25.1 C
Bengaluru
Thursday, November 21, 2024

ಬೆಂಗಳೂರಿನಲ್ಲಿ ಕೇವಲ 7 ಲಕ್ಷಕ್ಕೆ ಸಿಗುತ್ತೆ ಸಿಂಗಲ್ BHK ಪ್ಲಾಟ್!

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಸೂರು ಹೊಂದುವುದು ಕನಸಿನ ಮಾತೇ. ಬೆಂಗಳೂರು ನಗರದಲ್ಲಿ ಕನಿಷ್ಠ ಒಂದು ಅಡಿ ಜಾಗವೇ ಸಾವಿರಗಳು ತಲುಪಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಶ್ರಮಿಕ ವರ್ಗ ಕೇವಲ ಏಳು ಲಕ್ಷ ರೂ. ಮೊತ್ತದಲ್ಲಿ ಸಿಂಗಲ್ ಬೆಡ್ ರೂಮ್ ಮನೆ ಹೊಂದುವ ಅವಕಾಶ ರಾಜ್ಯ ಸರ್ಕಾರ ನೀಡಿದೆ. ಮುಖ್ಯಮಂತ್ರಿ ಬಹುಮಹಡಿ ಕಟ್ಟಡ ಬೆಂಗಳೂರು ವಸತಿ ಯೋಜನೆಯಡಿ ಮನೆ ಪಡೆದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮೂರು ಲಕ್ಷ ರೂ. ಸಹಾಯ ಧನ ಸಿಗಲಿದೆ. ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳಲ್ಲಿ25.912 ಪ್ಲಾಟ್ ಗಳು ಖಾಲಿಯಿದ್ದು, ಅರ್ಜಿ ಸಲ್ಲಿಸಿದ ಅರ್ಹರಿಗೆ ಹಂಚಿಕೆಯಾಗಲಿದೆ. ಇನ್ನು ಎರಡನೇ ಹಂತದ ಯೋಜನೆಯಲ್ಲಿ ಆರು ಸಾವಿರಕ್ಕೂ ಅಧಿಕ ಮನೆಗಳು ನಿರ್ಮಾಣವಾಗುತ್ತಿದ್ದು, ಅರ್ಜಿ ಸಲ್ಲಿಸುವ ವಿಧಾನ, ಪ್ಲಾಟ್ ಮೊತ್ತ, ಯಾವ ಜಾಗದಲ್ಲಿ ಪ್ಲಾಟ್ ಗಳು ಲಭ್ಯವಿದೆ ಎಂಬುದರ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.

ಯೋಜನೆ ವಿವರ:
ಮುಖ್ಯಮಂತ್ರಿ ಬಹುಮಹಡಿ ಕಟ್ಟಡ ಬೆಂಗಳೂರು ವಸತಿ ಯೋಜನೆ. ಈ ಯೋಜನೆಯಡಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಮೊದಲ ಹಂತದ ಯೋಜನೆಯಲ್ಲಿ ಈಗಾಗಲೇ 38 ಸಾವಿರ ಪ್ಲಾಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಎರಡನೇ ಹಂತದಲ್ಲಿ 7 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ವಸತಿ ಸಚಿವ ವಿ. ಸೋಮಣ್ಣ ಅವರ ಕಾರ್ಯ ಕ್ಷಮತೆಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಹುಮಹಡಿ ಕಟ್ಟಡ ವಸತಿ ಯೋಜನೆ ಕಾಮಗಾರಿಗಳು ಭರದಿಂದ ಸಾಗಿವೆ. ಈಗಾಗಲೇ ಬಹುತೇಕ ಬಹುಮಹಡಿಗಳು ನಿರ್ಮಾಣವಾಗಿದ್ದು, ಸಾರ್ವಜನಿಕರ ಖರೀದಿಗೆ ರಾಜೀವ್ ಗಾಂಧಿ ವಸತಿ ನಿಗಮ ಮುಕ್ತ ಅವಕಾಶ ಕಲ್ಪಿಸಿದೆ.

ಪ್ಲಾಟ್ ಪಡೆಯಲು ಯಾರು ಅರ್ಹರು?
ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ನಾಗರಿಕರು ಮುಖ್ಯಮಂತ್ರಿಗಳ ಬಹುಮಹಡಿ ಕಟ್ಟಡ ವಸತಿ ಯೋಜನೆಯಡಿ ಪ್ಲಾಟ್ ಖರೀದಿಸಲು ಅರ್ಜಿ ಸಲ್ಲಿಸಬಹುದು. ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿದ್ದವರು ಅದೇ ಕ್ಷೇತ್ರದಲ್ಲಿ ಪ್ಲಾಟ್ ಪಡೆಯಲು ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಸಹ ರಾಜೀವ್ ಗಾಂಧಿ ವಸತಿ ನಿಗಮ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳ ಪ್ಲಾಟ್ ಖರೀದಿ ಮಾಡಬಹುದು. ವಾರ್ಷಿಕ ಆದಾಯ 3 ಲಕ್ಷ ರೂ. ಆದಾಯ ಇರುವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೂರು ಲಕ್ಷ ರೂ. ಸಬ್ಸಿಡಿ ಪಡೆಯಬಹುದು. ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಇನ್ನು ಸಾರ್ವಜನಿಕರು ಸಹ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಪ್ಲಾಟ್ ಖರೀದಿ ಮಾಡಬಹುದು.

ಲಭ್ಯ ಇರುವ ಪ್ಲಾಟ್ ಗಳು:
ಆನೇಕಲ್:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕಿನನ ಕೂಗೂರು, ಗೂಳಿಮಂಗಲ, ಚಿಕ್ಕನಹಳ್ಳಿ, ಕಮ್ಮನಹಳ್ಳಿ, ಲಿಂಗಾಪುರದಲ್ಲಿ 4044 ಒಂದು ಬೆಡ್ ರೂಮ್ ಫ್ಲಾಟ್ ನಿರ್ಮಿಸಿದ್ದು, ಈಗಾಗಲೇ 509 ಫ್ಲಾಟ್ ಬುಕ್ ಆಗಿವೆ. ಬಾಕಿ 3460 ಫ್ಲಾಟ್ ಖಾಲಿಯಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕೃಷ್ಣರಾಜಪುರ:
ಬೆಂಗಳೂರಿನ ಪೂರ್ವ ವಿಭಾಗದ ಕೃಷ್ಣರಾಜಪುರಂ ವಿಧಾನಸಭಾ ಕ್ಷೇತ್ರದ ಎಡು ಕಡೆ ಪ್ಲಾಟ್ ಗಳು ನಿರ್ಮಾಣವಾಗುತ್ತಿವೆ. ಒಟ್ಟು 524 ಫ್ಲಾಟ್ ನಿರ್ಮಾಣವಾಗಿದ್ದು, 247 ಫ್ಲಾಟ್‌ಗಳು ಅಷ್ಟೇ ಖಾಲಿಯಿವೆ.

ದಾಸರಹಳ್ಳಿ ಮತ್ತು ಬೆಂಗಳೂರು ದಕ್ಷಿಣ:
ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಡೆ ಪ್ಲಾಟ್ ನಿರ್ಮಾಣ ಮಾಡಲಾಗಿದೆ. ದಾಸರಹಳ್ಳಿಯಲ್ಲಿ 796 ಫ್ಲಾಟ್ ನಿರ್ಮಾಣವಾಗಿದ್ದು, 331 ಖಾಲಿಯಿವೆ. ದಕ್ಷಿಣದಲ್ಲಿ 483 ಫ್ಲಾಟ್ ನಿರ್ಮಾಣವಾಗಿದ್ದು, 237 ಫ್ಲಾಟ್ ಖಾಲಿಯಿವೆ.

ಬ್ಯಾಟರಾಯನಪುರ ಹಾಗೂ ಮಹದೇವಪುರ:
ಬ್ಯಾಟರಾಯನಪುರ ಹಾಗೂ ಮಹದೇವಪುರದಲ್ಲಿ ಒಟ್ಟು ಮೂರು ಕಡೆ ವಸತಿ ಸಮುಚ್ಛಯ ನಿರ್ಮಾಣ ಮಾಡಲಾಗಿದೆ. ಬ್ಯಾಟರಾಯನಪುರದಲ್ಲಿ 353 ಫ್ಲಾಟ್ ಖಾಲಿಯಿವೆ. ಮಹದೇವಪುರದಲ್ಲಿ 3460 ಫ್ಲಾಟ್ ಖಾಲಿಯಿವೆ.

ಯಲಹಂಕದಲ್ಲಿ ಬಂಪರ್ ಕೊಡುಗೆ:
ಬೆಂಗಳೂರಿನಲ್ಲಿ ಅತಿ ಹೆಚ್ಚು ಕಡೆ ವಸತಿ ಸಮುಚ್ಛಯ ನಿರ್ಮಾಣ ಆಗುತ್ತಿರುವುದು ಯಲಹಂಕದಲ್ಲಿ. ಯಲಹಂಕದ ಬಿಳಿಜಾಜಿ, ಗೋವಿಂದಪುರ, ಸೇರಿದಂತೆ ಹತ್ತು ಕಡೆ ಮುಖ್ಯಮಂತ್ರಿ ಒಂದು ಲಕ್ಷ ಬಹುಮಹಡಿ ಕಟ್ಟಡ ವಸತಿ ಯೋಜನೆ ವಸತಿ ಸಮುಚ್ಛಯ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು 7591 ಫ್ಲಾಟ್ ಗಳು ಖಾಲಿಯಿವೆ. ಹಸಿರಿನಿಂದ ಕೂಡಿರುವ ಹೆಸರಘಟ್ಟ ಸುತ್ತಮುತ್ತ ಫ್ಲಾಟ್ ಗಳು ನಿರ್ಮಾಣವಾಗುತ್ತಿದ್ದು, ವಾಸ ಮಾಡಲಿಕ್ಕೆ ಉತ್ತಮ ವಾತಾವರಣವಿದು.

ಯಶವಂತಪುರ ವಿಧಾನಸಭಾ ಕ್ಷೇತ್ರ:
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 9 ಕಡೆ ವಸತಿ ಸಮುಚ್ಛಯಗಳನ್ನು ರಾಜೀವ್ ಗಾಂಧಿ ವಸತಿ ನಿಗಮ ನಿರ್ಮಾಣ ಮಾಡಿದೆ. ಇಲ್ಲಿ 10, 233 ಫ್ಲಾಟ್ ಗಳು ಖಾಲಿಯಿವೆ. ಒಟ್ಟು33,034 ಫ್ಲಾಟ್ ನಿರ್ಮಿಸಿದ್ದು, ಅದರಲ್ಲಿ ಬುಕ್ ಆಗಿರುವ ಪ್ಲಾಟ್ ಹೊರತು ಪಡಿಸಿ 25,912 ಫ್ಲಾಟ್ ಗಳು ಖಾಲಿಯಿವೆ. ಸಾರ್ವಜನಿಕರು ಸೂಕ್ತ ಜಾಗದಲ್ಲಿ ಫ್ಲಾಟ್ ಖರೀದಿಗೆ ಅರ್ಜಿ ಸಲ್ಲಿಸಬಹುದು .

ಫ್ಲಾಟ್ ಪಡೆಯುವ ಪ್ರಕ್ರಿಯೆ:
ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಕಟ್ಟಡ ವಸತಿ ಯೋಜನೆ ಅಡಿ ಫ್ಲಾಟ್ ಪಡೆಯಲು ಇಚ್ಛಿಸುವರು ಬೆಂಗಳೂರಿನಲ್ಲಿ ನೆಲೆಸಿರಬೇಕು. ಆಯಾ ವಿಧಾನಸಭಾ ಕ್ಷೇತ್ರದ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಅಥವಾ ಇತರೆ ವಿಧಾನಸಭಾ ಕ್ಷೇತ್ರದ ನಿವಾಸಿಗಳು ಫ್ಲಾಟ್ ಪಡೆಯಬಹುದು. ಬಹುಮುಖ್ಯವಾಗಿ ವಾರ್ಷಿಕ ಮೂರು ಲಕ್ಷ ರೂ. ಗಿಂತಲೂ ಕಡಿಮೆ ಆದಾಯ ಹೊಂದಿರಬೇಕು. ಬೆಂಗಳೂರಿನಲ್ಲಿ ನೆಲೆಸಿರಬೇಕು. ಫ್ಲಾಟ್ ಪಡೆಯಲು ಅರ್ಜಿ ಸಲ್ಲಿಸುವರು ಒಂದು ಲಕ್ಷ ರೂ. ಪ್ರಾರಂಭಿಕ ಠೇವಣಿ ಇಟ್ಟಿರಬೇಕು. ಠೇವಣಿ ಇಡುವ ಮೊದಲು ಈ ಕೆಳಕಂಡ ನಿಯಮಗಳನ್ನು ಪಾಲಿಸಬೇಕು.

ರಾಜೀವ್ ಗಾಂಧಿ ವಸತಿ ನಿಗಮದ https://ashraya.karnataka.gov.in/cm_selection_flat/index.html ವೆಬ್ ತಾಣದಲ್ಲಿ ಫ್ಲಾಟ್ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಇಚ್ಛಿಸಿದ ಫ್ಲಾಟ್ ಪಡೆಯಲು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ ಒಂದು ಫ್ಲಾಟ್ ಮೊತ್ತ 10.60 ಲಕ್ಷ ರೂ. ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧಾನ ಸಿಗಲಿದೆ. ಪರಿಶಿಷ್ಟ ವರ್ಗ ಮತ್ತು ಜಾತಿ ಸಮುದಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕರದಿಂದ ಮೂರುವರೆ ಲಕ್ಷ ರೂ. ಸಬ್ಸಿಡಿ ಸಿಗಲಿದೆ. ಫ್ಲಾಟ್ ನ ಮೊತ್ತ ಕೇವಲ 7.10 ಲಕ್ಷ ರೂ. ಬೀಳಲಿದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಜನತೆಗೆ ಸಬ್ಸಿಡಿ ಹೊರತು ಪಡಿಸಿ ಒಂದು ಫ್ಲಾಟ್ ಗೆ 7.90 ಲಕ್ಷ ರೂ. ಪಾವತಿಸಬೇಕು. ಅರ್ಜಿದಾರರು ಪ್ರಾರಂಭಿಕ ಠೇವಣಿ ಒಂದು ಲಕ್ಷ ರೂ ಪಾವತಿಸಬೇಕು. ಉಳಿದ ಮೊತ್ತವನ್ನು ಫಲಾನುಭವಿಗಳು ಇಚ್ಛಿಸಿದಲ್ಲಿ ಬ್ಯಾಂಕ್ ಸಾಲದ ಮುಲಕ ಐದು ಲಕ್ಷ ರೂ. ಪಾವತಿ ಮಾಡಬಹದು. ಉಳಿದ ಮೊತ್ತವನ್ನು ಪ್ಲಾಟ್ ಪಡೆದ ಬಳಿಕ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಬ್ಯಾಂಕ್ ಖಾತೆ ಇರಬೇಕು:
ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ವೆಬ್ ತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ನಿಗಮ ಅರ್ಜಿದಾರರಿಂದ ಹಣ ಸ್ವೀಕರಿಸಲು ಐಡಿಬಿಐ ಬ್ಯಾಂಕ್ ನಲ್ಲಿ ಖಾತೆ ತೆರರೆದಿದೆ. ಅರ್ಜಿ ಸಲ್ಲಿಸಿದ ಬಳಿಕ ನಿಗಮದಿಂದ ಬರುವ ಎಸ್ಎಂಎಸ್ ಆಧರಿಸಿ ಐಡಿಬಿಐ ಬ್ಯಾಂಕ್ ಮೂಲಕ ಪ್ರಾರಂಭಿಕ ಠೇವಣಿ ಪಾವತಿ ಮಾಡಬಹುದು. ನಗದು ಮೂಲಕವೂ ಐಡಿಬಿಐ ಬ್ಯಾಂಕ್ ಶಾಖೆಯಲ್ಲಿ ಪಾವತಿ ಮಾಡಬಹುದಾಗಿದೆ. ಪ್ರಾರಂಭಿಕ ಠೇವಣಿ ಪಾವತಿ ಮಾಡಿದ ಕೂಡಲೇ ಫ್ಲಾಟ್ ನ್ನು ತಾತ್ಕಾಲಿಕವಾಗಿ ಮಂಜೂರು ಮಾಡಬಹುದಾಗಿದೆ. ಫ್ಲಾಟ್ ಗಳು ನಿರ್ಮಾಣವಾದ ಕುಡಲೇ ಹಂಚಿಕೆ ಮಾಡಲಾಗುತ್ತದೆ. ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ಸೂತ್ರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಅನರ್ಹರು ಅರ್ಜಿ ಸಲ್ಲಿಸಿದಲ್ಲಿ, ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ನಿಗಮಕ್ಕೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು. 9900546623 / 9845015018 / 9448287514

Related News

spot_img

Revenue Alerts

spot_img

News

spot_img