28.2 C
Bengaluru
Wednesday, July 3, 2024

ರೇರಾದಲ್ಲಿ ರಿಯಲ್ ಎಸ್ಟೇಟ್ ಏಜೆಂಟರ ಆನ್‌ಲೈನ್ ನೋಂದಣಿ ಹೇಗೆ ?

ಬೆಂಗಳೂರು, ಆ. 18: ರಿಯಲ್ ಎಸ್ಟೇಟ್ ನಿಯಂತ್ರಣ ನಿಯಮ ಅಸ್ತಿತ್ವಕ್ಕೆ ಬಂದ ಬಳಿಕ ರಿಯಲ್ ಎಸ್ಟೇಟ್ ಏಜೆಂಟರು, ಸಂಸ್ಥೆ, ಕಂಪನಿಗಳು ರೇರಾದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ನೋಂದಣಿ ಮಾಡಿದವರಷ್ಟೇ ರಿಯಲ್ ಎಸ್ಟೇಟ್ ವಹಿವಾಟು ಮಾಡಲು ಅರ್ಹರು. ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಏಜೆಂಟರ ನೋಂದಣಿಗಾಗಿ ಕರ್ನಾಟಕ ರೇರಾ ಆನ್‌ಲೈನ್ ನಲ್ಲಿಯೇ ಅವಕಾಶ ಮಾಡಿಕೊಟ್ಟಿದೆ. ಅನ್‌ಲೈನ್ ನಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಈ ಕೆಳಗೆ ವಿವರಿಸಲಾಗಿದೆ.

ಮೊದಲ ಹೆಜ್ಜೆ : ರಿಯಲ್ ಎಸ್ಟೇಟ್ ಏಜೆಂಟರು ಅಥವಾ ಸಂಸ್ಥೆ, ಟ್ರಸ್ಟ್ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಅಧಿಕೃತ ವೆಬ್ ತಾಣಕ್ಕೆ ಹೋಗಬೇಕು. ಅಲ್ಲಿ ಏಜೆಂಟ್ ನೋಂದಣಿ ವಿಭಾಗದಲ್ಲಿ ಕ್ಲಿಕ್ ಮಾಡಬೇಕು.

ಎರಡನೇ ಹೆಜ್ಜೆ: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಧಿಕೃತ ವೆಬ್ ತಾಣದಲ್ಲಿ ಇಮೇಲ್ ಮೂಲಕ ಲಾಗಿನ್ ಆಗಬೇಕು. ರಿಯಲ್ ಎಸ್ಟೇಟ್ ಏಜೆಂಟ್, ಅಥವಾ ಫರ್ಮ್ , ಅಥವಾ ಟ್ರಸ್ಟ್ ಅಥವಾ ಕಂಪನಿ ಎಂಬುದರ ಬಗ್ಗೆ ಸ್ಪಷ್ಟ ಕಲಂ ಆಯ್ಕೆ ಮಾಡಬೇಕು. ಅದಾದ ಬಳಿಕ ನೆಕ್ಸ್ ಬಟನ್ ಒತ್ತಿದರೆ ಮುಂದಿನ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ.

ಮೂರನೇ ಹೆಜ್ಜೆ: ಮೂರನೇ ಹಂತದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಅಥವಾ ಫರ್ಮ್ ನ ವಿವರ ನಮೂದಿಸಬೇಕು. ಹೆಸರು, ವಿಳಾಸ, ಆಧಾರ್ ನಂಬರ್, ಮೊಬೈಲ್ ನಂಬರ್, ಇಮೇಲ್ ವಿಳಾಸ, ಪಾನ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು. ಮತ್ತು ವಹಿವಾಟಿನ ವಿಳಾಸವನ್ನು ನಮೂದಿಸಬೇಕು.

ನಾಲ್ಕನೇ ಹೆಜ್ಜೆ: ನಾಲ್ಕನೇ ಹಂತದಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಳ್ಳಬೇಕು. ರೇರಾದಲ್ಲಿ ನೋಂದಣಿ ಮಾಡುವ ಮುನ್ನ ಆಧಾರ್ ಕಾರ್ಡ್, ಪ್ರಮಾಣ ಪತ್ರ ( ಅಫಿಡವಿತ್ ) ವಿಳಾಸದ ದಾಖಲೆಗಳನ್ನು ಜೆಪೆಗ್ ರೂಪದಲ್ಲಿ ಸಾಫ್ಟ್ ಕಾಫಿ ಇಟ್ಟುಕೊಂಡಿರಬೇಕು. ಪಾನ್ ಕಾರ್ಡ್ , ಪ್ರಮಾಣ ಪತ್ರ ಹಾಗೂ ಅಡ್ರಸ್ ಪ್ರೂಪ್ ವಿಭಾಗದಲ್ಲಿ ಕ್ಲಿಕ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅದಾದ ಬಳಿಕ ಮತ್ತೊಂದು ವಿಭಾಗಕ್ಕೆ ಹೋಗಬೇಕು.

ಐದನೇ ಹೆಜ್ಜೆ: ಐದನೇ ಹಂತದಲ್ಲಿ ನೀವು ಕೊಟ್ಟಿರುವ ಇವರಗಳು ತೆರೆದುಕೊಳ್ಳುತ್ತವೆ. ಅವು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಎಲ್ಲವೂ ಸರಿಯಾಗಿದ್ದರೆ, ನೆಕ್ಸ್ ಬಟನ್ ಒತ್ತಿದರೆ, ನೋಂದಣಿ ಶುಲ್ಕ ಪಾವತಿ ಕಲಂ ತೆರೆದುಕೊಳ್ಳುತ್ತದೆ.

ಆರನೇ ಹೆಜ್ಜೆ : ರೇರಾ ಆನ್‌ಲೈನ್ ಪೇಮೆಂಟ್ ಪೇಜ್ ತೆರೆದುಕೊಳ್ಳುತ್ತದೆ. ನೋಂದಣಿ ಶುಲ್ಕವನ್ನು ಖಚಿತ ಪಡಿಸಿಕೊಂಡು ಅಷ್ಟು ಮೊತ್ತವನ್ನು ಪೇಮೆಂಟ್ ಗೇಟ್ ವೇ ಮಾದರಿಯಲ್ಲಿ ಪಾವತಿ ಮಾಡಬೇಕು. ಆನ್‌ಲೈನ್ ಮೂಲಕವೇ ನೋಂದಣಿ ಶುಲ್ಕ ಪಾವತಿಸಬೇಕು. ಪಾವತಿ ವಿಧಾನಕಲಂನಲ್ಲಿ ಇ ಪೇಮೆಂಟ್ ವಿಭಾಗ ಆಯ್ಕೆ ಮಾಡಿಕೊಂಡು, ಆ ಬಳಿಕ ನೆಟ್ ಬ್ಯಾಂಕಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಿಮ್ಮ ಬ್ಯಾಂಕ್ ನ್ನು ಆಯ್ಕೆ ಮಾಡಿಕೊಂಡು ಸಬ್‌ಮಿಟ್ ಮಾಡಬೇಕು. ಪೇಮೆಂಟ್ ಮಾದರಿ ಅಯ್ಕೆ ಮಾಡಿಕೊಂಡು ಪೇ ಬಟನ್ ಮೇಲೆ ಒತ್ತಿದರೆ, ನೋಂದಣಿ ಶುಲ್ಕ ಪಾವತಿಯಾಗುತ್ತದೆ. ಪೇಮೆಂಟ್ ಯಶಸ್ವಿಯಾದ ಬಳಿಕ ರೇರೇ ದಿಂದ ಒಂದು ನಂಬರ್ ಸಿಗುತ್ತದೆ. ಅದನ್ನು ಪ್ರಿಂಟ್ ತೆಗೆದುಕೊಂಡು ಇಟ್ಟಿರಬೇಕು. ನೋಂದಣಿ ಶುಲ್ಕ ಪಾವತಿ ಯಶಸ್ವಿಯಾದ ಬಳಿಕ ಅರ್ಜಿದಾರರಿಗೆ ಸ್ವೀಕೃತಿ ರಶೀದಿ ಬರುತ್ತದೆ. ಅದನ್ನು ಮುದ್ರಿಸಿಕೊಂಡು ಇಟ್ಟುಕೊಂಡಿರಬೇಕು. ಆನಂತರ ನೋಂದಣಿ ಪ್ರಕ್ರಿಯೆ ಮುಗಿಸಿದ ಬಳಿಕ ರೇರಾ ವತಿಯಿಂದಲೇ ನೋಂದಣಿ ನಂಬರ್ ನೀಡುತ್ತದೆ.

ನೋಂದಣಿ ನಂಬರ್ ಪಡೆದ ಬಳಿಕ ರಿಯಲ್ ಎಸ್ಟೇಟ್ ಬ್ರೋಕರೇಜ್ ಕೆಲಸ ಮಾಡಲು ಅನುಕೂಲವಾಗುತ್ತದೆ. ನೋಂದಣಿ ಮಾಡದೇ ನಿವೇಶನ, ಪ್ಲಾಟ್ ಕೊಡಿಸುವ ವಹಿವಾಟು ನಡೆಸಿ ಸಿಕ್ಕಿಬಿದ್ದರೆ ಅಂತಹವರ ವಿರುದ್ಧ ರೇರಾ ಶಿಸ್ತು ಕ್ರಮ ಜರುಗಿಸುತ್ತದೆ. ದುಡಿಮೆಗಿಂತಲೂ ಎರಡು ಪಟ್ಟು ದಂಡ ವಿಧಿಸುತ್ತದೆ.

Related News

spot_img

Revenue Alerts

spot_img

News

spot_img