26.7 C
Bengaluru
Sunday, December 22, 2024

ಸಬ್ ರಿಜಿಸ್ಟ್ರಾರ್ ಕಛೇರಿಯ ಕಾವೇರಿ 2.0 ನಲ್ಲಿ ಜನರಲ್ ಪವರ್ ಆಫ್ ಅಟ್ಟೋರ್ನಿ (GPA) ದಸ್ತಾವೇಜು ಸಲ್ಲಿಸುವುದು ಹೇಗೆ?

ಬೆಂಗಳೂರು ಜುಲೈ 13 : ಕಂದಾಯ ಇಲಾಖೆಯು ದಸ್ತಾವೇಜುಗಳ ನೋಂದಣಿ ಸರಳವಾಗಿಡುವುದಕ್ಕಾಗಿ ಕಾವೇರಿ 2.0 ತಂತ್ರಾಶವನ್ನು ಜಾರಿಗೆ ತಂದಿದ್ದು ಅದರ ಕುರಿತಾಗಿ ಒಂದೊಂದೇ ವಿಷಯಗಳು ಜನರಿಗೆ ತಿಳಿಸುವ ಒಂದು ವಿಭಿನ್ನ ಕ್ರಮ ನಿಮಗಾಗಿ

1.ಕಾವೇರಿ 2.0 link ನ ಮೇಲೆ ಕ್ಲಿಕ್ ಮಾಡಿ ಕಾವೇರಿ 2.0 ಮುಖ ಪುಟ ತೆರೆಯುತ್ತದೆ.

2. Start new Application ಮೇಲೆ ಕ್ಲಿಕ್ ಮಾಡಿ.

3.Document Registration ಮೇಲೆ ಕ್ಲಿಕ್ ಮಾಡಿ ಕೆಳಗೆ ಬರುವ Continue Button ಮೇಲೆ ಕ್ಲಿಕ್ ಮಾಡಿ.

4. Select the Nature of Document as “Power of Attorney” and Select Article as “”Power of Attorney” ಅನ್ನು ಸೆಲೆಕ್ಟ್ ಮಾಡಿ.
ನಂತರ
Sub Article Select ಮಾಡುವ ಬಗ್ಗೆ, Article (41-eb-i) When given to Father,Mother,Wife,Husband,Sons,Daughters, ಅನ್ನು ಸೆಲೆಕ್ಟ್ ಮಾಡಿ.

5. ಇದೊಂದು Book-4 Document ಆಗಿರುವುದರಿಂದ (i)Agriculture (ii)Non-Agriculture ಆಯ್ಕೆಗಳು ಬಂದಿರುವುದಿಲ್ಲ.

6. Description ಅಲ್ಲಿ ಜಿ.ಪಿ.ಎ. ಅನ್ನು ಯಾರಿಗೆ ಕೊಡ್ತಾ ಇದೀರಿ ಅವರ ಮಾಹಿತಿಯನ್ನು ನೀಡಿರಿ. Save and Continue Button ಮೇಲೆ ಕ್ಲಿಕ್ ಮಾಡಿ.

7. ಪಾರ್ಟಿ/ಪಕ್ಷಗಾರರಬಗೆಗಿನ ಮಾಹಿತಿ information ಭರ್ತಿ ಮಾಡುವುದರ ಬಗ್ಗೆ.
(i) Executant -1 :- ಹೆಸರಿನ ಜೊತೆಗೆ ಅವರ ಹೆಸರು ವಿಳಾಸ ಐಡಿ ಪ್ರೂಫ್ ಅನ್ನು ನಮೂದು ಮಾಡಿ. ಕ್ಲಿಕ್ on Save Executant -1, Claimant Select ಮಾಡಬೇಡಿ.and Move on

(ii) Executant -2:- ಹೆಸರಿನ ಜೊತೆಗೆ ಅವರ ಹೆಸರು ವಿಳಾಸ ಐಡಿ ಪ್ರೂಫ್ ಅನ್ನುರವರ ವಿವರಗಳನ್ನು ನಮೂದು ಮಾಡಿ. Executant -2 ಅನ್ನು ನಾನು ಇಲ್ಲಿ Claimant(ಹಕ್ಕುದಾರ) ಆಗಿ ಮಾಡಿದ್ದೇನೆ.
ನಂತರ Save Executant-2 ಮೇಲೆ ಕ್ಲಿಕ್ ಮಾಡಿ.

Move to Presenter ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಯಾರು ಬರೆದು ಕೊಡುತ್ತಿದ್ದಾರೆ ಅವರ ಬಗ್ಗೆ ವಿವರ ದೊರೆಯಲಿದೆ. ಅವರನ್ನೆ ಸೆಲೆಕ್ಟ್ ಮಾಡಿ Make presenter ಮೇಲೆ ಕ್ಲಿಕ್ ಮಾಡಿ.

(iii) Identifier- 1&2: ನಂತರ ನಾವು ಇಬ್ಬರು ಗುರುತಿಸುವವರನ್ನ ಆಯ್ಕೆ ಮಾಡಬೇಕಾಗುತ್ತದೆ. ಅವರ ವಿವರಗಳನ್ನು ಇಲ್ಲಿ ನಮೂದಿಸಿ, Save and Continue ಮೇಲೆ ಕ್ಲಿಕ್ ಮಾಡಿ.

8.ಮಾರ್ಕೆಟ್ ವಾಲ್ಯುವೇಷನ್ ಇದೆಯೋ ಇಲ್ಲವೋ ಎಂಬುದನ್ನ ಈ ಪೇಜ್ ನಿಮಗೆ ತಿಳಿಸಲಿದೆ, ಕುಟುಂಬದ ಒಳಗೆ ಜಿಪಿಎ ಮಾಡುತ್ತಿರುವುದರಿಂದ ಮಾರ್ಕೆಟ್ ವಾಲ್ಯುವೇಷನ್ ಇರುವುದಿಲ್ಲ. Save and Continue ಮೇಲೆ ಕ್ಲಿಕ್ ಮಾಡಿ.

9.Calculate ಮೇಲೆ click ಮಾಡಿದಾಗ ನೀವಲ್ಲಿ ನೋಡಬಹುದು, ಜಿಪಿಎ ಮಾಡಲು ಯಾವುದೇ ‍Consideration amount ಮತ್ತು Market Value ಇರುವುದಿಲ್ಲ. ಕೇವಲ Government Duty ಮಾತ್ರ ಹಾಕಲಾಗಿರುತ್ತದೆ. ಒಟ್ಟಾರೆಯಾಗಿ ನೀವು ಎಷ್ಟು ಮೊತ್ತವನ್ನು ಕಟ್ಟಬೇಕು ಎಂಬುದನ್ನು ಅದು ತೋರಿಸುತ್ತದೆ. ಸೇವ್ ಅಂಡ್ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.

10.ನಂತರ ನಿಮ್ಮ ಸಂಪೂರ್ಣ ವಿವರ ನಿಮ್ಮ ಮುಂದೆ ಬರಲಿದೆ, ಅದನ್ನು ಸರಿಯಾಗಿ ಇದೆಯಾ ಎಂದು ಚೆಕ್ ಮಾಡಿ ನಂತರ ನೀವು ಸಲ್ಲಿಸಬೇಕಾದ ಜಿಪಿಎ ಪತ್ರ ಮತ್ತು ಅನೆಕ್ಷರ್ (ಖಾತಾಪತ್ರ,ಆಧಾರ್ ಕಾರ್ಡ್) ಅನ್ನು 5MB ಗೆ ಮೀರದಂತೆ Scan ಮಾಡಿ ಉಪಲೋಡ್ ಮಾಡಿ.

11. Execution Date ಅನ್ನು ಸೆಲೆಕ್ಟ್ ಮಾಡಿ

12. ಜಿಪಿಎ ಮಾಡಿಸಲು ರಾಜ್ಯದ ಯಾವುದೇ ಸಬ್ ರಿಜಿಸ್ಟ್ರಾರ್ ಕಛೇರಿಯನ್ನು ಆಯ್ಕೆ ಮಾಡಬಹುದಾಗಿದ್ದು, ಯಾವುದಾದರು ಹತ್ತಿರದ ಒಂದನ್ನು ಆಯ್ಕೆ ಮಾಡಿ. ಇಲ್ಲಿಗೆ ಜಿ.ಪಿ.ಎ ನೋಂದಣಿ ಮಾಡಿಸುವ ನೋಂದಣಿ ಪೂರ್ವ ಕೆಲಸ ಮುಗಿದಂತೆ.

Related News

spot_img

Revenue Alerts

spot_img

News

spot_img