21.5 C
Bengaluru
Monday, December 23, 2024

ನಿಮ್ಮ ಮನೆಯನ್ನು ಹೆಚ್ಚು ಸುಂದರವಾಗಿ ವಿನ್ಯಾಸಗೊಳಿಸುವುದು ಹೇಗೆ; ಇಲ್ಲಿವೆ ಟಿಪ್ಸ್

ನಾವು ಹೆಚ್ಚು ಸಮಯವನ್ನು ಕಳೆಯುವ ಸ್ಥಳ ನಮ್ಮ ನಮ್ಮ ಮನೆ. ಇದು ಹೊರಗಿನ ಪ್ರಪಂಚದ ಗದ್ದಲದಿಂದ ನಮಗೆ ವಿಶ್ರಾಂತಿ ನೀಡುವ ನೆಮ್ಮದಿಯ ಸ್ಥಳವಾಗಿದೆ. ಅಂತೆಯೇ, ಮನೆ ನಮ್ಮ ಯೋಗಕ್ಷೇಮಕ್ಕೆ ನೆರವಾಗುವುದು ಬಹಳ ಮುಖ್ಯ. ಹೀಗಾಗಿ ತಜ್ಞರು ಹೇಳುವಂತೆ ನಮ್ಮ ನೆಮ್ಮದಿಯ ಸ್ಥಳವನ್ನು ವಿನ್ಯಾಸಗೊಳಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ನಮ್ಮ ಯೋಗಕ್ಷೇಮವನ್ನೂ ಕಾಪಾಡಿಕೊಳ್ಳಬಹುದು.

“ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರು ವಿನ್ಯಾಸವನ್ನು ರಚಿಸುವಾಗ ಸ್ಥಳದ ಕ್ರಿಯಾತ್ಮಕತೆಗೆ ಹೆಚ್ಚು ಗಮನ ನೀಡುತ್ತಾರೆ. ಆಗಾಗ್ಗೆ ಮನೆಯನ್ನು ಜೀವಂತಗೊಳಿಸುವ ಮನೆಯಲ್ಲಿರುವ ಜನರನ್ನು ಕಡೆಗಣಿಸುತ್ತಾರೆ. ದೈನಂದಿನ ಜೀವನವನ್ನು ಪ್ರೇರೇಪಿಸುವ ಮತ್ತು ಸ್ಫೂರ್ತಿ ತುಂಬುವ ಭಾವನೆಗಳು ಹುಟ್ಟುವುದು ಕೂಡ ನಾವು ವಾಸಿಸುವ ಸ್ಥಳ ಮತ್ತು ಪರಿಸರದಿಂದ ಪ್ರೇರಿತವಾಗಿರುತ್ತದೆ” ಎಂದು ಲಿಥ್ ಡಿಸೈನ್‌ನ ಸಂಸ್ಥಾಪಕರು ಮತ್ತು ಪ್ರಧಾನ ವಿನ್ಯಾಸಕರಾದ ಅಪೂರ್ವ ಶ್ರಾಫ್ ಹೇಳಿದ್ದಾರೆ.

ಮನೆಯನ್ನು ವಿನ್ಯಾಸಗೊಳಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಐದು ಪ್ರಮುಖ ವಿಷಯಗಳನ್ನು ಅಪೂರ್ವ ಶ್ರಾಫ್ ಸೂಚಿಸಿದ್ದಾರೆ.

ಆರಾಮ ಯಾವಾಗಲೂ ಆದ್ಯತೆಯಾಗಿರಬೇಕು
ತಜ್ಞರ ಪ್ರಕಾರ, ಯಾವುದೇ ಜಾಗವನ್ನು ವಿನ್ಯಾಸಗೊಳಿಸುವಾಗ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. “ಅನಾನುಕೂಲಕರವಾದ ಆಸನಗಳಲ್ಲಿ ಯಾರೂ ಪ್ರದರ್ಶನ ಅಥವಾ ಚಲನಚಿತ್ರದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲವೂ ಹಾಗೆಯೇ, ಆರಾಮದಾಯಕ ವಾತಾವರಣವನ್ನು ಸೃಷ್ಟಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.

ನೈಸರ್ಗಿಕ ಅಂಶಗಳನ್ನು ಸೇರಿಸಿ
ಮನೆಗೆ ನೈಸರ್ಗಿಕ ಅಂಶಗಳನ್ನು ಸೇರಿಸುವುದು ಪ್ರಪಂಚದಾದ್ಯಂತ ಬೆಳೆಯುತ್ತಿರುವ ಪ್ರವೃತ್ತಿಯಾಗಿದೆ. ಸಸ್ಯಗಳನ್ನು ಸಂಯೋಜಿಸುವುದು ಅಥವಾ ಮಣ್ಣಿನ ಬಣ್ಣದ ಪ್ಯಾಲೆಟ್‌ಗಳನ್ನು ಬಳಸುವುದು ಮನಸ್ಸನ್ನು ಆರಾಮವಾಗಿ ಇರಿಸುವ ಮತ್ತು ಶಾಂತಿಯನ್ನು ನೀಡುವ ಸ್ಥಳಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ.

ಅಗತ್ಯಕ್ಕೆ ಅನುಗುಣವಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಿ
ನಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ನಾವು ತಂತ್ರಜ್ಞಾನದಿಂದ ಸುತ್ತುವರೆದಿದ್ದೇವೆ. ಅವುಗಳನ್ನು ಕೂಡ ನಮ್ಮ ಮನೆಗಳ ವಿನ್ಯಾಸದಲ್ಲಿ ಬಳಸಬಹುದು. ಏಕೆಂದರೆ ಸಣ್ಣ ಅಂಶಗಳು ಸಹ ಒಟ್ಟಾರೆ ಜಾಗದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ ಎಂದು ಶ್ರಾಫ್ ಹೇಳಿದ್ದಾರೆ.
“ಉದಾಹರಣೆಗೆ, ಶಾಂತಿಯುತ, ಸ್ಪಾ ತರಹದ ವಾತಾವರಣವನ್ನು ವಿನ್ಯಾಸಗೊಳಿಸಲು, ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ವೈಟ್ ನೋಯ್ಸ್ ಮೇಷಿನ್ ಮತ್ತು ಏರ್ ಪ್ಯೂರಿ ಫಯರ್ ಬಳಸಬಹುದು.”

ಮನಸ್ಥಿತಿಯನ್ನು ಸರಿಯಾಗಿ ಹೊಂದಿಸಿ
ಜಾಗಕ್ಕೆ ಮನಸ್ಥಿತಿಯನ್ನು ಹೊಂದಿಸಲು ಸಹಾಯ ಮಾಡುವ ಅತ್ಯಂತ ನಿರ್ಣಾಯಕ ಅಂಶವೆಂದರೆ ಬೆಳಕು. “ಬೆಚ್ಚನೆಯ ಬೆಳಕು ಮಲಗುವ ಕೋಣೆಗಳಲ್ಲಿ ಉತ್ತಮ ವಾತಾವರಣಕ್ಕೆ ಸಹಾಯ ಮಾಡುತ್ತದೆ. ಆದರೆ ಬಿಳಿ ದೀಪಗಳು ಕಾರ್ಯಸ್ಥಳಕ್ಕೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಥಿಯೇಟರ್ ಕೋಣೆಗೆ ಕನಿಷ್ಠ ಬೆಳಕಿನ ಅಗತ್ಯವಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ನೈಸರ್ಗಿಕ ವೆಂಟಿಲೇಷನ್
ಯೋಗಕ್ಷೇಮಕ್ಕಾಗಿ ನೈಸರ್ಗಿಕ ವೆಂಟಿಲೇಷನ್ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಅವರು, “ದಕ್ಷ ಕಾರ್ಯನಿರ್ವಹಣೆಗಾಗಿ ಕಾರ್ಯಸ್ಥಳವು ನೈಸರ್ಗಿಕ ಬೆಳಕು ಮತ್ತು ವೆಂಟಿಲೇಷನ್ ಮತ್ತು ಪರಿಪೂರ್ಣ ಪ್ರಮಾಣದ ಕೃತಕ ಬೆಳಕಿನ ಅಗತ್ಯವಿರುತ್ತದೆ” ಎಂದಿದ್ದಾರೆ.

ಈ ವಿಷಯಗಳ ಜೊತೆಗೆ, ತಮ್ಮ ಮನೆಗೆ ನೈಸರ್ಗಿಕ ವಸ್ತುಗಳು, ವಿಂಟೇಜ್ ಪೀಠೋಪಕರಣಗಳು ಮತ್ತು ಮೇಣದ ಬತ್ತಿಗಳು ಅಥವಾ ತೈಲಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂದು ದಿ ವರ್ಕ್ಸ್ ಇಂಟೀರಿಯರ್ಸ್‌ನ ಕ್ರಿಯೇಟಿವ್ ಡೈರೆಕ್ಟರ್ ದೇವಿಕಾ ಖೋಸ್ಲಾ ಹೇಳಿದ್ದಾರೆ.

ಅಮೃತಶಿಲೆ, ಕಲ್ಲು ಮತ್ತು ಮರದಂತಹ ವಸ್ತುಗಳು ಕಲಾತ್ಮಕವಾಗಿ ಉತ್ತಮ ಮತ್ತು ಶಾಂತವಾದ ಸ್ಥಳಗಳನ್ನು ರೂಪಿಸುತ್ತವೆ. ಏಕೆಂದರೆ ಅವುಗಳು ಪ್ರಕೃತಿಯಿಂದ ಹುಟ್ಟಿಕೊಂಡಿವೆ. ವಿನೈಲ್ ಅಥವಾ ಇತರ ಸಿಂಥೆಟಿಕ್ ಉತ್ಪನ್ನಗಳಂತಹ ಕೃತಕ ವಸ್ತುಗಳ ಬದಲಿಗೆ ಪೀಠೋಪಕರಣಗಳು ಮತ್ತು ಇತರ ಬಳಕೆಗಳಿಗೆ ನೆಲಹಾಸು ವಸ್ತುವಾಗಿ ಮನೆಯಲ್ಲಿ ಈ ವಸ್ತುಗಳನ್ನು ಬಳಸುವುದು ಯೋಗ್ಯವಾಗಿದೆ.

ವಿಂಟೇಜ್ ಪೀಠೋಪಕರಣಗಳ ತುಣುಕುಗಳು
ಕುಟುಂಬದಿಂದ ಬಂದ ಹಳೇಯ ಪೀಠೋಪಕರಣಗಳ ತುಣುಕುಗಳಾಗಿರಬಹುದು ಅಥವಾ ಸ್ಥಳೀಯ ವಿಂಟೇಜ್ ಅಂಗಡಿಯಲ್ಲಿ ದೊರೆಯುವ ಪೀಠೋಪಕರಣಗಳಾಗಿರಬಹುದು. ಹೆಚ್ಚುವರಿಯಾಗಿ, ಪ್ರಯಾಣ ಸ್ಮಾರಕಗಳು, ಛಾಯಾಚಿತ್ರಗಳು, ಪುಸ್ತಕಗಳು ಮತ್ತು ಕಲಾ ತುಣುಕುಗಳು ಮನೆಗಡ ಅತ್ಯುತ್ತಮ ಅಲಂಕಾರ ನೀಡುತ್ತವೆ.

ಮೇಣದಬತ್ತಿಗಳು ಅಥವಾ ತೈಲಗಳ ಮೂಲಕ ಸುಗಂಧವು ನಿಮ್ಮ ಕೋಣೆಯನ್ನು ಐಷಾರಾಮಿ ಮತ್ತು ಇತರರನ್ನು ಆಹ್ವಾನಿಸುವಂತೆ ಮಾಡುತ್ತದೆ. ಜಾಗದಲ್ಲಿ ಸಂತೋಷ ತುಂಬಲು ಮತ್ತು ಬೇಸರದ ದಿನವನ್ನು ಉಲ್ಲಾಸಗೊಳಿಸಲು ತಾಜಾ ಹೂವುಗಳನ್ನು ಬಳಸಿ.

Related News

spot_img

Revenue Alerts

spot_img

News

spot_img