28.2 C
Bengaluru
Wednesday, July 3, 2024

ದಸ್ತಾವೇಜು ಬರಹಗಾರರ ನೇಮಕಾತಿ ಹೇಗೆ? ಅವರು ತಪ್ಪು ಹಿಂಬರಹ ಮಾಡಿದರೆ ಇರುವ ಶಿಕ್ಷೆಗಳೇನು?

ಬೆಂಗಳೂರು ಜೂನ್ 30:- ಇತ್ತೀಚೆಗಷ್ಟೇ ದಸ್ತಾವೇಜು ಬರಹಗಾರ(ಡೀಡ್ ರೈಟರ್ಸ್)ರ ಬದಲಿಗೆ Artificial Intelligence ಮೂಲಕ ದಸ್ತಾವೇಜುಗಳನ್ನು ಜನರಿಗೆ ಕಳುಹಿಸಿ ಬರೆದಿಡುವ ರೀತಿ ಮಾಡುವಂತೆ ತಜ್ಞರ ತಂಡವೊಂದು ಈಗಿನ ಹಾಲಿ “ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ತಿಳಿಸಿತಂತೆ ಆದರೆ ಅದರಿಂದ ಸುಮಾರು 16000 ಮಂದಿ ಜನರು ಕೆಲಸ ಕಳೆದುಕೊಳ್ಳುವ ಭೀತಿ ಇದ್ದಿದ್ದರಿಂದ ಸಚಿವರು ಅದನ್ನು ತಿರಸ್ಕರಿಸಿದ್ದಾರೆ.

ದಸ್ತಾವೇಜು ಬರಹಗಾರರ ಬಗ್ಗೆ :-
ದಸ್ತಾವೇಜು ಬರಹಗಾರರು ಅನುಮತಿ ಪತ್ರ ಹೊಂದುವುದು.-ನ್ಯಾಯವಾದಿಗಳು ಮತ್ತು ಇತರ ಕಾನೂನು ವೃತ್ತಿಯವರನ್ನು ಹೊರತುಪಡಿಸಿ, ಪ್ರಕರಣ 69ರ ಕೆಳಗೆ ಮಾಡಿದ ನಿಯಮಾನುಸಾರವಾಗಿ ಕೊಟ್ಟ ಅನುಮತಿ ಪತ್ರ ಹೊಂದಿರದ ಹೊರತು ಯಾವನೇ ವ್ಯಕ್ತಿ ಹಣಕ್ಕಾಗಿ ಲಿಖಿತಗಳನ್ನು ಬರೆಯತಕ್ಕದ್ದಲ್ಲ.

ದಸ್ತಾವೇಜು ಬರಹಗಾರ(ಡೀಡ್ ರೈಟರ್ಸ್)ರಿಗೆ ದಸ್ತಾವೇಜುಗಳಲ್ಲಿ ತಪ್ಪು ಹಿಂಬರಹಕ್ಕೆ ಇರುವ ದಂಡನೆಗಳ ಬಗ್ಗೆ:-
ಕ್ಷತಿಯನ್ನುಂಟುಮಾಡುವ ಉದ್ದೇಶ(Intent to cause harm)ದಿಂದ ದಸ್ತಾವೇಜುಗಳಲ್ಲಿ ತಪ್ಪು ಹಿಂಬರಹ ಮಾಡುವುದು,ಪ್ರತಿಯನ್ನು ಮಾಡುವುದು, ಭಾಷಾಂತರಿಸುವುದು ಅಥವಾ ನೋಂದಾಯಿಸುವುದಕ್ಕಾಗಿ ದಂಡನೆ.-

ಅಧಿನಿಯಮದ ಉಪಬಂಧಗಳ ಮೇರೆಗೆ ಹಾಜರುಪಡಿಸಿದ ಅಥವಾ ಇಟ್ಟ ಯಾವುದೇ ದಸ್ತಾವೇಜಿನ ಮೇಲೆ ಹಿಂಬರಹ ಮಾಡುವ, ಪ್ರತಿ ಮಾಡುವ, ಭಾಷಾಂತರ ಮಾಡುವ ಅಥವಾ ನೋಂದಾಯಿಸುವ
ಜವಾಬ್ದಾರಿಯನ್ನು ಹೊತ್ತ ಈ ಅಧಿನಿಯಮದ ಮೇರೆಗೆ ನೇಮಕಗೊಂಡ ಪ್ರತಿಯೊಬ್ಬ ನೋಂದಣಾಧಿಕಾರಿಯು ಮತ್ತು ಈ ಅಧಿನಿಯಮದ ಉದ್ದೇಶಗಳಿಗಾಗಿ ಅವನ ಕಛೇರಿಯಲ್ಲಿ ನಿಯೋಜಿತನಾದ ಪ್ರತಿಯೊಬ್ಬ ವ್ಯಕ್ತಿಯು ಅವನು ತಪ್ಪೆಂದು ತಿಳಿದು ಅಥವಾ ನಂಬಿರುವಂಥ ರೀತಿಯಲ್ಲಿ ಯಾವನೇ ವ್ಯಕ್ತಿಗೆ 1860ರ ಭಾರತದ ದಂಡ ಸಂಹಿತೆಯಲ್ಲಿ (1860ರ ಅಧಿನಿಯಮ ಸಂಖ್ಯೆ45) ಪರಿಭಾಷಿಸಿದಂತೆ ಆ ಮೂಲಕ ಕ್ಷತಿಯನ್ನುಂಟುಮಾಡುವ ಉದ್ದೇಶದಿಂದ ಅಥವಾ ಆ ಮೂಲಕಅವನಿಗೆ ಕ್ಷತಿ(cause harm)ಯುಂಟಾಗುವ ಸಂಭವವಿದೆಯೆಂದು ತಿಳಿದೂ ಹಿಂಬರಹ ಮಾಡಿದರೆ, ಪ್ರತಿ ಮಾಡಿದರೆ,ಭಾಷಾಂತರಿಸಿದರೆ ಅಥವಾ ನೋಂದಾಯಿಸಿದರೆ ಅವನು ಏಳು ವರ್ಷಗಳವರೆಗೆ ವಿಸ್ತರಿಸಬಹುದಾದಂಥ ಅವಧಿಯವರೆಗಿನ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡನೀಯನಾಗತಕ್ಕದ್ದು.

ಸುಳ್ಳು ಹೇಳಿಕೆಗಳನ್ನು ಕೊಟ್ಟಿದ್ದಕ್ಕಾಗಿ, ಸುಳ್ಳು ಪತ್ರಿಗಳನ್ನು ಅಥವಾ ಭಾಷಾಂತರಗಳನ್ನು ಪರಾವ ಮಾಡಿದ್ದಕ್ಕಾಗಿ, ಪುರುಷಾಂತರ (ಮೋಸದ ರೂಪಧಾರಣೆ) (personation) ಮಾಡಿದ್ದಕ್ಕಾಗಿ ಮತ್ತು
ದುಷ್ಪ್ರೇರಣೆಗಾಗಿ (abetment) ದಂಡನೆ.-ಯಾರೇ ಆಗಲಿ-

(ಎ)ಈ ಅಧಿನಿಯಮದ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವನೇ ಆಗಲಿ ಅಧಿಕಾರಿಯ ಮುಂದೆ ಈ ಅಧಿನಿಯಮದ ಮೇರೆಗಿನ ಯಾವುದೇ ವ್ಯವಹರಣೆ (proceeding) ಅಥವಾ ವಿಚಾರಣೆಯಲ್ಲಿ ದಾಖಲು ಮಾಡಿದ ಅಥವಾ ಮಾಡದ ಪ್ರಮಾಣ ವಚನದ ಮೇಲೆ ಅಥವಾ ಅದಲ್ಲದೆ ಯಾವುದೇ ಸುಳ್ಳು ಹೇಳಿಕೆ ಮಾಡಿದರೆ; ಅಥವಾ

(ಬಿ) ‘[ಈ ಅಧಿನಿಯಮ ಅಥವಾ ಇದರಡಿಯಲ್ಲಿ ರಚಿತವಾದ ನಿಯಮಗಳ ಮೇರೆಗಿನ ಯಾವುದೇ ವ್ಯವಹರಣೆಯಲ್ಲಿ ದಸ್ತಾವೇಜಿನ ಸುಳ್ಳು ಪ್ರತಿ ಅಥವಾ ಭಾಷಾಂತರ ಅಥವಾ ಮ್ಯಾಪು ಅಥವಾ ನಕ್ಷೆಯ ಸುಳ್ಳು ಪ್ರತಿಯನ್ನು ನೋಂದಣಿ ಅಧಿಕಾರಿಗೆ ಉದ್ದೇಶ ಪೂರ್ವಕವಾಗಿ ವಶಾವಣೆ (delivery) ಮಾಡಿದರೆ; ಅಥವಾ

(ಸಿ)ಸುಳ್ಳಾಗಿ, ಪುರುಷಾಂತರ ಮೋಸದ ರೂಪಧಾರಣೆ (personation) ಮಾಡಿ ಹಾಗೆ ಮಾಡಿದ ವೇಷದಲ್ಲಿ ಯಾವುದೇ ದಸ್ತಾವೇಜನ್ನು ಹಾಜರುಪಡಿಸಿದರೆ ಅಥವಾ ಯಾವುದೇ ಒಪ್ಪಿಗೆ ಅಥವಾ ಹೇಳಿಕೆ ಕೊಟ್ಟರೆ ಅಥವಾ ಯಾವುದೇ ಸಮನ್ನ ಅಥವಾ ನಿಯೋಗ ಹೊರಡಿಸುವಂತೆ ಮಾಡಿದರೆ ಅಥವಾ ಈ ಅಧಿನಿಯಮದ ಮೇರೆಗಿನ ಯಾವುದೇ ವ್ಯವಹರಣೆ ಅಥವಾ ವಿಚಾರಣೆಯಲ್ಲಿ ಇತರ ಕೃತ್ಯ ಮಾಡಿದರೆ; ಅಥವಾ

(ಡಿ)ಈ ಅಧಿನಿಯಮದ ಮೇರೆಗೆ ದಂಡನೀಯವಾದ ಯಾವುದನ್ನಾದರೂ ದುಷ್ಪ್ರೇರೇಪಿಸಿದರೆ (abets), ಅವನು ಏಳು ವರ್ಷಗಳವರೆಗೆ ವಿಸ್ತರಿಸಬಹುದಾದಂಥ ಅವಧಿಯ ಕಾರಾವಾಸದಿಂದ ಅಥವಾ
ಜುಲ್ಮಾನೆಯಿಂದ ಅಥವಾ ಅವೆರೆಡರಿಂದಲೂ ದಂಡನೀಯನಾಗತಕ್ಕದ್ದು.

ದಸ್ತಾವೇಜು ಬರಹಗಾರರಿಗೆ ಸಂಬಂಧಿಸಿದಂತೆ ದಂಡನೆ ಯಾವ ನಿಯಮಾವಳಿಯಡಿ ಇದೆ :-
ಯಾರೇ ಆಗಲಿ ಪ್ರಕರಣ 80-ಬಿ ಯಲ್ಲಿನ ಉಪಬಂಧಗಳನ್ನು ಅಥವಾ ಪ್ರಕರಣ 69ರ ಮೇರೆಗೆ ರಚಿಸಲಾದ ನಿಯಮಾವಳಿಯಡಿಯಲ್ಲಿ ನೀಡಲಾದ ಅನುಮತಿ ಪತ್ರದ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದರೆ ಒಂದು ತಿಂಗಳವರೆಗೆ ವಿಸ್ತರಿಸಬಹುದಾದ ಕಾರಾವಾಸ ಅಥವಾ ಇನ್ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡರಿಂದಲೂ ದಂಡನೀಯ ವಾಗಿರತಕ್ಕದ್ದು.

Related News

spot_img

Revenue Alerts

spot_img

News

spot_img