24.3 C
Bengaluru
Saturday, December 21, 2024

ಸರಳವಾಗಿ ಹೊಸಮನೆಯನ್ನ ಹೇಗೆ ಸುಂದರವಾಗಿ ಕಾಣುವಂತೆ ಮಾಡಬೇಕು.?

ಬೆಂಗಳೂರು: ಇನ್ನೇನು 2023 ಕಳೆದು ಹೊಸ ವರ್ಷ ಬರಲು ಕೇವಲ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇವೆ. ತಮ್ಮ ಕನಸಿನ ಮನೆಯನ್ನ ಕಟ್ಟಿರುವ ಹಲವರು ಮನೆಯ ಇಂಟೀರಿಯರ್ ಡಿಸೈನ್ ಮತ್ತೆ ಡೆಕೋರೇಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ತಲೆಕೆಡಿಸಿಕೊಂಡಿರ್ತಾರೆ. ಮನೆಯನ್ನ ಸರಳವಾಗಿ ಹೇಗೆ ವಿನ್ಯಾಸ ಮಾಡಬಹುದು..? ಯಾವ ವಸ್ತುಗಳನ್ನ ಸೇರಿಸುವುದರಿಂದ ಮನೆ ಅಂದವಾಗಿ ಕಾಣುತ್ತೆ.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ…!

ಜನ ಮನೆಯ ಮೇಲೆಯೆ ಹೆಚ್ಚು ತಮ್ಮ ಗಮನವನ್ನ ಕೇಂದ್ರಿಕರಿಸೋದ್ರಿಂದ ಕೆಲ ಮನೆಯ ಭಾಗಗಳು ಹಾಗೂ ಓಳಾಂಗಣದ ಬಗ್ಗೆ ಅಷ್ಟಾಗಿ ಗಮನ ಕೊಟ್ಟಿರೋದಿಲ್ಲ.

ತಾರಸಿ: ಮನೆಯನ್ನು ಕಟ್ಟುವ ಬಹುಪಾಲು ಜನ ಸಾಧಾರಣವಾಗಿ ತಮ್ಮ ಮನೆಯ ತಾರಸಿಯನ್ನ ಕಟ್ಟಿಸಿಕೊಳ್ತಾರೆ ಆದ್ರೆ ಅದರ ಬಗ್ಗೆ ಅಷ್ಟು ಚಿಂತಿಸುವುದಿಲ್ಲ. ಇಡೀ ಮನೆಗೆ ಕಿರೀಟದಂತಿರುವ ಮನೆಯ ತಾರಸಿಯನ್ನ ನಾವು ಸುಂದರವಾಗಿಟ್ಟುಕೊಳ್ಳೋದ್ರಿಂದ ನೋಡುಗರ‌ ನೋಟವನ್ನ ಕಸಿಯಬಹುದಾಗಿದೆ. ಇನ್ನು ವೀಕೆಂಡ್, ಹಬ್ಬ ಹರಿದಿನಗಳಲ್ಲಿ ನಾವು ಮನೆಯ ಮಂದಿ ಜೊತೆ‌ ತಾರಸಿಯಲ್ಲಿ ಕುಳಿತು ಊಟ ಮಾಡಬಹುದು. ಪಾನೀಯವನ್ನ ಸೇವಿಸುತ್ತ ಹರಟೆ ಹೊಡಯುವುದು ಇನ್ನು ಮಕ್ಕಳೊಂದಿಗೆ ಆಟವಾಡಬಹುದು, ಈ ರೀತಿಯಾಗಿ ತಾರಸಿ ಸುಂದರಡವಾಗಿಡೋದ್ರಿಂದ ಬಹಳಷ್ಟು ಪ್ರಯೋಜನಗಳಿವೆ. ತಾರಸಿಯಲ್ಲಿ ತರಕಾರಿ ಸಸ್ಯಗಳನ್ನ ಬೆಳೆಸಬಹುದು.ಲಘು ಹಣ್ಣಿನ ಗಿಡಗಳನ್ನ ಬೆಳೆಸಬಹುದು. ತಾರಸಿಯಲ್ಲಿ ತೂಗುಯ್ಯಾಲೆಯನ್ನ ನಿರ್ಮಿಸೋದ್ರಿಂದ ವಿಶ್ರಾಂತಿ ಪಡೆಯಲು ಸಹಕಾರಿ ಆಗಲಿದೆ.

 

ಡೆಕೋರೇಟಿವ್, ಔಷದೀಯ ಸಸ್ಯಗಳನ್ನ‌ ಬಳಸುವುದು : ಮನೆಯನ್ನ ಅಂದವಾಗಿಡಲು ಹಾಗೂ ಮನೆಯ ತಾಪಮಾನ ಸಮಪ್ರಮಾಣದಲ್ಲಿಡಲು ನಾವು ಸಸ್ಯಗಳನ್ನ ಬಳಸಬಹುದಾಗಿದೆ. ವೈಜ್ಞಾನಿಕವಾಗಿ ಕೆಲ ಸಸ್ಯಗಳನ್ನು ಮನೆಯಲ್ಲಿ ಇಡುವುದರಿಂದ ಹಲವಾರು ಪ್ರಯೋಜನಗಳುಂಟು. ಔಷದೀಯ ಬಳ್ಳಿ ಮತ್ತು ಸಸ್ಯಗಳನ್ನ ಮನೆಯ ಮೇಲೆ‌ ಹಬ್ಬಿಸುವುದರಿಂದ ನೋಡಲು ಇದು ಸುಂದರವಾಗಿ ಕಾಣುತ್ತೆಂದರೆ ತಪ್ಪಾಗಲಾರದು. ಇನ್ನು ಮನೆಯ ಪಡಸಾಲೆ, ಅಡುಗೆ ಕೋಣೆ, ಸ್ನಾನದ ಗೃಹ ತಾರಸಿಯಲ್ಲಿ ಯಥೇಚ್ಛವಾಗಿ ಹಣ್ಣು ,ತರಕಾರಿ, ಡೆಕೋರೇಟಿವ್ ಸಸ್ಯಗಳನ್ನ ಬಳಸೋದ್ರಿಂದ ಇವು ಕಣ್ಣಿಗೆ ‌ಮುದ ನೀಡುತ್ತವೆ. ಮಡಿಕೆಗಳಲ್ಲಿ ಇವುಗಳನ್ನ ಇಡುವುದರಿಂದ ಇವು ಆಕರ್ಷಣೀಯ. ಹಾಗಾಗಿ ಹೊಸ ಮನೆಯಲ್ಲಿ ನಾವು ಡೆಕೋರೇಟಿವ್ ಸಸ್ಯಗಳನ್ನ ಬಳಕೆ ಮಾಡಬಹುದಾಗಿದೆ.

ಲಘು ಬಣ್ಣಗಳ ಬಳಕೆ :
ಮನೆಯ ಅಂದವನ್ನ ಹೆಚ್ಚಿಸುವ ಮತ್ತು ದೀರ್ಘಕಾಲದ ಬಾಳಿಕೆಗಾಗಿ ಬಣ್ಣಗಳನ್ನ‌ ಬಳಸಲಾಗುತ್ತೆ. ಬಣ್ಣಗಳನ್ನ ಆಯ್ಕೆ ಮಾಡುವ ಸಮಯದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಮನೆಗೆ ಒಪ್ಪುವಂತಹ ಮತ್ತು ಪ್ರಕಾಶಮಾನವಾದ ಬಣ್ಣಗಳನ್ನ ಬಳಸುವುದರಿಂದ ಮನೆಯನ್ನ ಅಂದವಾಗಿರಿಸಬಹುದು.

ತೆಳು ನೀಲಿ
ಹಳದಿ
ಬೂದು
ಎಳೆಗೆಂಪು
ಈ ರೀತಿಯ ಬಣ್ಣಗಳನ್ನು ಸಹ ಬಳಸಬಹುದು.

ವರ್ಣ ಚಿತ್ರಗಳು: ಮನೆಯ ಗೋಡೆಗಳ ಮೇಲೆ ವರ್ಣ ಚಿತ್ರಗಳನ್ನ ಬಳಸುವುದು ಉತ್ತಮ ಕೆಲಸ . ಏಕೆಂದರೆ ನಮ್ಮ ಪೂರ್ವಜರು ಹಿಂದಿನ ಕಾಲದಿಂದಲೂ ವರ್ಣ ಚಿತ್ರಗಳನ್ನ ಮನೆಯ ಆದ್ಯ ಡೆಕೋರೇಷನ್ ವಸ್ತುವಾಗಿ ಬಳಸುತ್ತಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆಗೆ ವಿಧ ವಿಧವಾದಂತಹ ಹಲವಾರು ಬಗೆ ವರ್ಣ ಚಿತ್ರಗಳು , ಕಲಾಕೃತಿಗಳು ನಾನಾ ಥರಹದ ಚಿತ್ರಪಟಗಳು ನಮಗೆ ಕಾಣ ಸಿಗುತ್ತವೆ ಇವುಗಳನ್ನ ಬಳಸಿದ್ದೇ ಆದಲ್ಲಿ ಮನೆಯನ್ನ ಸರಳವಾಗಿ ಅಲಂಕರಿಸಿಕೊಳ್ಳಬಹುದು. ದುಬಾರಿ ದುಡ್ಡು ತೆತ್ತು , ಸಾಲ ಮಾಡಬೇಕಾದ ಅವಶ್ಯಕತೆ ಇರೋದಿಲ್ಲ..

ಅಭಿಜಿತ್, ರೆವಿನ್ಯೂ ಫ್ಯಾಕ್ಟ್ ನ್ಯೂಸ್

Related News

spot_img

Revenue Alerts

spot_img

News

spot_img