25.3 C
Bengaluru
Friday, July 5, 2024

10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಹೇಗೆ?ಜೂನ್ 14 ಕೊನೆಯ ದಿನ

ಬೆಂಗಳೂರು ಏ8;ಇತ್ತಿಚೀನ ದಿನಗಳಲ್ಲಿ ಆಧಾರ್ ಕಾರ್ಡ ಇಲ್ಲದೇ ಯಾವುದೇ ಇಲಾಖೆಗಳಲ್ಲಿ ,ಸಂಘ, ಸಂಸ್ಥೆಗಳಲ್ಲಿ, ಯಾವುದಾದರೂ ಯೋಜನೆಯ ಸವಲತ್ತು ಪಡೆಯಬೇಕಾದರೆ ಮೊದಲು ಅರ್ಜಿದಾರರ ವೈಯಕ್ತಿಕ ಮಾಹಿತಿ ಒಳಗೊಂಡ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಮತ್ತು ಹೆಸರು ಬದಲಾವಣೆ, ಪೋನ್ ನಂಬರ್, ವಿಳಾಸ ಬದಲಾವಣೆ ಆಗಿದ್ದರೆ, ಯೋಜನೆ ಉಪಯೋಗ ಸಿಗುವುದು ಕೈ ತಪ್ಪುತ್ತದೆ. ದೇಶದ ಕೋಟಿಗಟ್ಟಲೆ ಆಧಾರ್ ಕಾರ್ಡ್ ಹೊಂದಿರುವವರಿಗೆ ಉತ್ತಮ ಸುದ್ದಿಯನ್ನು ನೀಡಿದೆ. ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಅನೇಕ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ, ಈಗ UIDAI ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಹೊಸ ಆದೇಶಗಳನ್ನು ಹೊರಡಿಸಿದೆ ,ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿರುವ ವಿಷಯ ನಿಮಗೂ ಗೊತ್ತಿದೆ. ಬ್ಯಾಂಕ್ ನಲ್ಲಿ ಖಾತೆ ತೆರೆಯುವುದು ಅಥವಾ ಸರ್ಕಾರದ ಯೋಜನೆಯ ಲಾಭ ಪಡೆಯುವುದು ಮುಂತಾದ ಬ್ಯಾಂಕ್ ವಲಯದಲ್ಲಿ ಯಾವುದೇ ಕೆಲಸ ಮಾಡಬೇಕಾದರೆ ಅದಕ್ಕೆ ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ.ಸರ್ಕಾರವು ದೇಶದ ನಿವಾಸಿಗಳ ವೈಯಕ್ತಿಕ ಗುರುತಿಗಾಗಿ ಬಹು ಗುರುತಿನ ದಾಖಲೆಗಳನ್ನು ಅಧಿಕೃತಗೊಳಿಸಿದ್ದು, ಅವುಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಪ್ರಾಥಮಿಕ ಗುರುತಿನ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಕಾರ್ಡ್‌ಗಳು ಮುಖ್ಯವಾಗಿದ್ದರೂ, ಆಧಾರ್ ಕಾರ್ಡ್ ಅತ್ಯಂತ ಮುಖ ದಾಖಲೆಯಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.

ಆದರೆ ನಮ್ಮ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ನವೀಕರಿಸುವುದು ಅವಶ್ಯಕ, ಇಲ್ಲದಿದ್ದರೆ ನಮಗೆ ಲಭ್ಯವಿರುವ ಸೌಲಭ್ಯಗಳಿಂದ ವಂಚಿತರಾಗುತ್ತೇವೆ. ಪ್ರಸ್ತುತ ಯುಐಡಿಎಐ ನಿಮ್ಮ 10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ಜೂನ್ 14 ರ ಮೊದಲು ನೀವು ಅದನ್ನು ಉಚಿತವಾಗಿ ನವೀಕರಿಸಬಹುದು ಎಂದು ಘೋಷಿಸಿದೆ. ಈ ಹಿಂದೆ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲು 25 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು, ಆದರೆ ಈಗ ನೀವು ಅದನ್ನು ಉಚಿತವಾಗಿ ನವೀಕರಿಸಬಹುದು.ಭಾರತದ ಪ್ರಜೆ ಆದವರು ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದ್ದು, 5 ವರ್ಷದ ಮಗು ಕೂಡ ಆಧಾರ್ ಕಾರ್ಡ್ ಅನ್ನು ಮಾಡಿಕೊಳ್ಳಹುದಾಗಿದೆ.

10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಹೇಗೆ?
ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ತೆರಳಿ, ಅಲ್ಲಿ 50 ರೂಪಾಯಿಗಳು ಶುಲ್ಕವನ್ನು ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಆದರೆ ಇದೀಗ UIDAI ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಿಕೊಡಲು ಮುಂದಾಗಿದ್ದು, ಈ ಉಚಿತ ಆಧಾರ್ ನವೀಕರಣವನ್ನು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ.

ಮೈ ಆಧಾರ್ ಪೋರ್ಟಲ್ ಗೆ https://myaadhaar.uidai.gov.in/ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಜೂನ್ 14ರವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು UIDAI ಘೋಷಿಸಿದ್ದು, ಆಧಾರ್ ನವೀಕರಣ ಶುಲ್ಕವನ್ನು ಮನ್ನಾ ಮಾಡಲಾಗುತ್ತಿದೆ ತಿಳಿಸಿದ್ದು, ಇದನ್ನು ಹೊರತುಪಡಿಸಿ ವಿವಿಧ ಕೇಂದ್ರಗಳಲ್ಲಿ ಆಧಾರ್‌ ವಿವರ ಪರಿಷ್ಕರಿಸಲು 50 ರೂ ಶುಲ್ಕ ವಿಧಿಸಲಾಗುತ್ತದೆ ಎಂದು ಯುಐಡಿಎಐ ಹೇಳಿದೆ.ನಿಯಮದ ಪ್ರಕಾರ ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷ ಪೂರ್ಣಗೊಂಡ ಬಳಿಕ ಕನಿಷ್ಠ ಒಂದು ಬಾರಿ ಪರಿಷ್ಕರಿಸಬೇಕಿದ್ದು, ಈ ಪ್ರಯೋಜನವು ಮುಂದಿನ ಮೂರು ತಿಂಗಳ ಅವಧಿಗೆ ಜೂನ್ 14ರವರೆಗೆ ಮಾತ್ರ ಲಭ್ಯವಿರುತ್ತದೆ.

 

ಆಫ್ಲೈನ್ ನವೀಕರಣಗಳಿಗಾಗಿ ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಯುಐಡಿಎಐ ಪ್ರಕಾರ, ರೂ 50 ಶುಲ್ಕವನ್ನು ಪಾವತಿಸುವ ಮೂಲಕ ನಿಮ್ಮ ಜನಸಂಖ್ಯಾ ವಿವರಗಳನ್ನು (ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ) ನೀವು ಸುಲಭವಾಗಿ ನವೀಕರಿಸಬಹುದು. ಬಯೋಮೆಟ್ರಿಕ್ ಅಪ್ಡೇಟ್ ನಿಮಗೆ 100 ರೂಪಾಯಿಗಳನ್ನು ಹಿಂತಿರುಗಿಲಾಗುತ್ತದೆ.

ಆಧಾರ್ ಕಾರ್ಡ್ ನವೀಕರಿಸುವುದು ಹೇಗೆ?

*ಮೊದಲು ಆಧಾರ್ ಸ್ವಯಂ ಸೇವಾ ಅಪ್ಡೇಟ್ ಪೋರ್ಟಲ್ಗೆ ಭೇಟಿ ನೀಡಿ
*ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ ಆಯ್ಕೆಯನ್ನು ಆರಿಸಿ.
*ನಿಮ್ಮ ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು OTP ಯೊಂದಿಗೆ ಸೈನ್ ಇನ್ ಮಾಡಿ.
*‘Proceed to address update’ ಆಯ್ಕೆಮಾಡಿ.
*12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
*ನಿಮ್ಮ OTP ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಿ.
*ನಿಮ್ಮ ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ ಮತ್ತು ‘Submit’ ಬಟನ್ ಒತ್ತಿರಿ.

Related News

spot_img

Revenue Alerts

spot_img

News

spot_img