27.9 C
Bengaluru
Saturday, July 6, 2024

ಸ್ವಂತ ಉದ್ಯೋಗದವರು ಪಿಂಚಣಿ ಸೇವೆ ಪಡೆಯಲು ಏನು ಮಾಡಬೇಕು..?

ಬೆಂಗಳೂರು, ಜೂ. 24 : ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಇದರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಹಲವು ಯೋಜನೆಗಳನ್ನು ಪ್ರಾರಂಭಿಸಿವೆ. ಅವುಗಳಲ್ಲಿ ಹಣ ಹೂಡುವುದರಿಂದ ಸ್ವಂತ ಉದ್ಯೋಗಿಗಳು ಈ ಕೆಳಗೆ ತಿಳಿಸುವ ಯೋಜನೆಗಳಲ್ಲಿ ಹಣವನ್ನು ಹೂಡಿದರೆ, ಅವರ ನಿವೃತ್ತಿಯ ಸಂದರ್ಭದಲ್ಲಿ ಸಹಕಾರಿಯಾಗುತ್ತದೆ. ಸರ್ಕಾರದ ಈ ಯೋಜನೆಗಳು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ.

ಏಕೆಂದರೆ ಈ ಯೋಜನೆಗೆ ತೆರಿಗೆ ವಿನಾಯಿತಿಗಳು ಕೂಡ ಇವೆ. ಆದ್ದರಿಂದ ನೀವು ಇದರಲ್ಲಿ ಹೂಡಿಕೆ ಮಾಡಿದರೆ, ನೀವು ಹೆಚ್ಚು ಲಾಭ ಪಡೆಯಬಹುದು. ಕೆಲವು ಮಾನದಂಡಗಳನ್ನು ಆಧರಿಸಿ ಪ್ರಮುಖ ತೆರಿಗೆ-ಉಳಿತಾಯ ಯೋಜನೆಗಳ ವಿವರ ಇಲ್ಲಿದೆ. ರಿಟರ್ನ್ಸ್, ಸುರಕ್ಷತೆ, ನಮ್ಯತೆ, ಲಿಕ್ವಿಡಿಟಿ, ವೆಚ್ಚ, ಪಾರದರ್ಶಕತೆ, ಹೂಡಿಕೆಯ ಸರಳತೆ ಮತ್ತು ಆದಾಯ ತೆರಿಗೆ ಈ ಮಾನದಂಡಗಳನ್ನು ಆಧರಿಸಿ ವಿವಿಧ ತೆರಿಗೆ-ಉಳಿತಾಯ ಸಾಧನಗಳಿಗೆ ಶ್ರೇಯಾಂಕ ನೀಡಲಾಗಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಇದರ ರಿಟರ್ನ್ಸ್ ತೆರಿಗೆಮುಕ್ತ ಆಗಿದೆ. ಆದರೆ ನಿಧಾನವಾಗಿ ಬಡ್ಡಿ ದರ ಕಡಿಮೆ ಆಗುತ್ತಿದೆ. ಬದಲಾಗುವ ಬಡ್ಡಿ ದರ ಇನ್ನಷ್ಟು ಕಡಿಮೆ ಆಗಬಹುದು.ಇದರಲ್ಲಿ ನೀವು ಕನಿಷ್ಟ 1000 ರಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. 7.1 ರಷ್ಟು ಬಡ್ಡಿದರವನ್ನು ಸರ್ಕಾರವು ಸಹ ನೀಡುತ್ತದೆ. ಆದಾಯ ತೆರಿಗೆ ಪಾವತಿಸುವಾಗ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಆದ್ದರಿಂದ ನೀವು ಇದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು ದೊಡ್ಡ ಲಾಭವನ್ನು ಪಡೆಯಬಹುದು.

ರಾಷ್ಟ್ರೀ ಪಿಂಚಣಿ ಯೋಜನೆ: ರಾಷ್ಟ್ರೀಯ ಉಳಿತಾಯ ಯೋಜನೆಯೂ ಕೂಡ ತೆರಿಗೆ ವಿನಾಯ್ತಿ ಅಡಿಯಲ್ಲಿ ಬರಲಿದೆ. ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಇದು. ಇದರಲ್ಲಿ ಹೂಡಿಕೆ ಮಾಡಿ ತೆರಿಗೆ ಕಟ್ಟುವುದರಿಂದ ಉಳಿತಾಯ ಮಾಡುವುದು ಬಹಳ ಸುಲಭವಾಗುತ್ತದೆ. ನೀವು ನಿಮ್ಮ ಕೆಲಸವನ್ನು ಪ್ರಾರಂಭಿಸಿದ ಸಮಯದಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. CCD (1) ಅಡಿಯಲ್ಲಿ 1.5 ಲಕ್ಷ ಮತ್ತು CCD (1B) ಅಡಿಯಲ್ಲಿ 50,000 ರೂಪಾಯಿ ಸಿಗುತ್ತೆ.

ವಿಮಾ ಯೋಜನೆ- ಜೀವ ಮತ್ತು ಆರೋಗ್ಯ ವಿಮೆಯಲ್ಲಿ ಹೂಡಿಕೆಯನ್ನು ಸುರಕ್ಷಿತ ಯೋಜನೆ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಆಸ್ತಿಯನ್ನು ಅನಿರೀಕ್ಷಿತ ಹಾನಿಯಿಂದ ರಕ್ಷಿಸುತ್ತದೆ. ಈ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಮೇಲೆ ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಇದು ಆದಾಯ ತೆರಿಗೆಯನ್ನು ಉಳಿಸಲು ಸಹ ನಿಮಗೆ ಸಹಾಯ ಮಾಡುತ್ತದೆ.

ರಾಷ್ಟ್ರೀಯ ಉಳಿತಾಯ ಪತ್ರ : ನಿರಂತರವಾಗಿ ಸರ್ಕಾರದ ಬಾಂಡ್ಗಳ ಯೀಲ್ಡ್ನಲ್ಲಿ ಇಳಿಕೆ ಆಗಿದ್ದರಿಂದ ಬಡ್ಡಿ ದರ ಮತ್ತು ಇದಕ್ಕಿರುವ ಆದ್ಯತೆಯಲ್ಲಿ ಕಡಿಮೆ ಆಗಿದೆ. ಆದರೆ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಇದು.

ಕಿಸಾನ್ ವಿಕಾಸ್ ಪತ್ರ : ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಇದೂ ಕೂಡ ಆಗಿದೆ. ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರವನ್ನು ಖರೀದಿಸಬಹುದು. ಇದರಲ್ಲಿ ಪ್ರಸ್ತುತ ಶೇಕಡಾ 7.5 ರ ಬಡ್ಡಿದರದಲ್ಲಿ 115 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತವೆ.

Related News

spot_img

Revenue Alerts

spot_img

News

spot_img