18.5 C
Bengaluru
Friday, November 22, 2024

100 ಕೋಟಿಗೆ ಬಿಡ್‌ ಆಯ್ತು ಒಂದು ಎಕರೆ ಭೂಮಿ

ಬೆಂಗಳೂರು, ಆ. 07 : ಅಯ್ಯೋ ಇನ್ಮುಂದೆ ಭೂಮಿ ಮತ್ತು ಬಂಗಾರ ಎರಡನ್ನೂ ಖರೀದಿಸುವುದು ಹಲವರಿಗೆ ಕನಸಾಗಬಹುದು. ಹಿಂದಿನ ಕಾಲದಲ್ಲಿ ಭೂಮಿ ಹಾಗೂ ಬಂಗಾರವನ್ನು ಖರೀದಿಸುವ ಆಸೆ ಇದ್ದದ್ದು ಕೆಲವರಿಗೆ ಮಾತ್ರವೇ. ಆದರೆ ಕಳೆದ 25 ವರ್ಷದಲ್ಲಿ ಎಲ್ಲವೂ ಬದಲಾಗಿ ಹೋಗಿತ್ತು. ಪ್ರತಿಯೊಬ್ಬರೂ ಕೂಡ ಭೂಮಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾದರು. ಆಗ ಬಹಳ ವೇಗವಾಗಿ ಬಂಗಾರ ಮತ್ತು ನಿವೇಶನಗಳ ಬೆಲೆ ಗಗನಕ್ಕೇರಿತು.

ಈಗ ಕಳೆದ ಐದು ವರ್ಷದಲ್ಲಂತೂ ಕೇಳುವ ಹಾಗೇ ಇಲ್ಲ. ಅಷ್ಟು ವೇಗವಾಗಿ ಬೆಲೆಗಳು ಏರಿಕೆಯಾಗಿವೆ. ಒಂದು ಕಾಲದಲ್ಲಿ ಭೂಮಿ ಹಾಗೂ ಬಂಗಾರದ ಮೇಲೆ ಆಸಕ್ತಿ ಇಲ್ಲದವರೂ ಕೂಡ ಈಗ ಎಲ್ಲರೂ ಖರೀದಿ ಮಾಡಲು ಮುಂದಾದರು. ಆದರೆ, ಮುಂದೆ ಇವರಡನ್ನು ಖರೀದಿ ಮಾಡುವುದು ನನಸಾಗದ ಕನಸಾಗಿ ಉಳಿಯುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ಹೆಚ್ಚಾಗುತ್ತಿರುವ ಬೆಲೆ. ನಿರೀಕ್ಷಿಸದಷ್ಟು ಮಟ್ಟಕ್ಕೆ ಬೆಲೆ ಏರಿಕೆಯಾಗುತ್ತಿದೆ.

ಭಾರತದ ಈ ಒಂದು ನಗರದಲ್ಲಿ ಬರೋಬ್ಬರಿ ನೂರು ಕೋಟಿ ರೂಪಾಯಿಗೆ ಒಂದು ಎಕರೆ ಮಾರಾಟವಾಗುವಷ್ಟು ಭೂಮಿ ಬೆಲೆ ಹೆಚ್ಚಾಗಿದೆ. ಹೈದರಾಬಾದ್ ನ ಕೋಕಾಪೇಟ್‌ನಲ್ಲಿರುವ 3.6 ಎಕರೆ ಜಾಗ 362 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಹ್ಯಾಪಿ ಹೈಟ್ಸ್ ನಿಯೋಪೊಲಿಸ್‌ಗಾಗಿ ರಾಜಪುಷ್ಪ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಬಿಡ್‌ ಮಾಡಿದೆ. ಈ ಜಮೀನು ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ.

ಕೇವಲ ಮೂವತ್ತು ನಿಮಿಷದಲ್ಲಿ ಏರ್‌ ಪೋರ್ಟ್‌ ಗೆ ತೆರಳಬಹುದು. ಔಟರ್‌ ರಿಂಗ್‌ ರೋಡ್‌ ಸಮೀಪದಲ್ಲೇ ಇದೆ. ಇದರೊಂದಿಗೆ ಹಲವು ಕಾರಣಗಳಿಂದ ಈ ಜಮೀನಿಗೆ ಇಷ್ಟೋಂದು ಬೆಲೆಗೆ ಮಾರಾಟವಾಗಿದೆ. ಒಂದು ಎಕರೆ ಜಮೀನಿಗೆ ನೂರು ಕೋಟಿ ಬೆಲೆ ಇರುವುದು ನಿಜಕ್ಕೂ ಶಾಕಿಂಗ್‌ ವಿಚಾರವೇ ಸರಿ.

Related News

spot_img

Revenue Alerts

spot_img

News

spot_img