21 C
Bengaluru
Sunday, October 27, 2024

ಆಸ್ತಿಯ ಮಾರುಕಟ್ಟೆಮೌಲ್ಯ ತಿಳಿಯುವುದು ಹೇಗೆ?

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಂದು ಆಸ್ತಿಯನ್ನು ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆಅದಕ್ಕೆ ಬರುವಂತಹ ಬೆಲೆಯೇ ಮಾರುಕಟ್ಟೆ ಮೌಲ್ಯ ಎಂದು ಕರ್ನಾಟಕ ಮುದ್ರಾಂಕ ಕಾಯಿದೆ,1957ರ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ.

ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನುಅಂದಾಜು ಮಾಡಲು ಸರ್ಕಾರವು ಸಮಿತಿಗಳನ್ನುರಚಿಸಿದೆ. ಈ ಸಮಿತಿಗಳು ಕರ್ನಾಟಕ ಸ್ಟಾಂಪ್(ಸ್ತಿರಾಸ್ತಿಗಳ ಮೌಲ್ಯ ನಿರ್ಧರಣಾ) ನಿಯಮಗಳು,1992ರಲ್ಲಿ ವಿವರಿಸಿದ ತತ್ವಗಳ ಆಧಾರದ ಮೇಲೆ ಆಸ್ತಿಯ ಮೌಲ್ಯವನ್ನು (ಮಾರ್ಗಸೂಚಿ ಮೌಲ್ಯವನ್ನು) ಕಾಲಕಾಲಕ್ಕೆ ಅಂದಾಜು ಮಾಡಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುತ್ತಿರುತ್ತಾರೆ.

ದಸ್ತಾವೇಜನ್ನು ನೋಂದಾಯಿಸುವ ಪೂರ್ವದಲ್ಲಿ ಸಾರ್ವಜನಿಕರು ದಸ್ತಾವೇಜುಗಳನ್ನು ಸಬ್-ರಿಜಿಸ್ಟ್ರಾರ್ ರವರಿಗೆ ಹಾಜರುಪಡಿಸಿದಲ್ಲಿ ಅವರು ಆಸ್ತಿಯ ಮೌಲ್ಯವನ್ನು ಮೇಲೆ ವಿವರಿಸಿದೆ ಸಮಿತಿಗಳು ಅಂದಾಜು ಮಾಡಿದ ಮೌಲ್ಯದ ಆಧಾರದ ಮೇಲೆ ಲಿಖಿತದಲ್ಲಿ ಹಿಂಬರಹ ನೀಡುತ್ತಾರೆ. ಸಂಬಂಧಪಟ್ಟವರು ಈ ಹಿಂಬರಹದಲ್ಲಿರುವ ಮೌಲ್ಯಾವನ್ನು ಒಪ್ಪಿಕೊಂಡು ಅದರಂತೆ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದಲ್ಲಿ ದಸ್ತಾವೇಜನ್ನು ನೋಂದಾಯಿಸಿ ಸಂಬಂಧಪಟ್ಟವರಿಗೆ ಹಿಂತಿರುಗಿಸುತ್ತಾರೆ.

ಒಂದು ವೇಳೆ ಹಿಂಬರಹದಲ್ಲಿರುವ ಮೌಲ್ಯವು ಸಂಬಂಧಪಟ್ಟವರಿಗೆ ಒಪ್ಪಿಗೆಯಾಗದಿದ್ದಲ್ಲಿ ಅಂತಹ ದಸ್ತಾವೇಜನ್ನು ನೋಂದಣಿಗೆ ಸ್ವೀಕರಿಸಿ ದಸ್ತಾವೇಜನ್ನು
ನೋಂದಾಯಿಸಿದ ಆಸ್ತಿಯ ಮೌಲ್ಯವನ್ನು ಕಂಡು ಹಿಡಿಯಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಕಳುಹಿಸಿಕೊಡುತ್ತಾರೆ.

ಜಿಲ್ಲಾ ನೋಂದಣಾಧಿಕಾರಿಗಳು ಸಂಬಂಧಪಟ್ಟವರ ಅಹವಾಲನ್ನು ಕೇಳಿ ಅವಶ್ಯವಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ ಆಸ್ತಿಯ ಮೌಲ್ಯವನ್ನು ನಿರ್ಧರಿಸುತ್ತಾರೆ. ಇವರು ನಿರ್ಧರಿಸಿರುವ ಮಾರುಕಟ್ಟೆ ಮೌಲ್ಯವು ಸಮಾಧಾನವಾಗದಿದ್ದರೆ .

ಜಿಲ್ಲಾ ನೋಂದಣಾಧಿಕಾರಿಗಳ ಈ ಆದೇಶದ ಮೇಲೆ ವಿಭಾಗಾಧಿಕಾರಿಗಳಿಗೆ (ಕಂದಾಯ) ಆದೇಶ ತಲುಪಿದ 60 ದಿನಗೊಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಮೇಲ್ಮನವಿ ಸಲ್ಲಿಸುವಾಗ ಜಿಲ್ಲಾ ನೋಂದಣಾಧಿಕಾರಿಗಳು ತೀರ್ಮಾನಿಸಿದ ಮುದ್ರಾಂಕ ಶುಲ್ಕದ ಶೇ. 50 ರ‍ಷ್ಟು ಮೊತ್ತವನ್ನು ಸರ್ಕಾರಕ್ಕೆ ಠೇವಣಿ ಇಡಬೇಕಾಗುತ್ತದೆ.

ವಿಭಾಗಾಧಿಕಾರಿಗಳ ಆದೇಶದ ಮೇಲೆ ಬೇಕಿದ್ದರೆ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಬಹುದು.ತದನಂತರ ಬೇಕಿದ್ದರೆ ಭಾರತದ ಶ್ರೇಷ್ಟ ನ್ಯಾಯಾಲಯ ಸುಪ್ರೀಂಕೋರ್ಟ್ ನಲ್ಲೂ ವಿಶೇಷ ರಜೆ ಅರ್ಜಿ(Special Leave Petition) ಸಲ್ಲಿಸಬಹುದು. ಇಲ್ಲಿ ನೀಡುವ ಆದೇಶವೆ ಅಂತಿಮವಾಗಿರುತ್ತದೆ.

Related News

spot_img

Revenue Alerts

spot_img

News

spot_img