28.3 C
Bengaluru
Thursday, October 10, 2024

ನಗರೀಕರಣದ ಹೆಚ್ಚಳವು ಕೃಷಿ ಭೂಮಿಯನ್ನು ವಸತಿ , ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಾಗಿ ಪರಿವರ್ತಿಸಲು ಕಾರಣೀಭೂತ ಅಂಶವಾಗಿದೆ.

ಬೆಂಗಳೂರು, ಜೂ. 08 :ಕರ್ನಾಟಕ ಸರ್ಕಾರವು 2022 ರಲ್ಲಿ ಕರ್ನಾಟಕ ಭೂಕಂದಾಯ ಕಾಯಿದೆಯ ಸೆಕ್ಷನ್ 95 ಅನ್ನು ತಿದ್ದುಪಡಿ ಮಾಡಿ , ಕೃಷಿ ಭೂಮಿಯನ್ನು ವಸತಿಗೆ ಸುಲಭವಾಗಿ ಪರಿವರ್ತಿಸಲು. ಇದು ಸ್ವಯಂ ಘೋಷಣೆಯ ಆಧಾರದ ಮೇಲೆ ಕೆಲವೇ ದಿನಗಳ ಅಂತರದಲ್ಲಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದೆ.

ಇಂದಿಗೂ, ಕೇವಲ ಒಣ ಅಥವಾ ಬಂಜರು ಭೂಮಿ ಮಾತ್ರ ಪರಿವರ್ತನೆಗೆ ಒಲವು ತೋರುತ್ತಿದೆ. ಮಂಜೂರಾತಿಗೆ ಒಳಪಡಿಸಲಾಗುವ ಭೂಮಿ ಮಾನವ ವಾಸಕ್ಕೆ ಯೋಗ್ಯವಾಗಿದೇಯೆ ಎಂಬುದು ಮುಖ್ಯವಾಗಿರುತ್ತದೆ.

ಕೃಷಿ ಭೂಮಿಯನ್ನು ವಸತಿಗೆ ಪರಿವರ್ತಿಸುವುದು

ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಲು ಕೆಲವು ನಿಯಮಗಳನ್ನು ಅನುಸರಿಸಲೇಬೇಕಾಗಿರುವ ಅಂಶಗಳೆಂದರೆ, ಮೊದಲು ಜಿಲ್ಲೆಯ ಕಂದಾಯ ಇಲಾಖೆ ಅಥವಾ ಯೋಜನಾ ಪ್ರಾಧಿಕಾರವನ್ನು ಸಂಪರ್ಕಿಸಬೇಕಾಗುತ್ತದೆ.

ನಿರ್ದಿಷ್ಟ ಸಂದರ್ಭಗಳಲ್ಲಿ, ಹೆಚ್ಚಿನ ಪ್ರಮಾಣದ ಕೃಷಿ ಭೂಮಿಯನ್ನು ವಸತಿಗೆ ಪರಿವರ್ತನೆಗಾಗಿ ಕಂದಾಉ ಇಲಾಖೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ.

ಕೃಷಿ ಭೂಮಿಯನ್ನು ವಸತಿಗೆ ಪರಿವರ್ತಿಸಲು ಸಲ್ಲಿಸಬೇಕಾದ ದಾಖಲೆಗಳು

*ಮಾಲೀಕರ ಗುರುತಿನ ಪುರಾವೆ
*ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆ
*ಮಾರಾಟ ಪತ್ರ ಮತ್ತು ರೂಪಾಂತರ ಪತ್ರ
* ಗಿಫ್ಟ್ ಡೀಡ್ (ಭೂಮಿಯ ಉತ್ತರಾಧಿಕಾರಿ ವೇಳೆ)
*ಮುನ್ಸಿಪಲ್ ಕೌನ್ಸಿಲ್ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ ( ನೋ ಅಬ್ಜೆಕ್ಷನ್ ಲೆಟರ್)

ಭೂ ಮಾಲೀಕತ್ವವನ್ನು ಸ್ಥಾಪಿಸುವ 7/12ರ ಅನುಸಾರವಾಗಿ

ಭೂ ಬಳಕೆ ಯೋಜನೆ, ಯೋಜನಾ ವರದಿ, ಸಮೀಕ್ಷೆ ನಕ್ಷೆಗಳು, ಭೂಯ ಮೇಲಿನ ಆದಾಯಕ್ಕಾಗಿ ಮಾಡಿರುವ‌ ಪಾವತಿಯ ರಸೀದಿ,ಭೂ ತೆರಿಗೆ ಪಾವತಿ ರಸೀದಿ, ಆ ಪ್ರದೇಶದಲ್ಲಿನ ನೀರಿನ ಪ್ರಮಾಣದ ಕುರಿತ ವರದಿ ಪತ್ರ ಬೇಕಾಗುತ್ತದೆ. ಇನ್ನೂ ಇವುಗಳಲ್ಲಿನ ಬಹುತೇಕ ದಾಖಲೆಗಳು ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆದುಕೊಳ್ಳಬಹುದಾಗಿದೆ.

ಭೂ ಪರಿವರ್ತನೆ ಮಾಡುವ ಮೊದಲು ನೆನಪಿಡಬೇಕಾದ ಅಂಶಗಳು

ನಿಮ್ಮ ಭೂ ಪರಿವರ್ತನೆಯ ಮೊದಲು ನೀವು ಪರಿಗಣಿಸಬೇಕಾದ ಕೆಲವು ವಿಷಯಗಳೆಂದರೆ
ಯಾವಾಗಲೂ ಭೂಮಿಯ ಶೀರ್ಷಿಕೆ ಸ್ಪಷ್ಟವಾಗಿದೆ ಯೇ.? ಬೇರೆ ಯಾರೂ ಹಕ್ಕು ಹೊಂದಿಲ್ಲವೇ.? ಎಂದು ಖಚಿತಪಡಿಸಿಕೊಳ್ಳಿ, ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಆಸ್ತಿಯನ್ನು ಹೊಂದಿದ್ದರೆ, ಎಲ್ಲಾ ಮಾಲೀಕರ ಐಡಿಗಳನ್ನು ಪರಿಶೀಲಿಸಿ. ಈ ಪ್ರಕ್ರಿಯೆಯನ್ನು ನೀವು ನಿರ್ದಿಷ್ಟ ಸಮಯದಲ್ಲಿ ಮಾಡಬೇಕಾಗುತ್ತದೆ.

ಆಸ್ತಿಯ ಮೇಲೆ ಯಾವುದೇ ರೀತಿಯ ದೂರುಗಳು, ಬ್ಯಾಂಕ್ ಬಾಕಿಗಳು ಅಥವಾ ಇನ್ನಿತರೆ ಅಡಮಾನಗಳು ಇದ್ದರೆ, ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತಿಸುವ ಅರ್ಜಿ ತಿರಸ್ಕರವಾಗುತ್ತದೆ.

ಹಾಗೇ ಭೂ ಪರಿವರ್ತನೆಗೆ ಅನ್ವಯವಾಗುವಂತರ ನಿರ್ದಿಷ್ಟಪಡಿಸಿದ ಉದ್ದೇಶಕ್ಕಿಂತ ಬೇರೆ ಉದ್ದೇಶಕ್ಕಾಗಿ ಭೂಮಿಯನ್ನು ಬಳಸುವುದು ಕೂನೂನು ಬಾಹಿರದ ಜೊತೆಗೆ ಶಿಕ್ಷಾರ್ಹವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಇನ್ನೂ ಭಾರತೀಯರಲ್ಲದವರು ಅಂದರೆ ಅನಿವಾಸಿ ಭಾರತೀಯರು ಸರಿಯಾದ ಕಾರ್ಯವಿಧಾನಗಳನ್ನು ಅನುಸರಿ ಆ ಮೂಲಕ ಭೂಮಿಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಬದಲಾಯಿಸಿದ ಬಳಿಕ ಭಾರತದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಇಲ್ಲವಾದರೆ ಅವರು ಭಾರತದಲ್ಲಿನ ಕೃಷಿ ಭೂಮಿಯನ್ನು ಖರೀದಿಸಲು ಅನರ್ಹರಾಗುತ್ತಾರೆ.

ಶುಲ್ಕ ಪಾವತಿಯ ರಸೀದಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಕಾರಣ ಇದು ಪರಿವರ್ತನೆಯ ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ಪುರಾವೆಯಾಗಿರುತ್ತದೆ.

ಕೃಷಿ ಭೂಮಿ ವಸತಿಗೆ ಪರಿವರ್ತಿಸುವ ವೇಳೆ ಸೂಕ್ತವಾದ ಕಾನೂನು ಪ್ರಕ್ರಿಯೆ ಮತ್ತು ನಿಬಂಧನೆಗಳ ಪಾಲನೆ ಅತಿ ಮುಖ್ಯ, ಪರಿಸರ ಮತ್ತು ಸ್ಥಳೀಯ ಸಮುದಾಯದ ಮೇಲೆ ಪ್ರಭಾವವನ್ನು ಪರಿಗಣಿಸಬೇಕು. ಅಲ್ಲದ ವಲಯ ಕಾನೂನುಗಳು ಮತ್ತು ಭೂ ಬಳಕೆ ನಿಯಮಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಜೊತೆ ಸೂಕ್ತ ಸಮಾಲೋಚನೆಯಿಂದಾಗಿ ಕಾನೂನುಬದ್ಧತೆ ಕಾಪಾಡಿಕೊಳ್ಳಬೇಕಾಗುತ್ತದೆ…

ಕೃಷಿ ಭೂಮಿ ವಸತಿಗಾಗಿ ಪರಿವರ್ತಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೈಗೊಳ್ಳಬೇಕಾದ ಕ್ರಮಗಳೇನು.?

ದೇಶದ ವಿವಿಧ ರಾಜ್ಯಗಳಲ್ಲಿ, ಆನ್‌ಲೈನ್‌ನಲ್ಲಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಲಾಗುತ್ತಿದೆ ಅಂತೆಯೇ, ಕರ್ನಾಟಕದಲ್ಲೂ ಸಹ ಆನ್ ಲೈನಲ್ಲಿ ಭೂ ಪರಿವರ್ತನೆ ಮಾಡಲು ಸರ್ಕಾರದ ಅಧಿಕೃತ ವೆಬ್ ಸೈಟ್ ಬಳಸಬೇಕಾಗುತ್ತದೆ. ಇನ್ನೂ landrecords.karnataka.gov.in ಅಥವಾ ಭೂಮಿ ಪೋರ್ಟಲ್‌ಗೆ ಹೋಗಬೇಕು. ಅಲ್ಲಿ ಸೂಚಿಸಲಾಗಿರುವ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸ ಬಳಿಕ‌ ಅದನ್ನು ನಿರಂತರ ಫಾಲೋ ಅಪ್ ಮಾಡುವುದು ಮುಖ್ಯವಾದ ಸಂಗತಿಯಾಗಿರುತಗತದೆ.

Related News

spot_img

Revenue Alerts

spot_img

News

spot_img