26.4 C
Bengaluru
Wednesday, December 4, 2024

ನೀವು ಖರೀದಿಸುವ ನಿವೇಶನಗಳಲ್ಲಿ ಸಮಸ್ಯೆ ಇದೆಯಾ ಎಂದು ತಿಳಿಯುವುದು ಹೇಗೆ..?

ಬೆಂಗಳೂರು, ಆ. 21 : ನಿವೇಶನಗಳನ್ನು ಖರೀದಿಸುವಾಗ ಹಲವಾರು ಅಂಶಗಳ ಬಗ್ಗೆ ತಿಳಿದಿರಬೇಕು. ನಿವೇಶನಗಳ ಅಳತೆಯಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಅಂದರೆ, ನಿವೇಶನಗಳ ಆಕಾರಗಳಲ್ಲಿ ಸಮಸ್ಯೆ ಇರುತ್ತದೆ. ಕೆಲವೊಮ್ಮೆ, ಸಂಬಂಧಿಕರಲ್ಲಿ ನಿವೇಶನಗಳ ಹಂಚಿಕೆ ಆಗಿರುತ್ತದೆ. ಅವರು ತಮಗೆ ತೋಚಿದ ರೀತಿಯಲ್ಲಿ ನಿವೇಶನಗಳನ್ನು ಹಂಚಿಕೊಂಡಿರುತ್ತಾರೆ. ಇದರಿಂದ ಮನೆಗಳಲ್ಲಿ ವಾಸ್ತು ಸಮಸ್ಯೆಯೂ ಇರುತ್ತದೆ. ಇನ್ನು ಈ ನಿವೇಶನಗಳನ್ನು ಮಾರಾಟ ಮಾಡುವಾಗಲೂ ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಹಾಗಾಗಿ ನಿವೇಶನ ಖರೀದಿಸುವಾಗಲೂ ವಿವಿಧ ಆಕಾರದ ಸ್ಥಲವನ್ನು ಖರೀದಿಸಲಾಗುತ್ತದೆ. ಆದರೆ, ವಾಸ್ತು ಪ್ರಕಾರ ಇದರಿಂದ ಸಮಸ್ಯೆ ಆಗುತ್ತದೆಯೇ..? ಈಗಾಗಲೇ ಖರೀದಿಸಿರುವ ಮನೆಗಳಲ್ಲಿ ಕೂಡ ಸಮಸ್ಯೆ ಇರುತ್ತದೆ. ಹೀಗಿರುವಾಗ ಭಾರತೀಯ ವಾಸ್ತು ಪ್ರಕಾರ ಇದಕ್ಕೆ ಪರಿಹಾರವಿದೆಯಾ. ಈಗಾಗಲೇ ಇಂತಹ ನಿವೇಶನವನ್ನು ಖರೀದಿಸಿದ್ದರೆ, ಅಥವಾ ಅಂತಹ ನಿವೇಶನಗಳಲ್ಲಿ ಮನೆ ನಿರ್ಮಿಸಿದ್ದರೆ, ಏನೆಲ್ಲಾ ಪರಿಹಾರಗಳಿವೆ ಎಂಬುದು ತಿಳಿಯೋಣ ಬನ್ನಿ.

ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಈಗಾಗಲೇ ಹಿಂದಿನ ವೀಡಿಯೋ ಒಂದರಲ್ಲಿ ಒಟ್ಟು 19 ಬಗೆಯ ಆಕಾರದ ಬಗ್ಗೆ ತಿಳಿಸಿಕೊಡಲಾಗಿದೆ. ಒಂದೊಂದು ಆಕಾರಕ್ಕೂ ಅದರದ್ದೇ ಆದ ಮಹತ್ವಗಳಿವೆ. ರೆಕ್ಟ್ಯಾಂಗ್ಯೂಲರ್ ಶೇಪ್ ನಲ್ಲಿ ಮನೆಯನ್ನು ಕಟ್ಟಲಾಗುತ್ತದೆ. ಈ ಮನೆಯಲ್ಲಿ ಸರ್ವವೂ ಸಿದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಆಯತಾಕಾರ ಹಾಗೂ ಸ್ಕ್ವಯರ್ ಶೇಪ್ ಮನೆಗಳನ್ನು ವಾಸಕ್ಕಾಗಿ ನಿರ್ಮಾಣ ಮಾಡುವುದು ಸೂಕ್ತ.

ಮೇಲಿನ ಎರಡು ಶೇಪ್ ಗಳು ಮನೆಗೆ ಸೂಕ್ತ ಎಂದು ಹೇಳಲಾಗಿದೆ. ರೆಕ್ಟ್ಯಾಂಗ್ಯುಲರ್ ಹಾಗೂ ಸ್ಕವಯರ್ ಶೇಪ್ ಮನೆಗಳು ವಾಸಕ್ಕೆ ಒಳ್ಳೆಯದು. ಇನ್ನು ಗೋಮುಖಿ ನಿವಾಸ ವಾಸಕ್ಕೆ ಯೋಗ್ಯವಾಗಿದ್ದು, ವ್ಯಾಘ್ರಮುಖಿ ಕಟ್ಟಡಗಳು ಫ್ಯಾಕ್ಟರಿ ಅಥವಾ ಇಂಡಸ್ಟ್ರಿಯಲ್ ಕೆಲಸಗಳಿಗೆ ಓಕೆ ಎಂದು ಈ ಹಿಂದೆಯೇ ಹೇಳಲಾಗಿದೆ. ಇನ್ನು ಕೆಲ ಮನೆಗಳು ಹಾರ್ಟ್ ಶೇಪ್ ನಲ್ಲಿ ಇರುತ್ತವೆ. ಇದರಲ್ಲಿ ನಾಲ್ಕೂ ಮೂಲೆ ಇಲ್ಲದೇ, ಮೂಲೆಗಳು ಇದ್ದರೂ ಸರಿಯಾದ ಅಳತೆಯಿಲ್ಲದಂತೆ ನಿರ್ಮಾಣ ಮಾಡಲಾಗುತ್ತದೆ.

ಇಂತಹ ಮನೆಗಳನ್ನು ನಾವು ಯಾವ ರೀತಿಯಲ್ಲಿ ಸರಿ ಮಾಡಿಕೊಳ್ಳುತ್ತದೋ ಎಂದು ನೋಡಬೇಕು. ನಾಲ್ಕೂ ಮೂಲೆಯನ್ನು ಸರಿಯಾಗಿ ಮಾಡಿಕೊಂಡು ಬಳಸಬೇಕು. ಶೇಪ್ ಇಲ್ಲದ ಈ ರೀತಿಯ ನಿವೇಶನಗಳಲ್ಲಿ ಮನೆಯನ್ನು ಸರಿಯಾದ ಆಕಾರದಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು. ಉಳಿದ ಜಾಗದಲ್ಲಿ ಗಿಡಗಳನ್ನು ಹಾಕಿಕೊಂಡು ಹಾಗೆ ಬಳಸದೇ ಖಾಲಿ ಬಿಡುವುದು ಸೂಕ್ತ. ಇಲ್ಲವೇ ಈಶಾನ್ಯದಲ್ಲಿ ಎಕ್ಸ್ಟೆಂಷನ್ ಇದ್ದರೂ ಸಮಸ್ಯೆ ಆಗುವುದಿಲ್ಲ.

ಉಳಿದ ಜಾಗದಲ್ಲಿ ಮುಖ್ಯ ಮನೆಗೆ ಅಟ್ಯಾಚ್ ಆಗದಂತೆ ನೋಡಿಕೋಮಡು, ಅಲ್ಲಿ ಪಾರ್ಕಿಂಗ್ ಜಾಗವನ್ನಾಗಿಯೋ ಅಥವಾ ಯಾವುದಾದರೂ ಯುಟಿಲಿಟಿಯನ್ನು ಕಟ್ಟಿಕೊಂಡು ಬಳಸಬಹುದು. ಆದರೆ, ಯಾವುದೇ ಕಾರಣಕ್ಕೂ ಅದನ್ನು ಮನೆಯ ಭಾಗಕ್ಕೆ ಸೇರಿಸಿಕೊಳ್ಳುವುದು ಒಳ್ಳೆಯದಲ್ಲ. ಆದಷ್ಟು ಇಂತಹ ಶೇಪ್ ಗಳ ನಿವೇಶನವನ್ನು ಖರೀದಿಸದೇ ಇರುವುದೇ ಬಹಳ ಒಳ್ಳೆಯದು. ತೀರಾ ಅನಿವಾರ್ಯ ಎನಿಸಿದಾಗ ಮಾತ್ರವೇ ಇಂತಹ ನಿವೇಶನಗಳಲ್ಲಿ ಖರೀದಿಸಬಹುದು. ಆದರೆ, ಮನೆ ನಿರ್ಮಾಣ ಮಾಡುವ ಬಗ್ಗೆಯೂ ಯೋಚಿಸಿ ನಿರ್ಮಿಸಬೇಕು.

Related News

spot_img

Revenue Alerts

spot_img

News

spot_img