21.5 C
Bengaluru
Monday, December 23, 2024

IAS Officer Transfer: ರಾಜ್ಯ ಸರ್ಕಾರದ ಆದೇಶ, 4 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ಜೂನ್ 2: ರಾಜ್ಯ ಸರ್ಕಾರ 4 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೈ ಚುರುಕು ಮುಟ್ಟಿಸಿದೆ.ಆರ್ಟಿಕಲ್ಚರ್ ಮತ್ತು ಸಿರಿಕಲ್ಚರ್(ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ) ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ರಾಜೇಂದ್ರ ಕುಮಾರ್ ಕಠಾರಿಯ ಅವರನ್ನು ವರ್ಗಾವಣೆ ಮಾಡಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.2000 ಸಾಲಿನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರನ್ನು ಎಂಸ್‌ಎಂಇ ಮತ್ತು ಮೈನ್ಸ್ ಕಾರ್ಯದರ್ಶಿಯ ಹುದ್ದೆಯಿಂದ ವರ್ಗಾವಣೆ ಮಾಡಿ, ಕೆಪಿಟಿಸಿಎಲ್ ಎಂ.ಡಿಯಾಗಿ ನೇಮಕ ಮಾಡಲಾಗಿದೆ.ಕೆಪಿಟಿಸಿಎಲ್ ಎಂಡಿ ಡಾ.ಮಂಜುಳಾ ಎನ್ ಅವರನ್ನು ವರ್ಗಾವಣೆ ಮಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಯುವಜನ ಸಬಲೀಕರಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ.ಕೃಷಿ ಇಲಾಖೆಯ ಕಮೀಷನರ್ ಶರತ್ ಬಿ ಅವರನ್ನು ವರ್ಗಾವಣೆ ಮಾಡಿ, ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಮತ್ತು ಡ್ರೈನೇಜ್ ಬೋರ್ಡ್(ನೀರು ಸರಬರಾಜು ಮತ್ತು ಒಳಚರಂಡಿ ನಿಗಮ) ಎಂ.ಡಿಯಾಗಿ ನೇಮಕ ಮಾಡಲಾಗಿದೆ.

Related News

spot_img

Revenue Alerts

spot_img

News

spot_img