27.7 C
Bengaluru
Wednesday, July 3, 2024

Partnership Firm : ಪಾಲುದಾರಿಕೆ ಸಂಸ್ಥೆ ಸ್ಥಾಪಿಸುವ ಸಿಂಪಲ್ ವಿಧಾನ : ಎಷ್ಟು ತರ ಪಾಲುದಾರರು ಆಗಲು ಅವಕಾಶವಿದೆ ಗೊತ್ತಾ?

#Partnership firm #Partnership act #Partnership deed

ಬೆಂಗಳೂರು, ಅ. 17: ಯಾವುದೇ ಒಂದು ವಹಿವಾಟು ಮಾಡಿ ಲಾಭ ಗಳಿಸಬೇಕಾದರೆ ಒಬ್ಬರಿಂದ ಅಸಾಧ್ಯದ ಮಾತು. ಬಂಡವಾಳ, ಕೌಶಲ್ಯ ಎಲ್ಲವೂ ಒಬ್ಬರಲ್ಲಿ ಸಿಗಲ್ಲ. ಇಂತಹ ಸಂದರ್ಭದಲ್ಲಿ ಇಬ್ಬರು ಅಥವಾ ಹೆಚ್ಚು ಮಂದಿ ಸೇರಿ ಪಾಲುದಾರಿಕೆ ಸಂಸ್ಥೆಯನ್ನು ಸ್ಥಾಪಿಸಿ ತಮಗೆ ಇಷ್ಟ ಬಂದ ಕಾನೂನು ಬದ್ಧ ವ್ಯವಹಾರ ನಡೆಸಲು ಅವಕಾಶವಿದೆ. ಈ ಪಾಲುದಾರಿಕೆ ಸಂಸ್ಥೆ ನೋಂದಣಿ, ಅದರ ಕಾರ್ಯ ಚಟುವಟಿಕೆ, ಪಾಲುದಾರರ ಕರ್ತವ್ಯಗಳ ಬಗ್ಗೆ Partnership act 1932 ಏನು ಹೇಳುತ್ತದೆ ಎಂಬ ಸಮಗ್ರ ವಿವರ www.revenuefacts.com ನಲ್ಲಿ ವಿವರಿಸಲಾಗಿದೆ.

ಯಾವುದೇ ಒಂದು ಕಾನೂನು ಬದ್ಧ ವ್ಯವಹಾರವನ್ನು ನಡೆಸಲು ಇಬ್ಬರು ಅಥವಾ ಹೆಚ್ಚು ಮಂದಿ ಸೇರಿ ಸೃಜಿಸುವ ಒಂದು ಸಂಸ್ಥೆಯೇ ಪಾಲುದಾರಿಕೆ ಸಂಸ್ಥೆ. ಪಾಲುದಾರಿಕೆ ಕಾಯ್ದೆ ಹಾಗೂ ಕರಾರು ಅಧಿನಿಯಮಕ್ಕೆ ಅವಿನಾಭಾವ ಸಂಬಂಧವಿರುತ್ತದೆ. ಒಂದು ವೇಳೆ ಪಾಲುದಾರರಲ್ಲಿ ವಿವಾದ ಉಂಟಾಗಿದಲ್ಲಿ ಪರಿಹಾರ ಪಡೆಯುವ ಸಂದರ್ಭದಲ್ಲಿ ಕರಾರು ಅಧಿನಿಯಮ ಅನ್ವಯಿಸುತ್ತದೆ. ಇನ್ನು ಖಾಸಗಿ ಕಂಪನಿಗು ಪಾಲುದಾರಿಕೆ ಸಂಸ್ಥೆಗೂ ತುಂಬಾ ವ್ಯತ್ಯಾಸವಿದೆ. ಒಟ್ಟಾರೆಯಾಗಿ ಪಾಲುದಾರಿಕೆ ಸಂಸ್ಥೆ ಸ್ಥಾಪನೆ, ಕಾರ್ಯ ಹಾಗೂ ಪಾಲುದಾರರ ಹೊಣೆಗಾರಿಕೆ ಕುರಿತ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.

what is partnership firm :

ಪಾಲುದಾರಿಕೆ ಸಂಸ್ಥೆ ಎಂಬುದು ಲಾಭ ಗಳಿಸುವ ಉದ್ದೇಶದಿಂದ ಒಂದು ಕಾನೂನು ಬದ್ಧ ವ್ಯವಹಾರ ನಡೆಸಲು ಇಬ್ಬರು ಅಥವಾ ಹೆಚ್ಚು ಮಂದಿ ಹುಟ್ಟುಹಾಕುವ ಸಂಸ್ಥೆ ಪಾಲುದಾರಿಕೆ ಸಂಸ್ಥೆ ಎಂದು ಕರೆಯಲಾಗುತ್ತದೆ. ಮಿತ ಬಂಡವಾಳ ಹಾಗೂ ಅಲ್ಪ ಕೌಶಲ್ಯದಿಂದಲೂ ಪಾಲುದಾರಿಕೆ ಸಂಸ್ಥೆ ಸ್ಥಾಪಿಸಿ ಯಶಸ್ಸು ಗಳಿಸಬಹದು.

ಏನಿದು ಪಾಲುದಾರಿಕೆ ಸಂಸ್ಥೆ ?

Partnership Act 1932 ಸೆಕ್ಷನ್ 4 ಪ್ರಕಾರ ಪಾಲುದಾರಿಕೆ ಎಂಬುದು ಲಾಭ ಗಳಿಸಲು ಒಂದು ವ್ಯವಹಾರ ಮಾಡುವ ಇಬ್ಬರ ವ್ಯಕ್ತಿಗಳ ನಡುವಿನ ಸಂಬಂಧ. ಇಲ್ಲಿ ಒಬ್ಬರು ಹೂಡಿಕೆ ಮಾಡಿ ಮತ್ತೊಬ್ಬರು ವ್ಯವಹಾರ ಮಾಡಬಹುದು. ಅಥವಾ ಇಬ್ಬರೂ ಹೂಡಿಕೆ ಮಾಡಿ ಇಬ್ಬರೂ ವ್ಯವಹಾರ ನಡೆಸಬಹುದು.

ಪಾಲುದಾರಿಕೆ ಸಂಸ್ಥೆ ಸ್ಥಾಪನೆ ಅಗತ್ಯತೆಗಳು:

ಒಬ್ಬರಿಗಿಂತಲೂ ಹೆಚ್ಚು ಮಂದಿ ಇರಬೇಕು.

ಇಬ್ಬರ ನಡುವೆ ವ್ಯವಹಾರ, ಲಾಭ ಹಂಚಿಕೆ ಕುರಿತು ಕರಾರು ಮಾಡಿಕೊಂಡಿರಬೇಕು.

ಕಾನೂನು ಬದ್ದ ವ್ಯವಹಾರ ನಡೆಸುವಂತಿರಬೇಕು.

ಲಾಭ ಗಳಿಸುವ ಹಾಗೂ ಅದನ್ನು ಹಂಚಿಕೊಳ್ಳುವ ಉದ್ದೇಶ ಹೊಂದಿರಬೆಕು.

ವ್ಯವಹಾರ ಇಬ್ಬರು ನಡೆಸುತ್ತಾರಾ ? ಅಥವಾ ಒಬ್ಬರೆ ನಡೆಸುತ್ತಾರೆಯೇ ಎಂಬುದನ್ನು ಕರಾರಿನಲ್ಲಿ ಉಲ್ಲೇಖಿಸಿರಬೇಕು.

Partnership firm example: ಎ ಮತ್ತು ಬಿ 100 ಟನ್ ಆಯಿಲ್ ನ್ನು ಖರೀದಿಸಿ ಜಂಟಿ ಖಾತೆಯಲ್ಲಿ ಇಬ್ಬರು ಮಾರಾಟ ಮಾಡಿದರೆ ಎ ಮತ್ತು ಬಿ ಪಾಲುದಾರರು ಎಂದು ಪರಿಗಣಿಸಲಾಗುತ್ತದೆ.

ಅದೇ ಎ ಮತ್ತು ಬಿ ನೂರು ಟನ್ ಆಯಿಲ್ ಖರೀದಿಸುತ್ತಾರೆ. ಅದನ್ನು ಸಮ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದು ಪಾಲುದಾರಿಕೆ ಆಗುವುದಿಲ್ಲ. ಯಾಕೆಂದರೆ ಇಲ್ಲಿ ಇಬ್ಬರು ಲಾಭ ಗಳಿಸುವ ವ್ಯವಹಾರ ಮಾಡಿಲ್ಲ. ಲಾಭವನ್ನು ಹಂಚಿಕೊಂಡಿಲ್ಲ!

partnership act and partnership firm creation rules

ಪಾಲುದಾರಿಕೆ ಸಂಸ್ಥೆ ಸದಸ್ಯರು: ಇಬ್ಬರು ಅಥವಾ ಹೆಚ್ಚು ಮಂದಿ ಪಾಲುದಾರಿಕೆ ಸಂಸ್ಥೆ ಸ್ಥಾಪಿಸಬಹುದು. ಪಾಲುದಾರಿಕೆ ಸಂಸ್ಥೆಯ ಸದಸ್ಯರ ಬಗ್ಗೆ ಕಾಯ್ದೆ ಏನೂ ಹೇಳಿಲ್ಲ. ಅದರೆ ಕಂಪನಿ ಕಾಯ್ದೆ -2013 ರ ಪ್ರಕಾರ ನೂರು ಮಂದಿ ಮೀರುವಂತಿಲ್ಲ. ಕನಿಷ್ಠ ಇಬ್ಬರು ಇರಬೇಕು. ನೂರಕ್ಕೂ ಹೆಚ್ಚು ಮಂದಿ ಇರುವ ಪಾಲುದಾರಿಕೆ ಸಂಸ್ಥೆ ಅದು ಪಾಲುದಾರಿಕೆ ಸಂಸ್ಥೆ ಅಗುವುದಿಲ್ಲ. ಕಂಪನಿ ಕಾಯ್ದೆ ಸೆಕ್ಷನ್ 464 ಪ್ರಕಾರ ಅಕ್ರಮ ಸಂಘ ವ್ಯಾಪ್ತಿಗೆ ಬರುತ್ತದೆ. ಸೆಕ್ಷನ್ 11 ಪ್ರಕಾರ ಪಾಲುದಾರಿಕೆ ಸಂಸ್ಥೆಯಲ್ಲಿ ಬ್ಯಾಂಕಿಂಗ್ ಉದ್ದೇಶಕ್ಕೆ 10 ಸದಸ್ಯರು, ಇತರೆ ಉದ್ದೇಶಕ್ಕೆ 20 ಮಂದಿ ಸದಸ್ಯರು ಮೀರುವಂತಿಲ್ಲ.

Partnership deed :

ಒಂದು ಪಾಲುದಾರಿಕೆ ಸಂಸ್ಥೆ ಸ್ಥಾಪಿಸಬೇಕಾದರೆ ಪಾಲುದಾರರು, ಅವರ ವಿವರ, ಕೈಗೊಳ್ಳುತ್ತಿರುವ ಕಾನೂನುಬದ್ಧ ವಹಿವಾಟು, ಲಾಭದ ಹಂಚಿಕೆ ಪ್ರಮಾಣ ಕುರಿತು ಕಡ್ಡಾಯವಾಗಿ ಒಂದು ಕರಾರನ್ನು ಮಾಡಿಕೊಳ್ಳಬೇಕು.

 

ಪಾಲುದಾರರ ಹೂಡಿಕೆ, ಲಾಭದ ಹಂಚಿಕೆ ಪ್ರಮಾಣ, ಬಂಡವಾಳಕ್ಕೆ ಬಡ್ಡಿ, ಸಾಲ, ಪಾಲುದಾರರ ಕರ್ತವ್ಯ, ವೇತನ, ಕಮೀಷನ್, ಪಾಲುದಾರರಿಗೆ ಹಂಚಿಕೆ, ಪಾಲುದಾರ ಮೃತಪಟ್ಟ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮ, ವಿವಾದ ಉಂಟಾದರೆ ಪಾಲುದಾರಿಕೆಯಿಂದ ಹೊರ ಬರುವ ನಿಯಮಗಳನ್ನು ಈ ಪಾಲುದಾರಿಕೆ ಡೀಡ್ ಒಳಗೊಂಡಿರಬೇಕು.

ಸೆಕ್ಷನ್ 12 ಪಾಲುದಾರಿಕೆ ಬ್ಯುಜಿನೆಸ್ :

ಪಾಲುದಾರಿಕೆ ಸಂಸ್ಥೆ ಕೈಗೊಳ್ಳುವ ವಹಿವಾಟು ಅದು ಭಾರತೀಯ ಕಾನೂನು ಅಡಿ ನ್ಯಾಯಸಮ್ಮತವಾಗಿರಬೇಕು. ಕಾನೂನು ವಿರೋಧಿ ವ್ಯಾಪಾರ ಮಾಡಲು ಪಾಲುದಾರಿಕೆ ಸಂಸ್ಥೆ ಸ್ಥಾಪಿಸಲು ಸಾಧ್ಯವಿಲ್ಲ. ಸೆಕ್ಷನ್ 2 (b) ಪ್ರಕಾರ, ಯಾವುದೇ ವ್ಯಾಪಾರ, ಅದರಿಂದ ಬರುವ ಆದಾಯ, ಮಾಡುವ ಬಗ್ಗೆ ಸ್ಪಷ್ಟವಾಗಿ ಡೀಡ್ ನಲ್ಲಿ ಉಲ್ಲೇಖಿಸಿರಬೇಕು.

ಲಾಭ ಹಂಚಿಕೆ: ಪಾಲುದಾರಿಕೆ ಕರಾರು ಪ್ರಕಾರ ಪಾಲುದಾರರು ಲಾಭ ಹಂಚಿಕೆ ಮಾಡಿಕೊಳ್ಳಲು ಅರ್ಹರು. ಒಂದು ವೇಳೆ ನಷ್ಟ ಸಂಭವಿಸಿದರೆ ಅಷ್ಟೇ ಪ್ರಮಾಣದಲ್ಲಿ ಪಾಲುದಾರರು ನಷ್ಟ ಕಟ್ಟಿಕೊಡಬೇಕು.

ಸಾಲಕ್ಕೆ ಪಾಲುದಾರರ ಹೊಣೆ : ಪಾಲುದಾರಿಕೆ ಸಂಸ್ಥೆಯ ಲಾಭ- ನಷ್ಟ ಹಂಚಿಕೆ ಹೊಣೆಗಾರಿಕೆ ಪಾಲುದಾರರದ್ದೇ ಅಗಿರುತ್ತದೆ. ಪಾಲುದಾರಿಕೆ ಸಂಸ್ಥೆ ನಷ್ಟ ಅನುಭವಿಸಿದರೆ ಸಾಲ ತೀರಿಸಲು ಪಾಲುದಾರರ ಸ್ವಂತ ಅಸ್ತಿಯನ್ನು ಜಪ್ತಿ ಮಾಡಿಕೊಳ್ಳಬಹುದು. ಆದರೆ ಕಂಪನಿಯಲ್ಲಿ ಶೇರುದಾರರು ಆಗಿದ್ದರೆ, ಕಂಪನಿಯ ಸಾಲಕ್ಕೆ ಕಂಪನಿ ಹೊಣೆ. ಶೇರುದಾರರ ಅಥವಾ ನಿರ್ದೇಶಕರ ಸ್ವಂತ ಆಸ್ತಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ!.

ಪಾಲುದಾರಿಕೆ ಸಂಸ್ಥೆ ಸ್ಥಾಪನೆ

ಭಾರತೀಯ ಪಾಲುದಾರಿಕೆ ಕಾಯ್ದೆ ಮಹತ್ವದ ಅಂಶಗಳು:

ಯಾವುದೇ ಒಂದು ಆಸ್ತಿಯನ್ನು ಜಂಟಿಯಾಗಿ ಖರೀದಿಸಿ ಮಾರಾಟ ಮಾಡುವುದನ್ನು ಪಾಲುದಾರಿಕೆ ಎಂದು ಕರೆಯಲಾಗದು.

ಪಾಲುದಾರಿಕೆ ಸಂಸ್ಥೆ ಪರ ಕೆಲಸ ಮಾಡಿ ಕಮೀಷನ್ ಪಡೆದವರು ಪಾಲುದಾರರು ಆಗಲು ಸಾಧ್ಯವಿಲ್ಲ.

ಮೃತ ಪಾಲುದಾರನ ವಿದವೆ ಪತ್ನಿ ಅಥವಾ ಅಪ್ರಾಪ್ತ ಮಗು ಪಾಲುದಾರರು ಅಗಲು ಸಾಧ್ಯವಿಲ್ಲ.

ಸಾಲ ಕೊಟ್ಟವರು ಪಾಲುದಾರರು ಅಗಲು ಅವಕಾಶವಿಲ್ಲ.

ಪಾಲುದಾರಿಕೆ ವಿಧಗಳು: ಪಾಲುದಾರಿಕೆ ಸಂಸ್ಥೆಯಲ್ಲಿ ಹಲವಾರು ವಿಧಗಳಿವೆ. ಒಂದು ಕಾಲಮಿತಿ ನಿಗದಿ ಮಾಡಿ ಪಾಲುದಾರಿಕೆ ಸಂಸ್ಥೆ ಸ್ಥಾಪಿಸಬಹುದು. ಇಲ್ಲವೇ ಒಂದು ಉದ್ದೇಶ ( ಲಾಭ) ಸಾಧನೆಗಾಗಿ ಪಾಲುದಾರಿಕೆ ಸಂಸ್ಥೆಯನ್ನು ಅನಿರ್ಧಿಷ್ಟ ಅವಧಿಗೆ ಸ್ಥಾಪಿಸಬಹದು.

Particular Partnership ( Partnership act section 8) : ಒಂದು ನಿರ್ಧಿಷ್ಟ ಯೋಜನೆಯ ಕಾರ್ಯಗತಗೊಳಿಸಲು ಸ್ಥಾಪಿಸುವ ಪಾಲುದುಆರಿಕೆ ಸಂಸ್ಥೆ. ಯೋಜನೆ ಮುಗಿದ ಬಳಿಕ ಪಾಲುದಾರಿಕೆ ಸಂಸ್ಥೆಯನ್ನು ರದ್ದು ಮಾಡಬಹುದು. ಇಲ್ಲವೇ ಪಾಲುದಾರರು ಒಪ್ಪಿಗೆ ಮೇಲೆ ಮುಂದುವರೆಸಬಹುದು.

General Partnership: ಒಂದು ಕಾನೂನು ಬದ್ದ ವ್ಯವಹಾರ ನಡೆಸಲು ಸೃಷ್ಟಿಸುವ ಸಂಸ್ಥೆ. ಇದಕ್ಕೆ ನಿಗಧಿತ ಉದ್ದೇಶ ಇರುವುದಿಲ್ಲ. ಇದು ದೀರ್ಘ ಕಾಲ ಇರುತ್ತದೆ.

ಪಾಲುದಾರರ ವಿಧಗಳು:

ಮ್ಯಾನೇಜಿಂಗ್ ಪಾಲುದಾರ: ಪಾಲುದಾರಿಕೆ ಸಂಸ್ಥೆಯ ದೈನಂದಿನ ವ್ಯವಹಾರವನ್ನು ನೋಡಿಕೊಂಡು ಹೋಗುವ ಪಾಲುದಾರನಾಗಿರುತ್ತಾನೆ.

ಸ್ಲೀಪಿಂಗ್ ಪಾಟ್ನರ್ : ಈತ ಪಾಲುದಾರಿಕೆ ಸಂಸ್ಥೆ ವ್ಯಾಪಾರ, ದೈನಂದಿನ ಕೆಲಸದಲ್ಲಿ ಭಾಗಿಯಾಗಿರುವುದಿಲ್ಲ. ಆದರೆ ಎಲ್ಲಾ ಪಾಲುದಾರರಂತೆ ಹೊಣೆಗಾರನಾಗಿರುತ್ತಾನೆ.

ನಾಮಿನಲ್ ಪಾಲುದಾರ:

ಈತ ಪಾಲುದಾರಿಕೆ ಸಂಸ್ಥೆಯಲ್ಲಿ ಇರುತ್ತಾನೆ. ನೈಜವಾಗಿ ಈತನಿಗೆ ಪಾಲುದಾರಿಕೆ ಸಂಸ್ಥೆಯ ವಹಿವಾಟಿನಲ್ಲಿ ಹೆಚ್ಚು ಆಸಕ್ತನಾಗಿರುವುದಿಲ್ಲ.

ಲಾಭಕ್ಕಾಗಿ ಪಾಲುದಾರ: ಕೇವಲ ಲಾಭಕ್ಕಾಗಿ ಪಾಲುದಾರನಾಗಿರುತ್ತಾನೆ. ನಷ್ಟವನ್ನು ಭರಿಸಲು ಅವಕಾಶ ಇರುವುದಿಲ್ಲ.ಪಾಲುದಾರಿಕೆ ಸಂಸ್ಥೆ ನಷ್ಟ ಹೊಂದಿದರೆ ಈ ಪಾಲುದಾರ ಹೊಣೆಗಾರನಾಗುವುದಿಲ್ಲ.

ಅಪ್ತಾಪ್ತ ಪಾಲುದಾರ: ಭಾರತೀಯ ಕರಾರು ಕಾಯ್ದೆ ಪ್ರಕಾರ ಅಪ್ರಾಪ್ತ ಪಾಲುದಾರನಾಗಲು ಸಾಧ್ಯವಿಲ್ಲ. ಅದರೆ ಒಂದು ಪಾಲುದಾರಿಕೆ ಸಂಸ್ಥೆಯ ಲಾಭವನ್ನು ಮಾತ್ರ ಪಡೆಯಲು ಅಪ್ರಾಪ್ತ ಪಾಲುದಾರ ಅರ್ಹನಾಗಿರುತ್ತಾನೆ. ಆದರೆ ಪಾಲುದಾರಿಕೆ ಸಂಸ್ಥೆಯ ನಷ್ಟಗಳಿಗೆ ಅಪ್ತಾಪ್ತ ಪಾಲುದಾರ ಹೊಣೆಗಾರ ಮಾಡಲು ಸಾಧ್ಯವಿಲ್ಲ.

Partner by estoppel: ಎಸ್ಟೋಪಿಲ್ ಪಾಲುದಾರನಾಗಿರುವುದಿಲ್ಲ. ಆದರೆ ಈತ ಪಾಲುದಾರಿಕೆ ಸಂಸ್ಥೆ ಯನ್ನು ಪ್ರತಿನಿಧಿಸಬಹುದು.

ಕಾನೂನು ಬದ್ಧ ವ್ಯವಹಾರ: ಕರಾರು ಕಾಯ್ದೆ 1872 ಸೆಕ್ಷನ್ 27 ಪ್ರಕಾರ ಯಾವುದೇ ಒಂದು ಪಾಲುದಾರಿಕೆ ಸಂಸ್ಥೆ ಒಂದು ಕಾನೂನು ಬದ್ಧ ವ್ಯಾಪಾರವನ್ನು ಮಾತ್ರ ಮಾಡಬಹುದು.

Rights of Partners: ಒಂದು ಸಂಸ್ಥೆಯಲ್ಲಿ ಪಾಲುದಾರರಾದ ಬಳಿಕ ಪಾಲುದಾರರಿಗೆ ಹಲವು ಹಕ್ಕುಗಳು ಲಭ್ಯವಾಗುತ್ತವೆ.

ಪಾಲುದರಿಕೆ ಕಾಯ್ದೆ ಸೆಕ್ಷನ್ 12 (a) ಪ್ರಕಾರ ಯಾವುದೇ ಪಾಲುದಾರ ಸಂಸ್ಥೆಯ ವ್ಯಾಪಾರ, ವಹಿವಾಟಿನಲ್ಲಿ ಭಾಗಿಯಾಗಬಹುದು. ನಿರ್ವಹಣೆ ಮಾಡಬಹುದು.

ಪಾಲುದಾರ ತನ್ನ ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಆದರೆ ತೀರ್ಮಾನ ತೆಗೆದುಕೊಳ್ಳಲು ಇತರೆ ಪಾಲುದಾರರ ಸಮ್ಮತಿ ಕಡ್ಡಾಯವಾಗಿ ಪಡೆಯಬೇಕು.

ಪಾಲುದಾರಿಕೆ ಸಂಸ್ಥೆಯ ಹಣಕಾಸು, ಲಾಭ ನಷ್ಟದ ಎಲ್ಲಾ ಪುಸ್ತಕಗಳನ್ನು ಪರಿಶೀಲಿಸುವ ಹಕ್ಕು ಪಾಲುದಾರರಿಗೆ ಇರುತ್ತದೆ.

ಸೆಕ್ಷನ್ 13(b) ಪ್ರಕಾರ ಪಾಲುದಾರಿಕೆ ಸಂಸ್ಥೆಯ ಲಾಭವನ್ನು ಕೇಳಿ ಪಡೆಯುವ ಹಕ್ಕು ಇರುತ್ತದೆ.

ಹೂಡಿಕೆ ಮಾಡಿದ ಬಂಡವಾಳದ ಮೇಲೆ ಬಡ್ಡಿಯನ್ನು ಪಡೆಯುವ ಹಕ್ಕು ಇರುತ್ತದೆ.

ಪಾಲುದಾರಿಕೆ ಸಂಸ್ಥೆಯಿಂದ ನಿರ್ಗಮಿಸುವ ಹಕ್ಕು ಪಾಲುದಾರರಿಗೆ ಇರುತ್ತದೆ. ಅಥವಾ ಪಾಲುದಾರನು ಕರ್ತವ್ಯ ನಿರ್ವಹಿಸಲು ವಿಫಲನಾದಲ್ಲಿ ಅಂತಹ ಪಾಲುದಾರರನ್ನು ನ್ಯಾಯಾಲಯದ ಮೂಲಕ ವಜಾಗೊಳಿಸಬಹುದು.

ಪಾಲುದಾರಿಕೆ ಸಂಸ್ಥೆ ನೋಂದಣಿ:

ಸೆಕ್ಷನ್ 58 ಪಾಲುದಾರಿಕೆ ಸಂಸ್ಥೆ ನೋಂದಣಿ ಬಗ್ಗೆ ವಿವರಿಸಲಾಗಿದೆ. ಪಾಲುದಾರಿಕೆ ಸಂಸ್ಥೆಯ ಕರಾರು ಸೇರಿದಂತೆ ಅರ್ಜಿಯನ್ನು ಪಾಲುದಾರಿಕೆ ಸಂಸ್ಥೆ ಕಾರ್ಯ ನಿರ್ವಹಿಸುವ ಸ್ಥಳದ ವ್ಯಾಪ್ತಿಗೆ ಬರುವ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪಾಲುದಾರಿಕೆ ಸಂಸ್ಥೆಯನ್ನು ನೋಂದಾಯಿಸಬಹುದು.

ಪಾಲುದಾರಿಕೆ ಹೆಸರು,

ವ್ಯಾಪಾರದ ವಿವರ,

ವ್ಯಾಪಾರದ ಸ್ಥಳ,

ವ್ಯಾಪಾರದ ಇತರೆ ಸ್ಥಳ,

ಪಾಲುದಾರಿಕೆ ಸಂಸ್ಥೆಯ ಕಾಲಾವಧಿ,

ಪಾಲುದಾರರ ಹೆಸರು ವಿಳಾಸ,

ಪಾಲುದಾರರು ಸೇರಿದ ದಿನಾಂಕದ ವಿವರ,

ಈ ಎಲ್ಲಾ ವಿಷಯಗಳನ್ನು ಅರ್ಜಿಯ ಜತೆ ಸಲ್ಲಿಸಬೇಕು. ಅರ್ಜಿಯ ಮೇಲೆ ಎಲ್ಲಾ ಪಾಲುದಾರರು ಸಹಿ ಮಾಡಿರಬೇಕು. ಅದರೆ ಪಾಲುದಾರಿಕೆ ಸಂಸ್ಥೆಯ ಹೆಸರು ಯಾವುದೇ ರಾಜ ಮನೆತನದ ಹೆಸರು, ಸರ್ಕಾರದ ಹೆಸರು ಒಳಗೊಂಡಿರಬಾರದು. ನೋಂದಣಾಧಿಕಾರಿಗೆ ಎಲ್ಲಾ ಷರತ್ತುಗಳು ಪೂರೈಸಿದ ಬಗ್ಗೆ ಸಂತೃಪ್ತಿ ಇದ್ದಲ್ಲಿ ಸೆಕ್ಷನ್ 58 ಪ್ರಕಾರ ಪಾಲುದಾರಿಕೆ ಸಂಸ್ಥೆಯನ್ನು ನೋಂದಣಿ ಮಾಡುತ್ತಾರೆ.

ನೋಂದಣಿ ಮಾಡದ ಪಾಲುದಾರಿಕೆ ಸಂಸ್ಥೆ: ಭಾರತದಲ್ಲಿ ಪಾಲುದಾರಿಕೆ ಸಂಸ್ಥೆಯನ್ನು ಕಡ್ಡಾಯ ನೋಂದಣಿ ಮಾಡಬೇಕು ಎಂಬ ನಿಯಮವಿಲ್ಲ. ನೋಂದಣಿ ಮಾಡದ ಪಾಲುದರಿಕೆ ಸಂಸ್ಥೆಗಳ ಮೇಲೆ ದಂಡ ಹಾಕಲು ಅವಕಾಶವಿಲ್ಲ. ಆದರೆ ಇಂಗ್ಲೀಷ್ ಕಾನೂನಿನಲ್ಲಿ ಕಡ್ಡಾಯವಾಗಿ ಪಾಲುದಾರಿಕೆ ಸಂಸ್ಥೆಯನ್ನು ನೋಂದಣಿ ಮಾಡಬೇಕು. ಪಾಲುದಾರಿಕೆ ಸಂಸ್ಥೆ ನೋಂದಣಿ ಮಾಡದಿದ್ದರೆ ಪಾಲುದಾರರಲ್ಲಿ ವಿವಾದ ಉಂಟಾದಲ್ಲಿ ಪರಿಹಾರ ಪಡೆಯುವಾಗ ಸವಾಲುಗಳು ಎದುರಾಗುತ್ತವೆ.

ಪಾಲುದಾರಿಕೆ ಸಂಸ್ಥೆ ನೋಂದಣಿ ಮಾಡದಿದ್ದರೆ, ಸಿವಿಲ್ ನ್ಯಾಯಾಲಯದಲ್ಲಿ ದಾವೆ ಪಡೆಯುವ ಅಧಿಕಾರ ಇರುವುದಿಲ್ಲ.

ಮೂರನೆ ವ್ಯಕ್ತಿಯಿಂದ ಕರಾರು ಉಲ್ಲಂಘನೆಯಾದಲ್ಲಿ, ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಲು ಸಾಧ್ಯವಿಲ್ಲ. ಪಾಲುದಾರರು ಪರಿಹಾರ ಪಡೆಯಲು ಅಸಾಧ್ಯ.

ಮೂರನೇ ವ್ಯಕ್ತಿ ಪಾಲುದಾರಿಕೆ ಸಂಸ್ಥೆ ವಿರುದ್ಧ ದಾವೆ ಹೂಡಲು ಆಗದು.

Related News

spot_img

Revenue Alerts

spot_img

News

spot_img