ಬೆಂಗಳೂರು, ಆ. 09 : ನೌಕರರ ಭವಿಷ್ಯ ನಿಧಿಯನ್ನು ಸಾಮಾನ್ಯವಾಗಿ ಇಪಿಎಫ್ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ,ಪಿಂಚಣಿ, ಹಾಗು ವಿಮಾ ಸೌಲಭ್ಯಗಳನ್ನು ನೀಡುವ ಸಂಸ್ಥೆಯಾಗಿದ್ದು, ಇದು ಭಾರತದ ಎಲ್ಲ ಉದ್ಯೋಗಿಗಳಿಗೂ ಕಡ್ಡಾಯವಾಗಿದೆ. ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋಕೆ ಈಗ ಮುಂಚಿನಂತೆ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಬೇಕಾಗಿಲ್ಲ. ತಿಂಗಳುಗಟ್ಟಲೆ ಕಾಯಬೇಕಾಗಿಯೂ ಇಲ್ಲ. ಆನ್ ಲೈನ್ ನಲ್ಲಿ ಯುಎಎನ್ ಪೋರ್ಟಲ್ ಗೆ ಭೇಟಿ ನೀಡಿ ನೀವೇ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುತ್ತಿದೆ. ಇಪಿಎಫ್ ಖಾತೆದಾರರು ತಮ್ಮ ಠೇವಣಿ ಮೊತ್ತದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. ಇಪಿಎಫ್ ಹಣವನ್ನು ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ ಎಂದು ಹಂತ ಹಂತವಾಗಿ ವಿವರಿಸಲಾಗಿದೆ. ಉದ್ಯೋಗಿಗಳು ನಿವೃತ್ತಿಯ ಬಳಿಕ ತಮ್ಮ ಇಪಿಎಫ್ ಖಾತೆಯಲ್ಲಿರುವ ಉಳಿತಾಯದ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಆದರೆ, ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ಪಿಎಫ್ ಖಾತೆಯಲ್ಲಿರುವ ಸ್ವಲ್ಪ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಉದ್ಯೋಗಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಇಪಿಎಫ್‌ನಲ್ಲಿರೋ ಸಂಪೂರ್ಣ ಹಣವನ್ನು ಹಿಂಪಡೆಯಲು ಉದ್ಯೋಗಿ ಅರ್ಹನಾಗಿರುತ್ತಾನೆ. ಆದ್ರೆ ಆತ ಹೊಸ ಉದ್ಯೋಗಕ್ಕೆ ಇದೇ ಪಿಎಫ್ ಖಾತೆಯನ್ನು ವರ್ಗಾಯಿಸಿರಬಾರದಷ್ಟೆ.
ಬೇರೆ ಉದ್ಯೋಗಕ್ಕೆ ಸೇರದಿರೋರು, ಹೊಸ ಸಂಸ್ಥೆಯಲ್ಲಿ ಹೊಸ ಪಿಎಫ್ ಖಾತೆ ತೆರೆದಿರೋರು ಹಾಗೂ ನಿವೃತ್ತಿಯಾದವರು ಎರಡು ತಿಂಗಳ ಬಳಿಕ ಪಿಎಫ್ ಖಾತೆಯಲ್ಲಿರೋ ಹಣವನ್ನು ಪಡೆಯಬಹುದು. ಇದೀಗ ಪಿಎಫ್ ಚಂದಾದಾರರು ಅಡ್ವಾನ್ಸ್ ನ್ನು ವಿತ್ ಡ್ರಾ ಮಾಡಿಕೊಳ್ಳುವುದಕ್ಕಾಗಿ ಇಪಿಎಫ್ಓ ಯುನಿಫೈಡ್ ಪೋರ್ಟಲ್ ಆಗಿರುವ mem.epfindia.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ನೀವು ಸಲ್ಲಿಸಿದ ಅರ್ಜಿಯ ಅನುಮೋದನೆಗಾಗಿ ನಿಮ್ಮ ಉದ್ಯೋಗದಾತರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ.
ಒಮ್ಮೆ ಅನುಮೋದನೆ ದೊರೆತ ನಂತರ ನಿಮ್ಮ ಪಿಎಫ್ ಹಣವು ನಿಮ್ಮ ಖಾತೆಗೆ ಜಮಾಗೊಳ್ಳುತ್ತದೆ. ಅದಕ್ಕಾಗಿ ನೀವು ಹೆಚ್ಚು ದಿನ ಕಾಯಬೇಕಾಗೂ ಇಲ್ಲ. ಕೇವಲ 10 ದಿನದ ಒಳಗೆ ನಿಮ್ಮ ಹಣ ನಿಮ್ಮ ಕೈ ಸೇರುತ್ತದೆ. ಮೊದಲನೆಯದಾಗಿ, ನಿಮ್ಮ UAN ಮತ್ತು ಪಾಸ್‌ವರ್ಡ್‌ನೊಂದಿಗೆ ನೀವು UAN ಸದಸ್ಯ ಪೋರ್ಟಲ್‌ಗೆ ಸೈನ್ ಇನ್ ಮಾಡಬೇಕಾಗುತ್ತದೆ. ನಿಮಗೆ ನೀಡಲಾಗಿರುವ ಯೂನಿವರ್ಸಲ್ ಖಾತೆ ಸಂಖ್ಯೆ ಹಾಗೂ ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಅನ್ನು ನಮೂದಿಸಿ, ಸೈನ್‌ಇನ್ ಬಟನ್ ಅನ್ನು ಕ್ಲಿಕ್ ಮಾಡಿ.
ಆನ್‌ಲೈನ್ ಕ್ಲೈಮ್ ಫಾರ್ಮ್ ಕಾಣಸಿಗುವ ವಿವರಗಳನ್ನು ಪರಿಶೀಲಿಸಿ. ಒಮ್ಮೆ ಪರಿಶೀಲನೆಗೊಳಪಟ್ಟಮೇಲೆ ನಿಮ್ಮ ಬ್ಯಾಂಕ್ ಖಾತೆಯ ನಂಬರ್ ಅನ್ನು ನಮೂದಿಸಿ. ನಿಮ್ಮ ಬ್ಯಾಂಕ್ ಖಾತೆ ಚೆಕ್ನ ಸ್ಕ್ಯಾನ್ ಪ್ರತಿಯನ್ನು ನೀವು ಅಪ್‌ಲೋಡ್ ಮಾಡಬೇಕು ಮತ್ತು ನಿಮ್ಮ ಮನೆಯ ವಿಳಾಸವನ್ನು ಭರ್ತಿ ಮಾಡಬೇಕು. Get Aadhar OTP ಆಯ್ಕೆಗೆ ಹೋಗಿ ಮತ್ತು ಆಧಾರ್ ಲಿಂಕ್ ಮಾಡಿದ ಮೊಬೈಲ್‌ನಲ್ಲಿ ಸ್ವೀಕರಿಸಿದ OTP ಅನ್ನು ಕ್ಲಿಕ್ ಮಾಡಿ ಮತ್ತು ಬರೆಯಿರಿ. ಈಗ ‘Yes’ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೂ ಮುಂದುವರಿಯಿರಿ.
Proceed for Online Claim’ ಮೇಲೆ ಕ್ಲಿಕ್ ಮಾಡಿ. ಈಗ ಕ್ಲೇಮ್ ಫಾರ್ಮ್ ನಲ್ಲಿ ‘I Want To Apply For’ ಅಡಿಯಲ್ಲಿ ಯಾವ ಕಾರಣಕ್ಕೆ ಕ್ಲೇಮ್ ಮಾಡುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ಈಗ ನಿಮ್ಮ ಹಣ ವಿತ್ ಡ್ರಾ ಮಾಡಲು ‘PF Advance (Form 31)’ಆರಿಸಿ. ಬಳಿಕ ಈ ರೀತಿ ಹಣ ಹಿಂಪಡೆಯೋ ಉದ್ದೇಶ, ಎಷ್ಟು ಹಣ ಬೇಕಾಗಿದೆ ಹಾಗೂ ನಿಮ್ಮ ವಿಳಾಸ ನೂದಿಸಬೇಕು. ಈಗ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಲ್ಲಿಸಿ. ನಿಮ್ಮ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.