21.1 C
Bengaluru
Monday, December 23, 2024

ದಸ್ತಾವೇಜುಗಳ ನೋಂದಣಿಗೆ ಮುಂಚೆ ನೋಂದಣಾಧಿಕಾರಿಗಳಿಂದ ವಿಚಾರಣೆ ಹೇಗೆ ನಡೆಯುತ್ತದೆ?

ಬೆಂಗಳೂರು ಜುಲೈ 07: ಸಾಮಾನ್ಯವಾಗಿ ಒಂದು ದಸ್ತಾವೇಜು ನೊಂದಣಿ ಆದ ಮೇಲೆ ಅದರ ಬಗೆಗಿನ ವಿಚಾರಣೆ ನೋಂದಾಣಾಧಿಕಾರಿಗಳ ಮುಂದಾಳತ್ವದಲ್ಲಿ ನಡೆಯುತ್ತದೆ. ಆದರೆ ಕೆಲವು ಬಾರಿ ನೋಂದಣಿಗೆ ಮುಂಚೆ ನೋಂದಣಾಧಿಕಾರಿಯಿಂದ ವಿಚಾರಣೆ ನಡೆಯುತ್ತದೆ. ಅದು ಯಾವ ಯಾವ ವಿಭಾಗಳಲ್ಲಿ ಅಂದರೆ

41, 43, 45, 69, 75, 77, 88 ಮತ್ತು 89ನೇ ಪ್ರಕರಣಗಳಲ್ಲಿ ಅಡಕಗೊಂಡಿರುವ ಉಪಬಂಧಗಳಿಗೆ ಒಳಪಟ್ಟು, ಈ ಅಧಿನಿಯಮದ ಮೇರೆಗೆ ಯಾವುದೇ ದಸ್ತಾವೇಜನ್ನು, ಅಂಥ ದಸ್ತಾವೇಜನ್ನು ಬರೆದುಕೊಡುವ ವ್ಯಕ್ತಿಗಳು ಅಥವಾ ಅವರ ಪ್ರತಿನಿಧಿಗಳು, ಹಸ್ತಾಂತರ ಪಡೆದವರು ಅಥವಾ ಹಿಂದೆ ಹೇಳಿದಂತೆ ಅಧಿಕೃತರಾದ ಏಜೆಂಟರು 23, 24, 25 ಮತ್ತು 26ನೇ ಪ್ರಕರಣದ ಮೇರೆಗೆ ಹಾಜರುಪಡಿಸುವುದಕ್ಕೆ ಅನುಮತಿಸಿದ ಕಾಲದೊಳಗೆ ನೋಂದಣಾಧಿಕಾರಿಯ ಮುಂದೆ ಹಾಜರಾಗದ ಹೊರತು, ನೋಂದಣಿ ಮಾಡತಕ್ಕದ್ದಲ್ಲ:

ಪರಂತು, ಜರೂರು ಅಗತ್ಯತೆ ಅಥವಾ ಅನಿವಾರ್ಯ ಆಕಸ್ಮಿಕದ ಕಾರಣದಿಂದಾಗಿ ಅಂಥ ಎಲ್ಲಾ ವ್ಯಕ್ತಿಗಳು ಹಾಗೆ ಹಾಜರಾಗದಿದ್ದರೆ ರಿಜಿಸ್ಟಾರನು. ಹಾಜರಾಗುವುದರಲ್ಲಿನ ವಿಳಂಬವು ನಾಲ್ಕು ಪ್ರಕರಣದ ಮೇರೆಗೆ
ತಿಂಗಳುಗಳನ್ನು ಮೀರದ ಸಂದರ್ಭಗಳಲ್ಲಿ, ರಿಜಿಸ್ಟಾರನು 25ನೇ ಸಂದಾಯವಾಗಬೇಕಾದ ಜುಲ್ಮಾನೆ ಯಾವುದಾದರೂ ಇದ್ದರೆ, ಅದರ ಜೊತೆಗೆ, ಸರಿಯಾದ ನೋಂದಣಿ ಶುಲ್ಕದ ಮೊಬಲಗಿನ ಹತ್ತರಷ್ಟಕ್ಕೆ ಮೀರದ ಜುಲ್ಮಾನೆಯನ್ನು ಸಂದಾಯ ಮಾಡಿದ ಮೇಲೆದಸ್ತಾವೇಜನ್ನು ನೋಂದಣಿ ಮಾಡಬಹುದೆಂದು ನಿರ್ದೇಶಿಸಬಹುದು.

(2) (1)ನೇ ಉಪ-ಪ್ರಕರಣದ ಮೇರೆಗಿನ ಹಾಜರಾತಿಗಳು ಏಕಕಾಲದಲ್ಲಿರಬಹುದು ಅಥವಾ ಬೇರೆ ಬೇರೆ ಕಾಲಗಳಲ್ಲಿ ಇರಬಹುದು.

(3) ನೋಂದಣಾಧಿಕಾರಿಯು ಅನಂತರ.-
(ಎ) ಅಂಥ ದಸ್ತಾವೇಜನ್ನು ಯಾವ ವ್ಯಕ್ತಿಗಳು ಬರೆದುಕೊಟ್ಟಿರುವರೆಂದು ತಾತ್ಪರ್ಯವಾಗುವುದೋ ಆ ವ್ಯಕ್ತಿಗಳು ಬರೆದುಕೊಟ್ಟಿರುವರೋ ಅಥವಾ ಇಲ್ಲವೋ ಎಂಬ ಬಗ್ಗೆ ವಿಚಾರಣೆ ಮಾಡತಕ್ಕದ್ದು;

(ಬಿ) ಅವನ ಮುಂದೆ ಹಾಜರಾಗುವ ಮತ್ತು ದಸ್ತಾವೇಜನ್ನು ಬರೆದುಕೊಟ್ಟಿರುವುದಾಗಿ ಹೇಳುವ ವ್ಯಕ್ತಿಗಳನ್ನು ಗುರುತಿಸುವ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಳ್ಳತಕ್ಕದ್ದು ಮತ್ತು

(ಸಿ) ಪ್ರತಿನಿಧಿಯಾಗಿ, ಹಸ್ತಾಂತರ ಪಡೆದವನಾಗಿ ಅಥವಾ ಏಜೆಂಟನಾಗಿ ಹಾಜರಾಗುವ ಯಾವನೇ ವ್ಯಕ್ತಿಯ ಸಂದರ್ಭದಲ್ಲಿ ಹಾಗೆ ಹಾಜರಾಗಲು ಅಂಥ ವ್ಯಕ್ತಿಯ ಹಕ್ಕಿನ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಳ್ಳತಕ್ಕದ್ದು.

(4) (1)ನೇ ಉಪ-ಪ್ರಕರಣದ ಪರಂತುಕದ ಮೇರೆಗಿನ ನಿರ್ದೇಶನಕ್ಕಾಗಿನ ಯಾವುದೇ ಅರ್ಜಿಯನ್ನು ಉಪನೋಂದಣಾಧಿಕಾರಿಯ ಮುಂದೆ ಮಾಡಿಕೊಳ್ಳಬಹುದು, ಅವನು ತಾನು ಅಧೀನನಾಗಿರುವ ಆ ನೋಂದಣಾಧಿಕಾರಿಗೆ ಅದನ್ನು ತತ್‌ಕ್ಷಣವೇ ಕಳುಹಿಸತಕ್ಕದ್ದು.

(5) ಈ ಪ್ರಕರಣದಲ್ಲಿರುವುದು ಯಾವುದೂ ಡಿಕ್ರಿಗಳ ಅಥವಾ ಆದೇಶಗಳ ಪ್ರತಿಗಳಿಗೆ ಅನ್ವಯಿಸತಕ್ಕದ್ದಲ್ಲ.

Related News

spot_img

Revenue Alerts

spot_img

News

spot_img