕರ ವಾಹನಕ್ಕೆ ಹಾನಿ ಅಥವಾ ಕಳವಾದರೆ ಅದಕ್ಕೆ ಮ್ಯಾನೇಜ್‌ಮೆಂಟ್‌ ಹೊಣೆ ಎಂದ ನ್ಯಾಯಾಲಯ.

ಮಾಲ್ ‌ಗಳ ಪಾರ್ಕಿಂಗ್ ‌ ಲಾಟ್ ‌ಗಳಲ್ಲಿ ವಾಹನ ನಿಲುಗಡೆಗೆ ಹಣ ಸಂಗ್ರಹ ಮಾಡುವವರೇ ವಾಹನ ಕಳವಿಗೆ ಹೊಣೆಗಾರರು ಎಂದು ಆದೇಶ ನೀಡಿರುವ ಬೆಂಗಳೂರಿನ ಗ್ರಾಹಕರ ನ್ಯಾಯಾಲಯ, ಬೈಕ್ ‌ ಕಳೆದುಕೊಂಡಿದ್ದ ಯುವಕನಿಗೆ 1.21 ಲಕ್ಷ ರೂ. ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.

ಎಚ್‌ಎಸ್‌ಆರ್‌ ಬಡಾವಣೆಯ ನಿವಾಸಿ ಕೆ.ವಿ.ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನಗರದ 4ನೇ ಹೆಚ್ಚುವರಿ ಜಿಲ್ಲಾಮತ್ತು ಗ್ರಾಹಕ ನ್ಯಾಯಾಲಯ, ಈ ಆದೇಶ ನೀಡಿದೆ. ಅರ್ಜಿದಾರರಿಗೆ ಬೈಕ್ ‌ ಕಳವಾಗಿರುವುದಕ್ಕೆ 1,06,288 ರೂ., ನಿರ್ಲಕ್ಷ್ಯದ ವರ್ತನೆಗೆ 10 ಸಾವಿರ ರೂ. ಮತ್ತು ಕೋರ್ಟ್‌ ವೆಚ್ಚ 5 ಸಾವಿರ ರೂ. ಸೇರಿಸಿ 1 ಲಕ್ಷದ 21 ಸಾವಿರದ 288 ರೂ. ಪರಿಹಾರ ಪಾವತಿಸುವಂತೆ ಪಾರ್ಕಿಂಗ್ ‌ ಮ್ಯಾನೇಜ್‌ಮೆಂಟ್‌ ನೋಡಿಕೊಳ್ಳುತ್ತಿದ್ದ ಸೌಲ್‌ ಸ್ಪೇಸ್ ‌ ಸ್ಪಿರಿಟ್‌ ಕಂಪೆನಿಗೆ ಸೂಚನೆ ನೀಡಿದೆ.

ಮಾಲ್‌ನಲ್ಲಿ ವಾಹನ ನಿಲುಗಡೆ ಮಾಡಿದಾಗ ಅದಕ್ಕೆ ಟಿಕೆಟ್‌ ನೀಡಲಾಗಿದೆ. ಆ ಮೂಲಕ ಸೇವೆ ನೀಡುವುದಾಗಿ ಗ್ರಾಹಕರ ಜತೆ ಒಪ್ಪಂದ ಮಾಡಿಕೊಂಡಂತಾಗಿದೆ ಮತ್ತು ಗ್ರಾಹಕರು ಹಣ ನೀಡಿದ ನಂತರ ಆ ಸೇವೆಯನ್ನು ಒಪ್ಪಿಕೊಂಡಂತಾಗಿದೆ. ಹಾಗಾಗಿ, ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ಅದಕ್ಕೆ ಪರಿಹಾರ ನೀಡಬೇಕೆಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಅಲ್ಲದೆ, ವಾಹನ ಕಳವಾಗಿರುವುದು ಮಾಲ್ ‌ನ ಮ್ಯಾನೇಜ್‌ಮೆಂಟ್‌ ವಶದಲ್ಲಿದ್ದಾಗ. ಗ್ರಾಹಕರ ವಾಹನಕ್ಕೆ ಹಾನಿ ಅಥವಾ ಕಳವಾದರೆ ಅದಕ್ಕೆ ಮ್ಯಾನೇಜ್‌ಮೆಂಟ್‌ ಹೊಣೆಯಾಗುತ್ತದೆ. ಆದ್ದರಿಂದ ಮಾಲ್ ‌ನ ಪಾರ್ಕಿಂಗ್ ‌ ಮ್ಯಾನೇಜ್‌ಮೆಂಟ್‌ ವಹಿಸಿಕೊಂಡಿರುವ ಸಂಸ್ಥೆಯೇ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?
ಎಚ್‌.ಎಸ್‌.ಆರ್‌.ಲೇಔಟ್‌ ನಿವಾಸಿ ಕೆ.ವಿ.ನಾರಾಯಣಸ್ವಾಮಿ ತಮ್ಮ ಕೆಟಿಎಂ ಆರ್‌ಸಿ 200 ಮೋಟರ್ ‌ ಬೈಕ್ ‌ನಲ್ಲಿ 2019ರ ಆ.3ರಂದು ಸೆಂಟ್ರಲ್‌ ಸ್ಪಿರಿಟ್‌ ಮಾಲ್ ‌ಗೆ ಸಿನಿಮಾ ವೀಕ್ಷಣೆಗೆ ತೆರಳಿದ್ದರು. ಅವರು ನಿರ್ದಿಷ್ಟ ಪಾರ್ಕಿಂಗ್ ‌ ಜಾಗದಲ್ಲಿ ಬೈಕ್ ‌ ನಿಲ್ಲಿಸಿ, ಶುಲ್ಕ ಪಾವತಿಸಿ ಸಿನಿಮಾಗೆ ತೆರಳಿದ್ದರು. ಬಳಿಕ ಬಂದು ನೋಡಿದಾಗ ಅವರ ಬೈಕ್ ‌ ಕಾಣಿಸಲಿಲ್ಲ. ಅವರು ಅಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ‘ವಾಹನ ಕಳವು ಅಥವಾ ಹಾನಿಯಾದರೆ ನಾವು ಹೊಣೆಗಾರರಲ್ಲ, ನಮಗೆ ಗೊತ್ತಿಲ್ಲ’ ಎಂದು ಉತ್ತರ ನೀಡಿದ್ದರು.

ಪೊಲೀಸ್‌ ಠಾಣೆಗೆ ದೂರು
ಅದರಿಂದ ಸಿಟ್ಟಿಗೆದ್ದ ಅವರು ಸಮೀಪದ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಆ ಕುರಿತು ಎಫ್‌ಐಆರ್ ‌ ಕೂಡ ದಾಖಲಾಗಿತ್ತು. ಪೊಲೀಸರು, ಮಾಲ್‌ನ ಪಾರ್ಕಿಂಗ್ ‌ ಲಾಟ್ ‌ನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ವಾಹನ ಕಳವಾಗಿದೆ ಎಂದು ಹೇಳಿದ್ದರು. ದೂರುದಾರರು ಮಾಲ್‌ನ ಮ್ಯಾನೇಜ್‌ಮೆಂಟ್‌ ಸೌಲ್‌ ಸ್ಪೇಸ್ ‌ ಸ್ಪಿರಿಟ್‌ಗೆ ಮನವಿ ಸಲ್ಲಿಸಿದರು. ಅವರು ಪಾರ್ಕಿಂಗ್ ‌ ಲಾಟ್ ‌ನಲ್ಲಿದ್ದ ವಾಹನ ಕಳವಾದರೆ ಅದಕ್ಕೆ ಮ್ಯಾನೇಜ್‌ಮೆಂಟ್‌ ಹೊಣೆಯಲ್ಲಎಂಬ ಉಡಾಫೆ ಉತ್ತರ ನೀಡಿದ್ದರು. ಹಾಗಾಗಿ ಅರ್ಜಿದಾರರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣವು ವಾಹನ ಪಾರ್ಕಿಂಗ್ ‌ ಗುತ್ತಿಗೆ ಪಡೆಯುವ ಸಂಸ್ಥೆಗಳು/ ಏಜೆನ್ಸಿಗಳಿಗೆ ಒಂದು ಪಾಠವಾಗಿದ್ದು, ಗ್ರಾಹಕರು/ ವಾಹನ ಸವಾರರಿಗೆ ಸಿಕ್ಕ ಧೈರ್ಯವಾಗಿದೆ.

Related News

spot_img

Revenue Alerts

spot_img

News

spot_img