28.2 C
Bengaluru
Wednesday, July 3, 2024

ಮನೆಯಲ್ಲಿ ಮಕ್ಕಳಿಂದ ಸಮಸ್ಯೆ ಕಾಡುತ್ತಿದ್ದರೆ, ಪರಿಹಾರ ಹೀಗೆ ಮಾಡಿಕೊಳ್ಳುವುದು

ಬೆಂಗಳೂರು, ಆ. 29 : ಮನೆಯಲ್ಲಿ ಮಕ್ಕಳಿಂದ ಸುಖಪಡುವಂತಹದ್ದು ಬಹಳ ಮುಖ್ಯವಾದ ವಿಚಾರ. ಮೊದಲನೇಐದಾಗಿ ಮಕ್ಕಳು ಆಗಬೇಕು. ಮಕ್ಕಳು ಮನೆಯಲ್ಲಿ ಇರದಿದ್ದರೆ, ಕಷ್ಟ. ಮಕ್ಕಳು ಒದ್ದರೂ, ಒಡೆದರು, ಉಗಿದರೂ ಖುಷಿಯನ್ನು ಕೊಡುತ್ತದೆ. ಅವರ ಪುಟ್ಟ ಪುಟ್ಟ ಹಜ್ಜೆ ಇಡುತ್ತಾ ಬರುವ ಗೆಜ್ಜೆ ಶಬ್ಧಗಳು ಹಾಗೂ ಮಕ್ಕಳು ನಗು, ತುಂಟಾಟವೇ ಒಂದು ಚೆಂದ. ಹಾಗಾಗಿ ಮೊದಲು ಮಕ್ಕಳು ಮನೆಯಲ್ಲಿರಬೇಕು. ಇನ್ನೊಂದು ಮಕ್ಕಳು ಉತ್ತಮವಾಗಿ ಬೆಳೆದು ಪೋಷಕರಿಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು.

ಈಶಾನ್ಯ ಕೋಣೆ ಮಕ್ಕಳಿಗೆ ಶುಭ ನೀಡುವ ದಿಕ್ಕು. ಈಶಾನ್ಯದಲ್ಲಿ ಉತ್ತರದಲ್ಲೂ ಪೂರ್ವದಲ್ಲೂ ಖಾಲಿ ಜಾಗವನ್ನು ಬಿಡಬೇಕು. ಗಾಳಿ ಬೆಳಕು ಬರುವಂತೆ ಕಿಟಕಿ ಅಥವಾ ಬಾಗಿಲನ್ನು ಇಡಬೇಕು. ಆಗ ಮನೆಯಲ್ಲಿ ಮಕ್ಕಳಿಂದ ಶುಭ ಫಲಗಳು ಸಿಗುತ್ತವೆ. ಒಂದುವೇಳೆ, ಮನೆಯ ಈಶಾನ್ಯದಲ್ಲಿ ಸ್ಟೇರ್ ಕೇಸ್ ಗಳು ಇದ್ದರೆ, ಮಕ್ಕಳಿಂದ ಆತಂಕ ತಪ್ಪಿದ್ದಲ್ಲ. ಆ ಮಕ್ಕಳಿಂದ ಏನಾದರೂ ಸಮಸ್ಯೆಗಳು ಇದ್ದೇ ಇರುತ್ತಾದೆ. ಈಶಾನ್ಯದಲ್ಲಿ ಅಡುಗೆ ಮನೆ ಇದ್ದರೆ, ಆ ಮನೆಯಿಂದ ಮಕ್ಕಳು ದೂರ ಹೋಗುವ ಸಾಧ್ಯತೆ ಇರುತ್ತದೆ.

ಟಾಯ್ಲೆಟ್ ಏನಾದರೂ ಈಶಾನ್ಯದಲ್ಲಿದ್ದರೆ, ಮನೆಯಲ್ಲಿ ಎಲ್ಲರಿಂದಲೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಅದರಲ್ಲೂ ಮಕ್ಕಳಿಂದ ಆರೋಗ್ಯದಲ್ಲಿ ಹೆಚ್ಚು ಸಮಸ್ಯೆಗಳನ್ನು ಕೊಡುತ್ತದೆ. ಹೀಗಾಗಿ ಈಶಾನ್ಯ ಕೋಣೆಯಲ್ಲಿ ಸರಿಯಾಗಿ ಇರದಿದ್ದರೆ, ಇದರಿಂದ ಮಕ್ಕಳಿಂದ ಪೋಷಕರಿಗೆ ಸುಖ ಶಾಂತಿ ನೆಮ್ಮದಿ ದೊರೆಯುವುದಿಲ್ಲ. ಹಾಗಾಗಿ ಈಶಾನ್ಯ ದಿಕ್ಕು ಮಕ್ಕಳಿಗೆ ಸಂಬಂಧಪಟ್ಟಂತಹದ್ದಾಗಿರುತ್ತದೆ. ಈಶಾನ್ಯ ದಿಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಇದ್ದಲ್ಲಿ ಮಕ್ಕಳಿಂದ ಸಮಸ್ಯೆಗಳು ಇದ್ದೇ ಇರುತ್ತವೆ.

ಆಗ್ನೇಯದಲ್ಲಿ ಯಾವುದೇ ಕಾರಣಕ್ಕೂ ನೀರು ಇರಬಾರದು. ಯಾಕೆಂದರೆ ಇದು ಬೆಂಕಿಯ ಜಾಗವಾಗಿದೆ. ಹಾಗಾಗಿ ಇಲ್ಲಿ ಬೋರ್ ಆಗಲೀ, ಸಂಪ್ ಆಗಲೀ ಇರಬಾರದು. ಇದೇನಾದರೂ ಇದ್ದರೆ, ಮನೆಯ ಯಜಮಾನಿಗೆ ಮರಣವನ್ನು ತಂದುಕೊಡುವ ಫಲವಿರುತ್ತದೆ. ಅದರಲ್ಲೂ ಬಾವಿ ಇದ್ದಲ್ಲಿ ಮರಣ ಗ್ಯಾರೆಂಟಿ. ಇನ್ನು ಸಂಪ್ ಇದ್ದಲ್ಲಿ ಮಹಿಳೆ ಅಕ್ರಮ ಸಂಬಂಧವನ್ನು ಹೊಂದುವಂತಹ ಸಾಧ್ಯತೆ ಇರುತ್ತದೆ. ಇಲ್ಲವೇ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಿ ತಪ್ಪು ಮಾಡುವಂತಹ ಸಾಧ್ಯತೆ ಇರುತ್ತದೆ. ಇದರಿಂದ ಹೆಣ್ಣು ಮಕ್ಕಳಿಂದ ಮನೆಯ ಹೆಸರನ್ನೇ ಕೆಡಿಸುವ ಸಾಧ್ಯತೆ ಬಹಳ ಇರುತ್ತದೆ.

ದಕ್ಷಿಣ ದಿಕ್ಕನ್ನು ಗಂಡು ಮಕ್ಕಳಿಗೆ ಎಂದು ಹೇಳಲಾಗುತ್ತದೆ. ಇದನ್ನು ಚಟುವಟಿಕೆಯ ಸ್ಥಳ ಕೂಡ ಎಂದು ಕೂಡ ಹೇಳಲಾಗಿದೆ. ಗಂಡು ಮಕ್ಕಳು ಅಗತ್ಯವಾಗಿ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಲ್ಲಿ, ದಕ್ಷಿಣ ದಿಕ್ಕಿನಲ್ಲಿ ನೀರು ಇರಕೂಡದು, ಸಂಪ್, ಟ್ಯಾಂಕ್ ಅಥವಾ ಬಾವಿ ಕೂಡ ಇರಬಾರದು. ಹಾಗೊಂದು ವೇಳೆ, ಇದೆಲ್ಲಾ ದಕ್ಷಿಣ ದಿಕ್ಕಿನಲ್ಲಿದ್ದರೆ, ತೊಂದರೆ ಬರುತ್ತದೆ. ಗಂಡು ಮಕ್ಕಳು ಓದುವುದಿಲ್ಲ, ದೊಡ್ಡ ಮಗನಿಗೆ ಮೃತ್ಯವಾಗಿದ್ದು, ಇವೆಲ್ಲಾ ಬಹಳ ನೆಗೆಟಿವ್ ಎನರ್ಜಿ ಅನ್ನು ಕೊಡುತ್ತದೆ.

Related News

spot_img

Revenue Alerts

spot_img

News

spot_img