#How to know # money has been #deposited # PF account
ಬೆಂಗಳೂರು : ಭವಿಷ್ಯ ನಿಧಿ (provident fund) ಹಣ ನಿವೃತ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭವಿಷ್ಯ ನಿಧಿ(PF) ಮೂಲಕ ನೌಕರರು ಪ್ರತಿ ತಿಂಗಳು ತಮ್ಮ ಪಿಎಫ್(PF) ಖಾತೆಗೆ ನಿರ್ದಿಷ್ಟ ಮೊತ್ತವನ್ನು ಜಮಾ ಮಾಡುತ್ತಾರೆ. ಉದ್ಯೋಗಿಗಳು ಹಾಗೂ ಅವರ ಕುಟುಂಬದ ಹಣಕಾಸು ದೃಷ್ಟಿಯಿಂದ ಇಪಿಎಫ್(EPF) ಖಾತೆಯು ಅತ್ಯಂತ ಮಹತ್ವದ್ದಾಗಿರುತ್ತದೆ. ಹೀಗಾಗಿ ಇಪಿಎಫ್ ಅಕೌಂಟಿನ ಬ್ಯಾಲೆನ್ಸ್ ಅನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತ, ತಮ್ಮ ಉಳಿತಾಯದ ಬಗ್ಗೆ ಸ್ಪಷ್ಟತೆ ಹೊಂದಿರುವುದು ಒಳ್ಳೆಯದು. ಕೇವಲ ನಿವೃತ್ತಿ ಜೀವನಕ್ಕೆ ಮಾತ್ರವಲ್ಲದೆ ಇಪಿಎಫ್(EPF) ಖಾತೆಯಲ್ಲಿನ ಹಣವನ್ನು ಮನೆ ಕೊಳ್ಳಲು, ಮಕ್ಕಳ ಶಿಕ್ಷಣಕ್ಕೆ, ಮಕ್ಕಳ ವಿವಾಹಕ್ಕೆ ಹೀಗೆ ಇನ್ನೂ ಕೆಲ ಉದ್ದೇಶಗಳಿಗಾಗಿ ಬಳಸಬಹುದು.ಉದ್ಯೋಗಿಗಳು ತನ್ನ PF ಖಾತೆಯಲ್ಲಿರುವ ಹಣವನ್ನು ಚೆಕ್ ಮಾಡಲು ವಿವಿಧ ವಿಧಾನಗಳಿವೆ. EPFO ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಆಗಿ ಪಾಸ್‌ಬುಕ್ ಮತ್ತು ಖಾತೆಯನ್ನು ಚೆಕ್ ಮಾಡಬಹುದು. ಆದರೆ ಅದಕ್ಕಿಂತಲೂ ಸುಲಭವಾಗಿ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಮಿಸ್ ಕಾಲ್ ಮೂಲಕ ತಿಳಿದುಕೊಳ್ಳಬಹುದು. 9966044425 ನಂಬರ್‌ಗೆ ಮಿಸ್ ಕಾಲ್ ಕೊಟ್ಟರೆ ಕೆಲ ಹೊತ್ತಿನಲ್ಲೇ ನಿಮ್ಮ ಪಿಎಫ್ ಖಾತೆಯಲ್ಲಿರುವ ಹಣದ ಬಗ್ಗೆ ಸಂದೇಶಗಳು ಬರುತ್ತವೆ. ಈಗಲೇ ಟ್ರೈ ಮಾಡಿ ನೋಡಿ,ಪಿಎಫ್(PF) ಹಣವನ್ನು ಕಡಿತಗೊಳಿಸುವ ಪ್ರಮಾಣಿತ ನಿಯಮವೆಂದರೆ ಅದು ಉದ್ಯೋಗಿಯ ಮೂಲ ವೇತನ ಮತ್ತು ಡಿಎಯ ಶೇಕಡಾ 12 ರಷ್ಟು ಮಾಡಲಾಗುತ್ತದೆ. ಇದಲ್ಲದೆ, ಕಂಪನಿಯು ಅವರ ಕಡೆಯಿಂದ ಶೇಕಡಾ 12 ರಷ್ಟು ಕೊಡುಗೆ ನೀಡುತ್ತದೆ.
1. EPFO ಅಧಿಕೃತ ವೆಬ್ಸೈಟಿಗೆ ಭೇಟಿ ಕೊಡಿ. ಇಲ್ಲಿದೆ ಅದರ ವಿಳಾಸ: unifiedportalmem.epfindia.gov.in/memberinterface/
2. ಇಲ್ಲಿ ನಿಮ್ಮ ಯುಎಎನ್ ನಂಬರ್ ಹಾಗೂ ಪಾಸವರ್ಡ್ ಹಾಕಿದ ನಂತರ ಲಾಗಿನ್ ಆಗುವಿರಿ.
3.ಇದರ ನಂತರ ‘member passbook’ ಅನ್ನು ಕ್ಲಿಕ್ ಮಾಡಬೇಕು.
4. ನಿಮ್ಮ ಇಪಿಎಫ್ ಅಕೌಂಟಿನ ಬ್ಯಾಲೆನ್ಸ್ ನಿಮಗೆ ಕಾಣಿಸುತ್ತದೆ.
5. ಪಾಸ್‌ಬುಕ್ಕಿನ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ಹಾಕಿಸಿ ಫೈಲ್ ಮಾಡಿಟ್ಟುಕೊಳ್ಳಬಹುದು.