21.1 C
Bengaluru
Thursday, December 19, 2024

ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾ ಲಾಕ್‌ ಮಾಡುವುದು ಹೇಗೆ?

ಬೆಂಗಳೂರು;ಆಧಾರ್ ಪ್ರಸ್ತುತ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಪ್ರಮುಖವಾಗಿ ನಾವು ಸರ್ಕಾರಿ ಯೋಜನೆಗಳ ಪ್ರಯೋಜನ;ವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಎಲ್ಲ ಕಾರ್ಯಗಳಿಗೆ ಮುಖ್ಯವಾಗಿದೆ.ಆಧಾರ್ ಕಾರ್ಡ್‌ ಸಂಖ್ಯೆಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಗೆ ಖನ್ನ ಹಾಕುವ, ಯಾವುದೇ OTPಗಳಿಲ್ಲದೆ ನಿಮ್ಮ ಹಣವನ್ನು ದೋಚುವ ವಂಚನೆ ಬೆಳಕಿಗೆ ಬಂದಿದೆ. ಈ ವಂಚಕರು ಆಧಾರ್ ಖಾರ್ಡ್ ನಂಬರ್ ಆಧರಿಸಿ ಅದಕ್ಕೆ ನೀಡಿರುವ ಬಯೋ ಮೆಟ್ರಿಕ್, ಫಿಂಗರ್ ಪ್ರಿಂಟ್ ಡೇಟಾ ಸಂಗ್ರಹಿಸುತ್ತಾರೆ. ಇದರ ಆಧಾರದಲ್ಲಿ ಬ್ಯಾಂಕ್ ಖಾತೆಯನ್ನು ಪ್ರವೇಶಿಸಿ, ಅದಕ್ಕೆ ಲಿಂಕ್ ಆಗಿರುವ ಅಕೌಂಟ್‌ಗೆ ತೆರಳಿ ಹಣವನ್ನು ಎಗರಿಸುತ್ತಿರುವ ಬಗ್ಗೆ ದೂರು ದಾಖಲಿದೆ. ಹೀಗಾಗಿ ನಿಮ್ಮ ಆಧಾರ್‌ನ್ನು ತಕ್ಷಣ ಲಾಕ್ ಮಾಡಿ.ಆಧಾರ್ ಕಾರ್ಡ್ ನ ಸಂಖ್ಯೆಯನ್ನು ಲಾಕ್ ಮಾಡುವ ವಿಧಾನ ಸರಳವಾಗಿದೆ. ಆಧಾರ್ ಲಾಕ್ ಮಾಡಲು, 16 ಅಂಕಿಯ VID ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. ಇದರಲ್ಲಿ, ಮೊದಲನೆಯದಾಗಿ, SMS ಸೇವೆಯನ್ನು ಬಳಸಿಕೊಂಡು, ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು ನೀವು 1947 ಗೆ SMS ಕಳುಹಿಸಬಹುದು.ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಿದ ಬಳಿಕ ಯಾವುದೇ ವ್ಯಕ್ತಿ ಕಾರ್ಡ್ ಮಾಹಿತಿ ಪಡೆಯಲು ನೋಡಿದರೆ, ಎರರ್ ಕೋಡ್ 330 ಬರಲಿದೆ.

ಮೊಬೈಲ್‌ನಲ್ಲೇ ಆಧಾರ್ LOCK  ಮಾಡುವ ವಿಧಾನ

* ಆಧಾರ್ LOCK ಮಾಡಲು, GETOTP ಆಧಾರ್‌ನ ಕೊನೆಯ 4/8 ಸಂಖ್ಯೆಗಳನ್ನು 1947 ಗೆ SMS ಕಳುಹಿಸಿ

* ನಂತರ LOCKUID- ಆಧಾರ್‌ನ ಕೊನೆಯ 4/8 ಸಂಖ್ಯೆಗಳನ್ನು 1947 ಗೆ SMS ಕಳುಹಿಸಿ, ಇದರ ನಂತರ ದೃಢೀಕರಣ ಸಂದೇಶ ಬರುತ್ತದೆ.

* UNLOCK ev GETOTP-6/10 ಅಂಕಿಯ ವರ್ಚುವಲ್ IDಯನ್ನು ನಮೂದಿಸಬೇಕು

* ನಂತರ UNLOCK ಮಾಡುವ ವಿನಂತಿಯನ್ನು-UNLOCKUID ಎಂದು ಬರೆದು ಕೊನೆಯ 6/ 10 ಅಂಕಿಯ  ವರ್ಚುವಲ್ ID ನಮೂದಿಸಿ 6 ಅಂಕಿಯ OTP ಜೊತೆ ಅದನ್ನು1947ಗೆ ಕಳುಹಿಸಬೇಕು.

 

Related News

spot_img

Revenue Alerts

spot_img

News

spot_img