18.5 C
Bengaluru
Friday, November 22, 2024

ಉಳಿತಾಯ ಖಾತೆಯಲ್ಲಿ ಒಂದು ದಿನಕ್ಕೆ ಎಷ್ಟು ಹಣವನ್ನು ಠೇವಣೀ ಮಾಡಬಹುದು..?

ಬೆಂಗಳೂರು, ಆ. 04 : ಬ್ಯಾಂಕ್ ವ್ಯವಹಾರಗಳು ನಾವು ತಿಳಿದುಕೊಂಡಷ್ಟು ಸುಲಭವಲ್ಲ. ಭಾರತದಲ್ಲಿ ಪ್ರತಿಯೊಬ್ಬರೂ ಈಗ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಹೆಚ್ಚಾಗಿ ಬ್ಯಾಂಕ್ ಗಳನ್ನು ಬಳಸದಿದ್ದರೂ ಕೂಡ ಖಾತೆಯನ್ನಂತೂ ಹೊಂದಿರುತ್ತಾರೆ. ಇನ್ನು ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡುವ ಮೊದಲು ಪ್ರತಿಯೊಬ್ಬರೂ ಕೂಡ ಆ ಬ್ಯಾಂಕ್ ಎಷ್ಟು ವಿಶ್ವಾಸಾರ್ಹ ಎಂಬುದನ್ನು ಪರಿಶೀಲಿಸುತ್ತಾರೆ. ಇದಕ್ಕಾಗಿ ಗ್ರಾಹಕರು, ಆ ಬ್ಯಾಂಕ್ ಬಗ್ಗೆ ಮಾಹಿತಿ ತಿಳಿಯಲು ಬಯಸುತ್ತಾರೆ.

ಅದರಲ್ಲಿ ಹಣವಿಟ್ಟರೆ, ಭವಿಷ್ಯದಲ್ಲಿ ತೊಂದರೆಯಾಗುತ್ತದೆಯೇ..? ಇಲ್ಲವೇ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾರೆ. ಆ ಬ್ಯಾಂಕ್ ವಹಿವಾಟು, ಮುಖ್ಯ ಕಚೇರಿ ಬಗ್ಗೆ ತಿಳಿಯಲು ಬಯಸುತ್ತಾರೆ. ಯಾಕೆಂದರೆ, ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿರಲಿ ಎಂದು ಬ್ಯಾಂಕ್ ನಲ್ಲಿ ಠೇವಣಿ ಮಾಡಲಾಗುತ್ತದೆ. ಇನ್ನು ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡಲು ಕೂಡ ಮಿತಿ ಇದೆ. ಆರ್ ಬಿಐ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಉಳಿತಾಯ ಖಾತೆಗೆ ನಗದು ಠೇವಣಿ ಮಿತಿ ದಿನಕ್ಕೆ INR 1 ಲಕ್ಷ. ಆದಾಗ್ಯೂ, ಒಮ್ಮೆಯಾದರೂ ನೀವು ಉಳಿತಾಯ ಖಾತೆಯಲ್ಲಿ ಒಂದು ದಿನದಲ್ಲಿ INR 2,50,000 ವರೆಗೆ ಸುರಕ್ಷಿತವಾಗಿ ಠೇವಣಿ ಮಾಡಬಹುದು. ಉಳಿತಾಯ ಖಾತೆಯಲ್ಲಿ ನಗದು ಠೇವಣಿ ಮಾಡುವ ವಾರ್ಷಿಕ ಮಿತಿಯು ಆರ್ಥಿಕ ವರ್ಷದಲ್ಲಿ INR 10 ಲಕ್ಷಗಳಿಗಿಂತ ಹೆಚ್ಚಿಲ್ಲ. ಆದ್ದರಿಂದ, ನೀವು ಆ ಮಿತಿಯನ್ನು ದಾಟದ ಹೊರತು ಐಟಿ ಇಲಾಖೆಯಿಂದ ನಿಮ್ಮನ್ನು ಸ್ಕ್ಯಾನ್ ಮಾಡಲಾಗುವುದಿಲ್ಲ.

2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಿದ್ದರೆ ಮತ್ತು ಐಟಿಆರ್‌ನಲ್ಲಿ ತೋರಿಸದಿದ್ದರೆ. ಐಟಿ ಇಲಾಖೆಯು ವಹಿವಾಟನ್ನು ಪತ್ತೆಹಚ್ಚುತ್ತದೆ ಮತ್ತು 200% ವರೆಗೆ ದಂಡವನ್ನು ವಿಧಿಸಬಹುದು. ತಮ್ಮ ಬ್ಯಾಂಕ್ ಖಾತೆಯಲ್ಲಿ INR 50,000 ಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ಯಾರಾದರೂ ತಮ್ಮ ಪ್ಯಾನ್ ವಿವರಗಳನ್ನು ಬ್ಯಾಂಕ್ ಹೊಂದಿಲ್ಲದಿದ್ದರೆ ಅವರ ಪ್ಯಾನ್‌ ಕಾರ್ಡ್‌ ನ ಜೆರಾಕ್ಸ್‌ ಕಾಪಿ ಅನ್ನುಸಲ್ಲಿಸಬೇಕು ಎಂದು ಆರ್‌ ಬಿಐ ಹೇಳುತ್ತದೆ.

Related News

spot_img

Revenue Alerts

spot_img

News

spot_img