22.3 C
Bengaluru
Sunday, December 22, 2024

ಮರಣಶಾಸನಗಳನ್ನು ಠೇವಣಿ ಇಟ್ಟಮೇಲೆ ಮುಂದಿನ ಪ್ರಕ್ರಿಯೆ ಹೇಗೆ ನಡೆಯುತ್ತದೆ ಗೊತ್ತಾ?

ಬೆಂಗಳೂರು ಜುಲೈ 08: ಮರಣಶಾಸನಗಳ ಠೇವಣಿ (Deposit of Wills) ಇಡುವ ಬಗ್ಗೆ ಹೇಳುವುದಾದರೆ, ಅದನ್ನು ದಸ್ತಾವೇಜಿನ ಸ್ವರೂಪದಲ್ಲಿ ರಿಜಿಸ್ಟ್ರಾರ್ ಕಛೇರಿಯಲ್ಲಿ ಠೇವಣಿ ಇಡುವುದು ತುಂಬಾ ಉತ್ತಮವಾದ ಮಾರ್ಗವಾಗಿದೆ.ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮರಣಶಾಸನ ಠೇವಣಿ ಇಡುವುದು((Deposit of Wills).-ಯಾವನೇ ಮರಣಶಾಸನಕರ್ತನು ಖುದ್ದಾಗಿಯಾಗಲೀ ಅಥವಾ ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಏಜೆಂಟನ ಮೂಲಕವಾಗಲೀ ಅವನ ಮರಣಶಾಸನವನ್ನುಮೊಹರು ಮಾಡಿದ ಲಕೋಟೆಯಲ್ಲಿ ಮರಣಶಾಸನಕರ್ತನ ಮತ್ತು ಅವನ ಏಜೆಂಟ್ (ಯಾರಾದರೂ ಇದ್ದರೆ, ಅವರ ಹೆಸರನ್ನು ಅದರ ಮೇಲೆ ಬರೆದು ಮತ್ತು ದಸ್ತಾವೇಜಿನ ಸ್ವರೂಪದ ಬಗೆಗಿನ ವಿವರಣೆಯೊಂದಿಗೆ ಯಾವನೇ ರಿಜಿಸ್ಟ್ರಾರ್‌ನಲ್ಲಿ ಠೇವಣಿ ಇಡಬಹುದು.

ಮರಣಶಾಸನಗಳನ್ನು ಠೇವಣಿ ಇಟ್ಟಮೇಲೆ ಪ್ರಕ್ರಿಯೆ ಹೇಗಿರುತ್ತದೆ-

(1) ರಿಜಿಸ್ಟ್ರಾರ್‌ನಿಗೆ, ಅಂಥ ಲಕೋಟೆಯನ್ನು ಸ್ವೀಕರಿಸಿದ ಮೇಲೆ ಇಡುವುದಕ್ಕಾಗಿ ಸಲ್ಲಿಸುವ ವ್ಯಕ್ತಿಯು ಮರಣಶಾಸನಕರ್ತನೇ ಅಥವಾ ಅವನ ಏಜೆಂಟ್ ಎಂಬ ಬಗ್ಗೆ ಮನದಟ್ಟಾದರೆ, ಹಿಂದೆ ಹೇಳಿದಂತೆ
ಮೇಲುಬರಹಮಾಡಿ 5ನೇ ಸಂಖ್ಯೆಯ ರಿಜಿಸ್ಟರಿನಲ್ಲಿ ನಕಲು ಮಾಡತಕ್ಕದ್ದು ಮತ್ತು ಅದೇ ಪುಸ್ತಕದಲ್ಲಿ ಮತ್ತು ಸದರಿ ಲಕೋಟೆಯ ಮೇಲೆ ಅಂಥ ಹಾಜರುಪಡಿಸಿದ ಮತ್ತು ಸ್ವೀಕರಿಸಿದ ವರ್ಷ, ತಿಂಗಳು, ದಿನ
ಮತ್ತು ಗಂಟೆ ಹಾಗೂ ಮರಣಶಾಸನಕರ್ತ ಅಥವಾ ಅವನ ಏಜೆಂಟನ ಗುರುತನ್ನು ಪ್ರಮಾಣೀಕರಿಸುವ ಯಾರೇ ವ್ಯಕ್ತಿಗಳ ಹೆಸರುಗಳನ್ನು ಮತ್ತು ಲಕೋಟೆಯ ಮೊಹರಿನ ಮೇಲೆ ಇರಬಹುದಾದಂಥ ಓದಲು
ಸಾಧ್ಯವಿರುವ ಬರಹವನ್ನು ಟಿಪ್ಪಣಿ ಮಾಡತಕ್ಕದ್ದು.

(2) ರಿಜಿಸ್ಟಾರನು ಮೊಹರು ಮಾಡಿದ ತರುವಾಯ ಲಕೋಟೆಯನ್ನು ತನ್ನ ಅಗ್ನಿ ನಿರೋಧಕ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳತಕ್ಕದ್ದು. 44. 42ನೇ ಪ್ರಕರಣದ ಮೇರೆಗೆ ಇಟ್ಟ ಮೊಹರು ಮಾಡಿದ ಲಕೋಟೆಯನ್ನು
ಹಿಂತೆಗೆದುಕೊಳ್ಳುವುದು. ಅಂಥ ಲಕೋಟೆಯನ್ನು ಇಟ್ಟಿರುವ ಮರಣಶಾಸನಕರ್ತನು ಅದನ್ನು ಹಿಂತೆಗೆದುಕೊಳ್ಳಬೇಕೆಂದು ಬಯಸಿದರೆ, ಖುದ್ದಾಗಿಯಾಗಲೀ ಅಥವಾ ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಏಜೆಂಟನ ಮೂಲಕವಾಗಲಿ ಅದನ್ನು ಇಟ್ಟುಕೊಂಡಿರುವಂಥ ರಿಜಿಸ್ಟ್ರಾರನಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅಂಥ ರಿಜಿಸ್ಟ್ರಾರನು ಅರ್ಜಿದಾರನು ವಾಸ್ತವವಾಗಿ ಮರಣಶಾಸನಕರ್ತ ಅಥವಾ ಅವನ ಏಜೆಂಟ್ ಆಗಿದ್ದಾನೆಂಬ ಬಗ್ಗೆ ಅವನಿಗೆ ಮನದಟ್ಟಾದರೆ, ಅವನು ತದನುಸಾರವಾಗಿ ಅದನ್ನು ವಶಾವಣೆ (delivery) ಮಾಡತಕ್ಕದ್ದು.

Related News

spot_img

Revenue Alerts

spot_img

News

spot_img