ಮುಂಬೈ: ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2023’ರ ವರದಿ ಪ್ರಕಾರ ಭಾರತದಲ್ಲಿ ಬರೋಬ್ಬರಿ 66 ಶತಕೋಟ್ಯಾಧಿಪತಿಗಳು (ಬಿಲಿಯನೇರ್) ಮುಂಬೈ ಒಂದರಲ್ಲೇ ಇದ್ದಾರೆ.ನವದೆಹಲಿ 39 ಬಿಲಿಯನೇರ್’ಗಳ ತವರಾಗಿದ್ದರೇ, ಬೆಂಗಳೂರಲ್ಲಿ 21 ಬಿಲಿಯನೇರ್‌ಗಳು ನೆಲೆಸಿದ್ದಾರೆ ಎಂದು ವರದಿ ಹೇಳಿದೆ.ಭಾರತದಲ್ಲಿ ಒಟ್ಟು 181 ಕುಬೇರರು ಇದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಬಿಲಿಯನೇರ್’ಗಳು ಇರುವ ಮೂರನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ತಿಳಿಸಿದೆ.ಗ್ರಾಹಕ ಸರಕು ಉತ್ಪಾದನೆ ವಲಯದ ನಂತರ ಆರೋಗ್ಯ ಕ್ಷೇತ್ರದಲ್ಲಿನ ಬಿಲಿಯನೇರ್‌ಗಳು ಪಟ್ಟಿಯಲ್ಲಿ ಹೆಚ್ಚಿನ ಸ್ಥಾನದಲ್ಲಿದ್ದಾರೆ.
ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ ಟಾಪ್ 10 ಬಿಲಿಯನೇರ್ಸ್ ಪಟ್ಟಿಯಲ್ಲಿ ಏಕೈಕ ಭಾರತೀಯರಾಗಿದ್ದು, $82 ಬಿಲಿಯನ್ ಸಂಪತ್ತಿನಲ್ಲಿ 20% ಕುಸಿತದ ಹೊರತಾಗಿಯೂ, ಅವರು ಸತತ ಮೂರನೇ ವರ್ಷದಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ.ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಎನ್ನುವ ಗೌರವವನ್ನು ಅದಾನಿ ಗ್ರೂಪ್‌ನ ಗೌತಮ್ ಅದಾನಿ, ವೈಎಸ್‌ಟಿಯ ಝೋಂಗ್ ಶಾನ್ಸನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಭಾರತದಲ್ಲಿ ಒಟ್ಟು 187 ಬಿಲಿಯನೇರ್‌ಗಳು ಇದ್ದಾರೆ. ಈ ಪಟ್ಟಿಗೆ 16 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ವಿಶ್ವದಲ್ಲಿ ಅತೀ ಅಧಿಕ ಬಿಲಿಯನೇರ್‌ಗಳು ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ಮೂಲದ ಬಿಲಿಯನೇರ್‌ಗಳ ಹೆಸರನ್ನು ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಿದರೆ, ಸಂಖ್ಯೆಯು 217ಕ್ಕೆ ಏರಿಕೆಯಾಗುತ್ತದೆ. ಈ 187 ಬಿಲಿಯನೇರ್‌ಗಳು ದೇಶದ 24 ನಗರಗಳಿಗೆ ಸೇರಿದವರು ಆಗಿದ್ದಾರೆ.
ಭಾರತೀಯ ಬಿಲಿಯನೇರ್‌ಗಳಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನವಾಲಾ $27 ಬಿಲಿಯನ್ ಮೌಲ್ಯದ ನಿವ್ವಳದೊಂದಿಗೆ ಮೂರನೇ ಸ್ಥಾನ ಪಡೆದರು, ಶಿವ ನಾಡರ್ ಮತ್ತು ಕುಟುಂಬವು ನಾಲ್ಕನೇ ಸ್ಥಾನವನ್ನು $26 ಬಿಲಿಯನ್ ಮತ್ತು ಲಕ್ಷ್ಮಿ ಮಿತ್ತಲ್ $20 ಬಿಲಿಯನ್. ಇದರ ನಂತರ ಎಸ್‌ಪಿ ಹಿಂದೂಜಾ ಮತ್ತು ಕುಟುಂಬ, ದಿಲೀಪ್ ಸಂಘ್ವಿ ಮತ್ತು ಕುಟುಂಬ, ರಾಧಾಕಿಶನ್ ದಮಾನಿ, ಕುಮಾರ್ ಮಂಗಲಂ ಬಿರ್ಲಾ ಮತ್ತು ಉದಯ್ ಕೊಟಾಕ್ 10 ನೇ ಸ್ಥಾನದಲ್ಲಿದ್ದಾರೆ.ಜಾಗತಿಕ ಶ್ರೇಯಾಂಕದಲ್ಲಿ ಅಂಬಾನಿ 9 ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ 23 ನೇ ಸ್ಥಾನ ಮತ್ತು ಸಿರಸ್ ಎಸ್ ಪೂನವಾಲಾ 46 ನೇ ಸ್ಥಾನದಲ್ಲಿದೆ. ಶಿವ ನಾಡರ್ ಶ್ರೇಯಾಂಕದಲ್ಲಿ 50 ನೇ ಸ್ಥಾನ ಮತ್ತು ಲಕ್ಷ್ಮಿ ಎನ್ ಮಿತ್ತಲ್ 76 ನೇ ಸ್ಥಾನದಲ್ಲಿದ್ದಾರೆ.