26.7 C
Bengaluru
Wednesday, January 22, 2025

ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಮರು ತನಿಖೆಗೆ ಕೋರಿ ಮುಖ್ಯಂಮತ್ರಿಗೆ ಪತ್ರ ಬರೆಯುತ್ತೇನೆ- ಕೆಂಪಣ್ಣ

ಬೆಂಗಳೂರು ಜೂನ್ 23: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಕುರಿತು ಮರು ತನಿಖೆಗೆ ಮಾಡಿಸುವಂತಡ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯುತ್ತೇನೆ ಎಂದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ.

ಇಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಆಗಿದ್ದ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ ಸರ್ಕಾರ ಕೊಡಬೇಕಾಗಿರುವ ಬಾಕಿ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಪೂರಕವಾಗಿ ಸ್ಪಂದಿಸಿದ್ದು ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ಇದೆ ಕಾದು ನೋಡಬೇಕಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ

ಗುತ್ತಿಗೆದಾರರ ಸಂತೋಷ್ ಪಾಟೀಲ್ ಸಾವಿನ ಮರು ತನಿಖೆಗೆ ಸಿಎಂಗೆ ಪತ್ರ ಬರೆಯುತ್ತೇನೆ-ಕೆಂಪಣ್ಣ

ಬಳಿಕ ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ರೆವಿನ್ಯೂ ಫ್ಯಾಕ್ಟ್ ನ್ಯೂಸ್ ವಾಹಿನಿಯೊಂದಿಗೆ ಮಾತನಾಡುತ್ತಾ, ರಾಜ್ಯ ಗುತ್ತಿಗೆದಾರರು ಹಣ ಬಿಡುಗಡೆ ವಿಳಂಬ, ಕಳೆದ ಸರ್ಕಾರದ ಸಂಧರ್ಭದಲ್ಲಿ ಆಗಿರುವ 40% ಭ್ರಷ್ಟಾಚಾರದಿಂದ ಗುತ್ತಿಗೆದಾರರು ಸಾಕಷ್ಟು ಮನ ನೊಂದಿದ್ದಾರೆ. ಅದಕ್ಕೆ ಎಲ್ಲರಿಗೂ ಗೊತ್ತಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಸಾಕ್ಷಿ ಆಗಿದೆ ಎಂದಿದ್ದಾರೆ.

ಇನ್ನು ಕಳೆದ ಸರ್ಕಾರದ ಕೆಲವು ಸಚಿವರು ಆಗಿನ ಸಿಎಂ ಅವರನ್ನು ಭೆಟಿ ಮಾಡಲು ನಮ್ಮನ್ನು ಬಿಟ್ಟಿಲ್ಲ ಎನ್ನುವುದರ ಮೂಲಕ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಳಿ ಸಂಪೂರ್ಣ ನಮ್ಮ ಸಮಸ್ಯೆಗಳ ಮನವರಿಕೆ ಮಾಡಲು ಸಾಧ್ಯವಾಗಿಲ್ಲ. ಅಲ್ದೆ ಕೆಲವರು ಗುತ್ತಿಗೆದಾರರಿಂದ ಕೆಲಸ ಮಾಡುವುದಕ್ಕೂ ಮೊದಲೇ ಆಗಿನ ಸರ್ಕಾರದ ಕೆಲ ಸಚಿವರು 40% ಹಣ ವಸೂಲಿಗೆ ಡಿಮಾಂಡ್ ಮಾಡಿದ್ದರು, ಹಾಗೇಯೇ ಸಂತೋಷ್ ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರ ಕಾರಣದಿಂದಾಗಿ,ಸಂತೋಷ್ ಸಾವು ಸಂಭವಿಸಿದೆ ಎಂಬ ಅನುಮಾನ ನಮಗಿದ್ದು, ಸಂತೋಷ್ ಸಾವಿನ ಮರು ತನಿಖೆಗೆ‌ ಕೋತಿ ಈಗಿನ ಮುಖ್ಯಮಂತ್ರಿಗಳಿಗೆ ಮುಂದಿನ ದಿನಗಳಲ್ಲಿ ಪತ್ರ ಬರೆತಯತ್ತೇನೆ ಅದನ್ನು ಸಂಪೂರ್ಣ ತನಿಖಗೆ ಮಾಡಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಮನವಿ ಮಾಡುತ್ತೇನೆ.

ಇನ್ನು ನಾನು ಈವರೆಗೂ ಸಂತೋಷ್ ಕುಟುಂಬ ವನ್ನು ನೇರವಾಗಿ ಭೇಟಿ ಮಾಡಿಲ್ಲ ಮಾಡಿ‌ಮತ್ತಷ್ಟು ಸತ್ಯಾತ್ಯತೆಗಳನ್ನು ತಿಳಿದುಕೊಳ್ಳುತ್ತೇನೆ

ಇನ್ನು ಕಳೆದ ಎರಡು ವರ್ಷಗಳ ಹಿಂದ ಮಾನ್ಯ ಪ್ರಧಾನಿಯವರಿಗೆ ಆಗಿನ ಸರ್ಕಾರದ 40% ಕಮಿಷನ್‌ ಕುರಿತು ಪತ್ರ ಬರೆದಿದ್ದೇ, ಅದಕ್ಕೆ ಈವರೆಗೆ ಯಾವುದೇ ಸಮರ್ಪಕ ಉತ್ತರ ಬಂದಿಲ್ಲ, ಬದಲಾಗಿ ಅಗಿನ ಪ್ರಭಾವಿ ಸಚುವರು ನನ್ನ ಮೇಲೆ ಕೇಸ್ ಬುಕ್ ಮಾಡಿಸಿ ನ್ಯಾಯಾಧೀಶರ ಎದುರು, ತರಾತುರಿಯಲ್ಲಿ ಹಾಜರು ಪಡಿಸಿದ್ರು, ಅಷ್ಟೇ ಅಲ್ಲದ ನನಗೆ ಕೆಲವರ ಕಡೆಯಿಂದ ಫೋನ್ ಕರೆಗಳನ್ನು ಮಾಡಿಸಿ ಸುಮ್ಮನಿರುವಂತೆ ಸೂಚಿಸಿದ್ದರು ಆದ್ರೆ ನಾನು ಯಾವುದಕ್ಕೂ ಹೆದರುವ ಮನುಷ್ಯ ಅಲ್ಲ. ನ್ಯಾಯಕ್ಕಾಗಿ ನನ್ನ ಹೋರಾಟ ನಿರಂತರ ಎನ್ನುತ್ತಿದ್ದಾರೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ..

Related News

spot_img

Revenue Alerts

spot_img

News

spot_img