26.5 C
Bengaluru
Wednesday, January 22, 2025

ಹುಣ್ಣಿಗೆರೆಯಲ್ಲಿ ವಿಲ್ಲಾಗಳು ರೆಡಿ : ಮಾರಟಕ್ಕೆ ಬೆಲೆ ನಿಗದಿಪಡಿಸಿದ ಬಿಡಿಎ

ಬೆಂಗಳೂರು, ಆ. 26 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತುಮಕೂರು ರಸ್ತೆಯಲ್ಲಿರುವ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಿದೆ. ವಿಲ್ಲಾಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾರಾಟಕ್ಕೆ ಸಿದ್ಧಗೊಂಡಿದೆ. ಈ ವಿಲ್ಲಾಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಬಿಡಿಎ ಈಗ ಮಾರಾಟ ಮಾಡಲು ಸಜ್ಜಾಗಿದ್ದು, ವಿಲ್ಲಾಗಳಿಗೆ ಬೆಲೆಗಳನ್ನು ನಿಗಧಿಪಡಿಸಲಾಗಿದೆ ಎನ್ನಲಾಗಿದೆ. ಸುಮಾರು 80 ರಿಂದ ಒಂದು ಕೋಟಿ ಹತ್ತು ಲಕ್ಷದವರೆಗೂ ಬೆಲೆ ಎಂದು ಹೇಳಲಾಗಿದೆ.

370 ಕೋಟಿ ರೂ. ವೆಚ್ಚದಲ್ಲಿ ಈ ವಿಲ್ಲಾಗಳನ್ನು ಬಿಡಿಎ ನಿರ್ಮಾಣ ಮಾಡಿದೆ. ವಿಲ್ಲಾ ಯೋಜನೆ ಇದೇ ವರ್ಷ ಅಂದರೆ 2023ರ ಜುಲೈ ತಿಂಗಳಿನಲ್ಲಿ ಮಾರಾಟ ಮಾಡಲಾಗುವುದು ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಡಿಎ ನಿರ್ಮಾಣ ಮಾಡಿದ್ದು, ಈ ಮೂಲಕ ವಿಲ್ಲಾ ಹೊಂದಬೇಕು ಎಂಬುವವರ ಕನಸು ನನಸಾಗುವುದು ಹೆಚ್ಚು ದೂರವಿಲ್ಲ. ಬಿಡಿಎ ಮೊದಲ ವಿಲ್ಲಾ ಯೋಜನೆ ಇನ್ನೆರಡು ತಿಂಗಳಿನಲ್ಲಿ ಯಶಸ್ವಿಯಾಗಿ ಸಂಪೂರ್ಣವಾಗಲಿದೆ.

ಹುಣ್ಣಿಗೆರೆಯಲ್ಲಿ ಬಿಡಿಎ 31 ಎಕರೆ ಜಾಗದಲ್ಲಿ ವಿಲ್ಲಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಜಾಗದಲ್ಲಿ ಒಟ್ಟು 170 ವಿಲ್ಲಾಗಳು ನಾಲ್ಕು ಬಿಎಚ್ಕೆಯಲ್ಲಿದೆ. 35*50 ಅಡಿ ಅಳತೆಯಲ್ಲಿ ಇವನ್ನು ನಿರ್ಮಾಣ ಮಾಡಿದೆ. ಇನ್ನು 31 ವಿಲ್ಲಾಗಳನ್ನು ಮೂರು ಬಿಎಚ್ಕೆ ಯಲ್ಲಿದ್ದು, ಇದೂ ಕೂಡ 35*50 ಅಡಿ ಅಳತೆ ಇದೆ. ಮೂರು ಬಿಎಚ್ಕೆಯ 121 ವಿಲ್ಲಾಗಳನ್ನು 30*40 ಅಡಿ ಅಳತೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇವೆಲ್ಲಾ ಅದಾಗಲೇ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಈ ವಿಲ್ಲಾಗಳಲ್ಲಿನ ಪ್ರತಿಯೊಂದು ಘಟಕದಲ್ಲಿಯೂ ಕೂಡ ಪಾರ್ಕಿಂಗ್ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಈ ಜಾಗದಲ್ಲಿ 27 ಉದ್ಯಾನವನಗಳಿದ್ದು, ಎರಡು ರೆಸ್ಟೋರೆಂಟ್ಗಳು ಹಾಗೂ ರೆಸ್ಟೋರೆಂಟ್ ಆವರಣಗಳಲ್ಲಿ ಮನರಂಜನಾ ಕೇಂದ್ರಗಳಿವೆ. 170 4 ಬಿಹೆಚ್’ಕೆ ವಿಲ್ಲಾಗಳಿದ್ದು, 152 3ಬಿಹೆಚ್’ಕೆ ವಿಲ್ಲಾಗಳಿವೆ. ಹಾಗೂ 1 ಬಿಹೆಚ್’ಕೆ ಫ್ಲಾಟ್ಗಳು 320 ಇವೆ. ಈ ಹಿಂದೆ ಬಿಡಿಎ ಆಲೂರಿನಲ್ಲಿ 452 ವಿಲ್ಲಾಗಳನ್ನು ನಿರ್ಮಾಣ ಮಾಡಿತ್ತು. ಈ ವಿಲ್ಲಾಗಳು ಶೇ.100ರಷ್ಟು ಸಂಪೂರ್ಣವಾಗಿ ಮಾರಾಟವಾಗಿವೆ. ಈಗ ಈ ವಿಲ್ಲಾಗಳು ಎಷ್ಟಕ್ಕೆ ಮಾರಾಟವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Related News

spot_img

Revenue Alerts

spot_img

News

spot_img