ಬೆಂಗಳೂರು, ಮೇ. 23 : ಆರ್ ಬಿಐ ಕಳೆದ 10 ವರ್ಷಗಳಿಂದ ಕ್ಲೈಮ್ ಮಾಡದ ಠೇವಣಿ ಮೊತ್ತವನ್ನು ಒಳ್ಳೆಯ ಕೆಲಸಗಳ ನಿಧೀಗೆ ಕಳಿಸುತ್ತದೆ. ಅದಕ್ಕೂ ಮುನ್ನ ಸದ್ಯ, 48,262 ಕೋಟಿ ರೂಪಾಯಿ ಆರ್ ಬಿಐನಲ್ಲಿ ಉಳಿದಿದೆ. ಕ್ಲೈಮ್ ಮಾಡದ ಈ ಹಣವನ್ನು 100 ದಿನ 100 ಪಾವತಿ ಅಭಿಯಾನದ ಮೂಲಕ ವಾರಸುದಾರರಿಗೆ ಒಪ್ಪಿಸಲು ಆರ್ ಬಿಐ ಮುಂದಾಗಿದೆ. ಜೂನ್ 1 ರಿಂದ ಈ ಅಭಿಯಾನ ಪ್ರಾರಂಭವಾಗಲಿದ್ದು, ಅವರವರ ಹಣವನ್ನು ಹಿಂದಿರುಗಿಸಲು ಆರ್ ಬಿಐ ಯೋಜಿಸಿದೆ.
ಎರಡು ವರ್ಷಗಳ ಕಾಲ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಿದ್ದರೆ, ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇನ್ನು ಕೆಲ ಠೇವಣಿಗಳನ್ನು ಹಿಂಪಡೆಯದಿದ್ದರೆ, ಇದೆಲ್ಲವೂ ಕ್ಲೈಮ್ ಮಾಡದ ಹಣವನ್ನು ಮತ್ತು ಒಮ್ಮೆ ನಿಷ್ಕ್ರಿಯಗೊಂಡ ಖಾತೆಯನ್ನು ಸಕ್ರಿಯಗೊಳಿಸಲು ಹತ್ತು ವರ್ಷ ಬೇಕು. ಹತ್ತು ವರ್ಷದ ಬಳಿಕ ಬ್ಯಾಂಕ್ ಖಾತೆ ಪುನಃ ಸಕ್ರಿಯಗೊಳ್ಳುತ್ತದೆ. ಆದರೆ, ಖಾತೆಯಲ್ಲಿ ಹಣವಿದ್ದು, ನಿಷ್ಕ್ರಿಯಗೊಂಡಿದ್ದರೆ, ಅದರಲ್ಲಿದ್ದ ಹಣ ನಿಮ್ಮ ಕೈ ಸೇರುವುದಿಲ್ಲ.
ಆರ್ ಬಿಐ ಕ್ಲೈಮ್ ಮಾಡದ ಬ್ಯಾಂಕ್ ಖಾತೆಯಲ್ಲಿದ್ದ ಸಂಪೂರ್ಣ ಹಣ ಮತ್ತು ಬಡ್ಡಿ ಮೊತ್ತವನ್ನು ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಸಂದಾಯಿಸಲಾಗುತ್ತದೆ. ಈ ಹಣ ಯಾವುದೇ ಕಾರಣಕ್ಕೂ ಹಿಂತಿರುಗಿ ಬರುವುದಿಲ್ಲ. ಈ ಬಾರಿ ಆರ್ ಬಿಐ ಇದಕ್ಕಾಗಿಯೇ ಹೊಸ ಯಜನೆಯನ್ನು ರೂಪಿಸಿದೆ. 100 ದಿನ 100 ಪಾವತಿ ಅಭಿಯಾನದ ಮೂಲಕ ತಮ್ಮ ಹಣವನ್ನು ಕ್ಲೈಮ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಖಾತೆಯಲ್ಲಿ ಹಣ ಹಿಂಪಡೆಯದವರು ಈಗ ತಮ್ಮ ಹಣವನ್ನು ಪಡೆಯಬಹುದು.
ಖಾತೆಯ ವಾರಸುದಾರರು ಅಥವಾ ಸಂಬಂಧಪಟ್ಟವರು ಖಾತೆ ಇರುವ ಬ್ಯಾಂಕ್ ಶಾಖೆಗೆ ತೆರಳಿ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ. ಬಳಿಕ ಐಡಿ, ವಿಳಾಸ, ಫೋಟೋ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಿ. ಬ್ಯಾಂಕ್ ಅಧಿಕಾರಿಗಳು ಆಗ ನಿಮ್ಮ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಅಕಸ್ಮಾತ್ ಹಣ ಠೇವಣಿ ಮಾಡಿದವರು ಸಾವನ್ನಪ್ಪಿದ್ದರೆ ನಾಮಿನಿಗಳು ಹಣವನ್ನು ಕ್ಲೈಮ್ ಮಾಡಬಹುದು. ಐಡಿ ಪ್ರೂಫ್ ಗಳ ಜೊತೆಗೆ ಡೆತ್ ಸರ್ಟಿಫಿಕೇಟ್ ಅನ್ನು ಕೂಡ ನೀಡಿ ಹಣ ಪಡೆಯಬಹುದು.