20.5 C
Bengaluru
Tuesday, July 9, 2024

ಎಲ್ಲೆಡೆ ಚರ್ಚೆಯಾಗುತ್ತಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು..?

ಬೆಂಗಳೂರು, ಡಿ. 19: ಹೊಸ ಪಿಂಚಣಿ ಯೋಜನೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಹೊಸ ಪಿಂಚಣಿ ಯೋಜನೆ ಬಗ್ಗೆ ಜನರಲ್ಲಿ ಈಗಾಗಲೇ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ಅಲ್ಲದೇ, ಹಳೆಯ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು ಎಂದು ಹೋರಾಟ ಕೂಡ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ ಗೂ ಹಳೆಯ ಯೋಜನೆಗೂ ಇರುವ ವ್ಯತ್ಯಾಸವೇನು..? ಹೊಸ ಪಿಂಚಣಿ ಯೋಜನೆಯನ್ನು ಯಾಕೆ ಒಪ್ಪುತ್ತಿಲ್ಲ ಎಂಬುದನ್ನು ತಿಳಿಯೋಣ ಬನ್ನಿ..

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹಲವು ನಿಯಮಗಳನ್ನು ಬದಲಾವಣೆ ಮಾಡಿದ್ದು, ಹೂಡಿಕೆದಾರರಿಗೆ ಅನೇಕ ಆಯ್ಕೆಗಳನ್ನು ಒದಗಿಸಿದೆ. ಎನ್‌ʼಪಿಎಸ್‌ ನಲ್ಲಿ ಎರಡು ಹೂಡಿಕೆ ವಿಧಗಳಿವೆ. ಸಕ್ರಿಯ ಹಾಗೂ ಸ್ವಯಂ ಹೂಡಿಕೆಯನ್ನು ಮಾಡಬಹುದಾಗಿದೆ. ಎನ್‌ʼಪಿಎಸ್‌ ನಲ್ಲಿ ಹಣವನ್ನು ನಿರ್ವಹಿಸಲು ಹಲವು ಫಂಡ್ ಮ್ಯಾನೇಜರ್‌ ಗಳು ಇರುತ್ತಾರೆ. ಹೂಡಿಕೆದಾರರು ಯೋಜನೆಯಗೆ ನೋಂದಾಯಿಸುವಾಗ ಮ್ಯಾನೇಜರ್‌ ಅನ್ನು ಆಯ್ಕೆ ಮಾಡಬಹುದಾಗಿದೆ. ಆಸ್ತಿ ವರ್ಗಗಳ ನಡುವೆ ಚಂದಾದಾರರು ಹಣವನ್ನು ಹೂಡಿಕೆ ಮಾಡಲು ಅನುಪಾತವನ್ನು ಒದಗಿಸಲಾಗಿದೆ. ಹೂಡಿಕೆ ಆಯ್ಕೆ ಸಂಬಂಧ ಹೆಚ್ಚಿನ ಮಾಹಿತಿ ಇಲ್ಲದವರು ಸ್ವಯಂ ಆಯ್ಕೆಯನ್ನು ಆರಿಸಿಕೊಳ್ಳುವುದು ಉತ್ತಮವಾಗಿರುತ್ತದೆ.

18 ರಿಂದ 70 ವರ್ಷದವರೆಗೆ ಎನ್‌ʼಪಿಎಸ್‌ ಅಕೌಂಟ್‌ ಅನ್ನು ತೆರೆಯಲು ಅವಕಾಶವಿದೆ. 65 ವರ್ಷಗಳ ಬಳಿಕ ಎನ್‌ʼಪಿಎಸ್‌ ಗೆ ಸೇರ್ಪಡೆಗೊಳ್ಳುವವರಿಗೆ 3 ವರ್ಷಗಳ ಲಾಕ್ಿನ್‌ ಅವಧಿ ಇರಲಿದೆ. ಎನ್‌ʼಪಿಎಸ್‌ ನಿರ್ಗಮನಕ್ಕೆ 75 ವರ್ಷ. ಚಂದಾದಾರರಿಗೆ ಪಿಂಚಣಿ ನಿಧಿಯ ಶೇ.60 ರಷ್ಟು ಹಣವನ್ನು ತೆರಿಗೆ ರಹಿತ ಒಟ್ಟು ಮೊತ್ತವನ್ನು ಹಿಂಪಡೆಯಬಹುದು. ಊಳಿದ ಹಣವನ್ನು ಮೆಚ್ಯುರಿಟಿ ನಿಧಿಯನ್ನು ವರ್ಷಾಶನ ಖರೀದಿಗೆ ಬಳಸಬೇಕು. ಆದರೆ ಮೆಚ್ಯೂರಿಟಿ ಹಣ 5 ಲಕ್ಷಕ್ಕಿಂತಲೂ ಕಡಿಮೆ ಇದ್ದಲ್ಲಿ ಅದನ್ನು ಸಂಪೂರ್ಣವಾಗಿ ಹಿಂಪಡೆಯಬಹುದು. ಈನ್ನು ಸರ್ಕಾರಿ ವಲಯದ ಎನ್ʼಪಿಎಸ್‌ ಚಂದಾದಾರರಿಗೆ ಆನ್‌ ಲೈನ್‌ ನಿರ್ಗಮನ ಪ್ರಕ್ರಿಯೆಯನ್ನು ವಿಸ್ತರಣೆ ಮಾಡಲಾಗಿದೆ.

ಸರ್ಕಾರಿ ವಲಯದ ಉದ್ಯೋಗಿಗಳಿಗೆ PFRDA ಅನ್ನು ಆನ್ ಲೈನ್‌ ಮೂಲಕ ನಿರ್ಗಮನ ಪ್ರಕ್ರಿಯೆಯನ್ನು ವಿಸ್ತರಿಸಿದೆ. ಎನ್ʼಪಿಎಸ್‌ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳಿಗೂ ಈ ಸೌಲಭ್ಯವಿರಲಿದೆ. ಅಕಸ್ಮಾತ್‌ ಅಕಾಲಿಕ ನಿರ್ಗಮನವನ್ನು ಪಡೆಯಬೇಕೆಂದರೆ ಒಟ್ಟು ಸಂಪತ್ತನಿ೯ನಲ್ಲಿ ಶೇ. 20 ರಷ್ಟು ಮಾತ್ರ ಎನ್‌ʼಪಿಎಸ್‌ ನಲ್ಲಿ ಪಡೆಯಬಹುದು. ಉಳಿದ ಹಣವನ್ನು ವರ್ಷಾಶನ ಮೂಲಕವೇ ಪಡೆಯಬಹುದು. ಇನ್ನು 80:20 ನಿಯಮವನ್ನು 18 ರಿಂದ 60 ವರ್ಷದೊಳಗಿನ ಎನ್‌ʼಪಿಎಸ್‌ ಸರ್ಕಾರಿ ಮತ್ತು ಸರ್ಕಾರೇತರ ಚಂದಾದದರಿಗೆ ಈ ನಿಯಮ ಅನ್ವಯಿಸಲಿದೆ. ಸರ್ಕಾರೇತರದವರು ಸುಮಾರು 10 ವರ್ಷಗಳ ಕಾಲ ಚಂದಾದಾರರಾಗಿರಬೇಕು.

ಇನ್ನು ಹೊಸ ಪಿಂಚಣಿ ಯೋಜನೆಯಲ್ಲಿ 65 ವರ್ಷ ಮೀರಿದವರು ಚಂದಾದಾರರಾಗಲು ಈಕ್ವಿಟಿ ಎಕ್ಸಪೋಷರ್‌ ಆಟೋ ಮತ್ತು ಆಕ್ಟೀವ್‌ ಆಯ್ಕೆ ಅಡಿಯಲ್ಲಿ ತೆರೆಯಬಹುದು. ಚಂದಾದಾರರು ಪಿಎಫ್‌ ಮತ್ತು ಸ್ವತ್ತು ಹಂಚಿಕೆಯ ಆಯ್ಕೆಯನ್ನು ಶೇ.15:50 ಗರಿಷ್ಢವಾಗಿ ಆಯ್ಕೆ ಮಾಡಿಕೊಲ್ಳಬೇಕು. ಪಿಂಚಣಿ ಯೋಜನೆಯನ್ನು ವರ್ಷಕ್ಕೊಮ್ಮೆ ಬದಲಾಯಿಸುವ ಅವಕಾಶವಿರುತ್ತದೆ. ಆಸ್ತಿ ಹಂಚಿಕೆಯನ್ನು ಎರಡು ಬಾರಿ ಬದಲಾಯಿಸಬಹುದಾಗಿದೆ. ಹೊಸ ಪಿಂಚಣಿ ಯೋಜನೆಯಲ್ಲಿ ಕೆಲ ಶುಲ್ಕಗಳನ್ನು ವಿಧಿಸಬಹುದು. ಹೊಸ ಪಿಂಚಣಿ ಯೋಜನೆಯಲ್ಲಿ ಆತ್ಮೀಯ ಭತ್ಯೆಯನ್ನು ಒಳಗೊಂಡಿದೆ.

ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ಸಾಲ ಪಡೆಯುವ ಅವಕಾಶವಿತ್ತು. ಆದರೆ ಹೊಸ ಪಿಂಚಣಿ ಯೋಜನೆಯಡಿಯಲ್ಲಿ ಈ ಸೌಲಭ್ಯವಿಲ್ಲ. ಉದ್ಯೋಗಿಯೂ ಮೂಲ ವೇತನ, ವಿಶೇಷ ಏತನ ಮತ್ತು ಇತರ ಭತ್ಯೆಯನ್ನು ಸಂಯೋಜಿಸಿ ಶೇ. 10 ರಷ್ಟು ಮೊತ್ತವನ್ನು ಭವಿಷ್ಯ ನಿಧಿಗೆ ಸೇರಿಸಬಹುದಿತ್ತು. ಆದರೆ ಹೊಸ ಪಿಂಚಣಿ ಯೋಜನೆಯ ಪ್ರಕಾರ ಇವುಗಳ ಜೊತೆಗೆ ತುಟಿ ಭತ್ಯೆಯನ್ನು ಕೂಡ ಸಂಯೋಜಿಸಬೇಕು ಎಂದು ಹೇಳಲಾಗಿದೆ. ಹೊಸ ಪಿಂಚಣಿ ಯೋಜನೆಯಲ್ಲಿ 1 ಲಕ್ಷದವರೆಗಿನ ಹೂಡಿಕೆಯ ಮೇಲೆ ಎರಡೂ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ ಇದು ಹಳೆಯ ಪಿಂಚಣಿ ಯೋಜನೆಯಲ್ಲಿ ಇಲ್ಲ.

Related News

spot_img

Revenue Alerts

spot_img

News

spot_img