ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ 10-ಲೇನ್ ಟೋಲ್ಡ್ ಎಕ್ಸ್ ಪ್ರೆಸ್ ವೇ ಆಗಿದ್ದು ಅದು ಭಾರತದ ರಾಜ್ಯವಾದ ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ನಗರಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಯನ್ನು ನ್ಯಾಷನಲ್ ಹೆದ್ದಾರಿ ಪ್ರಾಧಿಕಾರ ಆಫ್ ಇಂಡಿಯಾ ( NHAI ) ಅಭಿವೃದ್ಧಿಪಡಿಸುತ್ತಿದೆ ಮತ್ತು ಸುಮಾರು 9,000 ಕೋಟಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.
ಆದರೆ ಈ ಯೋಜನೆಯು ಉದ್ಘಾಟನೆಯಾದ ದಿನದಿಂದ ಜನಸಾಮನ್ಯರಿಂದ ಬಾರಿ ಟೀಕೆಗೆ ಗುರಿಯಾಗುತ್ತಿದೆ, ಅದಕ್ಕೆ ಪ್ರಮುಖ ಕಾರಣ ಟೋಲ್ ನ ಬೆಲೆ ಅಧಿಕಾವಾಗಿರುವುದು ಮತ್ತು ಟೋಲ್ ಕಟ್ಟಿಸಿಕೊಳ್ಳುವುದರಲ್ಲಿ ಯಾವುದೇ ವೈಜ್ಞಾನಿಕ ರೀತಿ ಇಲ್ಲದೆ ಅವೈಜ್ಞಾನಿಕ ಯೋಜನೆಯಂತೆ ಬೆಂಗಳೂರು ನಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇರುವ ಟೋಲ್ ಹಣವನ್ನು ಬೆಂಗಳೂರು ನಿಂದ ಮಂಡ್ಯ,ಮದ್ದೂರು,ರಾಮನಗರ,ಬಿಡದಿ ಹೀಗೆ ಎಲ್ಲಾ ಪ್ರಯಾಣಿಕರಿಗೂ ಒಂದೇ ತರಹದ ಟೋಲ್ ನಿರ್ಧರಿಸಿರುವುದು, ಭಾರಿ ಟೀಕೆಗೆ ಗುರಿಯಾಗಿದೆ.
ಈ ವಿಷಯಕ್ಕೆ ಪುಷ್ಟೀಕರಿಸುವಂತೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಮೈಸೂರಿನ ಹಿರಿಯ ನಾಯಕ ಎಚ್.ವಿಶ್ವನಾಥ್ ರವರು , ರಸ್ತೆಯ ಕಾಮಗಾರಿಗೆ ಪ್ರಮುಖ ಸಾಮಗ್ರಿಗಳನ್ನುಅದರ ಉಸ್ತುವಾರಿ ವಹಿಸಿದ್ದ ಮೈಸೂರು ಜಿಲ್ಲೆಯ M.P ಪ್ರತಾಪ್ ಸಿಂಹ ರವರಿಗೆ ಪರಿಚಯವಿರುವ ಕಂಪನಿಯೇ ವಹಿಸಿರುತ್ತಲ್ಲ ಅದರಲ್ಲಿ ಎಷ್ಟು ಕಮಿಷನ್ ಪಡೆದಿದ್ದೀರ ಎಂದು ಕೇಳಿದ್ದಾರೆ.
ಈಗಿನ ಟೋಲ್ ದರನಿಗದಿಯಾಗಿರುವ ಪ್ರಕಾರ ದಿನಕ್ಕೆ 5 ಕೋಟಿಗಳಷ್ಟು ಹಣ ಟೋಲ್ ಮೂಲಕ ಬರಲಿದೆ. ತಿಂಗಳಿಗೆ 5*30=150 ಕೋಟಿಗಳಾಗುತ್ತದೆ, ವರ್ಷಕ್ಕೆ 150*12=1800 ಕೋಟಿಗಳಾಗುತ್ತದೆ. ಈ ಒಪ್ಪಂದವಿರುವುದು 10 ವರ್ಷಗಳಿಗೆ ಅಂದರೆ 18,000 ಕೋಟಿಗಳಿಗೂ ಅಧಿಕ ಹಣ ಟೋಲ್ ಮೂಲಕ ಸಂಗ್ರಹವಾಗಲಿದೆ. ಸರ್ಕಾರ ಕೊಟ್ಟಿರುವ ದಾಖಲೆಯ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ 9000 ಕೋಟಿಗಳಷ್ಟು ಹಣ ವೆಚ್ಚವಾಗಿದೆ ಎಂದು ತಿಳಿಸಿದೆ. ಇವರು 60% ಹಣವನ್ನು ಮಾತ್ರ ರಸ್ತೆ ನಿರ್ಮಾಣಕ್ಕೆ ಹೂಡಿಕೆಮಾಡಲಾಗಿದೆ. ಅಂದರೆ ಸುಮಾರು 7200 ಕೋಟಿಗಳಷ್ಟು ಮಾತ್ರ. ಬಿ.ಜೆ.ಪಿ.ಯವರು ಯಾರಿಗೋ ಲಾಭ ತರುವ ಸಲುವಾಗಿ ಈ ರೀತಿ ಹಣ ಸಂಗ್ರಹಿಸಿ ರಾಜ್ಯದ ಜನರ ಬಳಿ ದರೋಡೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಇಂತ ರಸ್ತೆ ಯಾರು ಇಲ್ಲಿಯವರೆಗೆ ಮಾಡೇ ಎಂಬಂತೆ ಬಿಂಬಿಸಿ, ಸ್ವತಃ ಮೋದಿಯವರೆ ಬಂದು ಇದನ್ನು ಉದ್ಘಾಟಿಸಿರುತ್ತಾರೆ. ಆದರೆ ಇಲ್ಲಿ ಆಗುತ್ತಿರುವ ತೊಂದರೆಯನ್ನು ಯಾರು ಸಹ ಆಲಿಸುತಿಲ್ಲ ಎಂದು ಕಿಡಿಕಾರಿದ್ದಾರೆ.
“ಮಂಡ್ಯದವರಿಗ್ ಆಗೊ ತೊಂದ್ರೆ ಬೇರೆ ಯಾರ್ಗು ಆಗುತಿಲ್ಲ” ಎಂದ ಎಚ್.ವಿಶ್ವನಾಥ್ ರವರು ,ಒಂದು ಕಬ್ಬಿನ ಲಾರಿಗೆ 880 ರೂಗಳಷ್ಟು ರಷ್ಟು ಹಣ ಪಡೆಯುತ್ತಿರುವ ಇವರು ರೈತರಿಗೆ ಭಾರಿ ತೊಂದರೆ ಕೊಡುತ್ತಿದ್ದಾರೆ . ಸರ್ವೀಸ್ ರೋಡ್ ಗಳು ಇನ್ನು ಸರಿಯಾಗಿ ಅಗಿಲ್ಲ ಈಗಾದರೆ ರೈತರಿಗೆ, ಸ್ಥಳೀಯರಿಗೆ ಭಾರಿ ತೊಂದರೆ ಯಾಗುತ್ತಿದೆ ಎಂದರು.
National Highway Authority of India(NHAI) ಏನೇಳುತ್ತೆ ಎಂದರೆ ” ರಸ್ತೆ ಪೂರ್ಣ ಪ್ರಮಾಣವಾಗಿ ಮುಗಿದ ನಂತರ ಮಾತ್ರ ಟೋಲ್ ಅನ್ನು ತೆಗೆದುಕೊಳ್ಳಬೇಕು ಎಂದಿದೆ” ಈ ನಿಯಮವನ್ನು ಎಲ್ಲಿ ಪಾಲನೆಮಾಡುತ್ತಿದ್ದೀರಿ, ರಸ್ತೆಯನ್ನು ಮೊದಲು ಸಂಪೂರ್ಣವಾಗಿ ನಿರ್ಮಿಸಿ ಆ ನಂತರ ಟೋಲ್ ಅನ್ನು ತೆಗೆದುಕೊಳ್ಳಿ ಯಾಕೆ ಇಷ್ಟು ಆತುರ, ನಿಮಗೆ ಹೇಳೋರು ಕೇಳೊರು ಇಲ್ಲವೆ ಎಂದು ವಾಗ್ದಾಳಿ ನಡೆಸಿದರು. ಅದಲ್ಲದೆ ಬಾಕಿ ಇರುವ ಕೆಲಸಗಳ ಬಗ್ಗೆ ಮಾತನಾಡಿರುವ ಅವರು,ಸರ್ವೀಸ್ ರೋಡ್ ಗಳು ಇನ್ನು ಕಂಪ್ಲೀಟ್ ಅಗಿಲ್ಲ, ಅಂಡರ್ ಪಾಸಸ್ 34 ಕ್ಕೆ ಬರಿ 22 ಕಂಪ್ಲೀಟ್ ಆಗಿದೆ, ಓವರ್ ಪಾಸಸ್ 12 ಕ್ಕೆ ಬರಿ 06 ಕಂಪ್ಲೀಟ್ ಆಗಿದೆ, ಪೆಡಸ್ಟ್ರಿಯಲ್ ಅಂಡರ್ ಪಾಸಸ್(ಪಾದಾಚಾರಿಗಳಿಗೆ) 18 ಕ್ಕೆ ಬರಿ 8 ಕಂಪ್ಲೀಟ್ ಆಗಿದೆ.
ಇಷ್ಟೆಲ್ಲಾ ಕೆಲಸ ಬಾಕಿ ಇದ್ದರು ನಿಮ್ಮ ಹೊಗಳಿಕೆ ಕಡಿಮೆಯಾಗುತ್ತಿಲ್ಲ, ಇದು ಜನರ ಸರ್ಕಾರ ಎಂಬುದನ್ನು ಮರೆದು ನಿಮ್ಮದೇ ರಾಜ್ಯ ನೀವು ಮಾಡಿದ್ದೆ ಸರಿ ಎಂಬಂತೆ ನಡೆದುಕೊಳ್ಳುತ್ತಿದ್ದೀರ. ಜನರಿಗೆ ಈ ಕೊಳಕು ಹುಳುಕುಗಳು ಗೊತ್ತಾಗುವಷ್ಟರಲ್ಲಿ ಎಲೆಕ್ಷನ್ ಮುಗಿಸುವ ಆತುರದಲ್ಲಿದ್ದೀರ.ಇದಲ್ಲದೆ ಈ ರಸ್ತೆಯನ್ನು 5 ಭಾರಿ ಎಸ್ಕಲೇಟ್ ಮಾಡಲಾಗಿದೆ, ಇದೊಂದು ಅವೈಜ್ಞಾನಿಕ ಯೋಜನೆ ಇದರಿಂದ ಈಗಾಗಲೆ 93 ಮಂದಿ ಸಾವನ್ನಪ್ಪಿದ್ದಾರೆ. ಅದಲ್ಲದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ 400 ಹೋಟೆಲ್ ಗಳು ಬಾಗಿಲು ಮುಚ್ಚಿಕೊಂಡಿವೆ, 91 ಪೆಟ್ರೋಲ್ ಬಂಕ್ ಮುಚ್ಚಿವೆ, ಇದು ಅವರ ಕುಟುಂಬಗಳ ಮೇಲೆ ಹಾಗು ಅವರನ್ನೆ ನಂಬಿದ ಸಾಕಷ್ಟು ಜನರ ಮೇಲೆ ಪರಿಣಾಮ ಬೀರಲಿದೆ. ಇವರ ಜೀವನದ ಜೊತೆ ಆಟವಾಡುತ್ತಿದ್ದೀರ, ಇವರಿಗೆಲ್ಲ ಸಾಧ್ಯವಾದಷ್ಟು ರೀತಿಯಲ್ಲಿ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.
ಈ ಯೋಜನೆಯಿಂದ ಚನ್ನಪಟ್ಟಣ ಗೊಂಬೆ ಮಾರುಕಟ್ಟೆ ಮೇಲೆ ಹೊಡೆತ ಬಿದ್ದಿದೆ. ಇವರಿಗೆಲ್ಲ ಯಾವ ರೀತಿ ಬದುಕು ಕಟ್ಟಿಕೊಡುತ್ತೀರ ಎಂದು ಕೇಳಿದರು. ರಸ್ತೆಯ ಪರಿಣಿತರ ಪ್ರಕಾರ ರಸ್ತೆ ಇನ್ನು ಅಗಲವಾಗಿರಬೇಕು ಎಂದು ಹೇಳಿದರು.ಇದೆಲ್ಲದೆ ಈ ರಸ್ತೆಗಳೆಲ್ಲ ರೋಡ್ ಟ್ರಾನ್ಸಪೋರ್ಟ್ ಮತ್ತು ನಾಷನಲ್ ಹೈವೆ ಮಂತ್ರಿ ನಿತಿನ್ ಗಡ್ಕರಿ ಯವರ ಬೇನಾಮಿ ಹಣ ಎಂದಿದ್ದಾರೆ. ಟೋಲ್ ವಸೂಲಿ ಕಂಪನಿನು ಅವರದೇನೆ, ರಸ್ತೆ ಗುತ್ತಿಗೆ ಪಡೆದ ಕಂಪನಿನು ಅವರದೇನೆ ಆದರೆ ಹಣಮಾತ್ರ ಜನರದ್ದು ಇದು ಬಿಜೆಪಿಯವರ ದುಡ್ಡಲ್ಲ ಜನರ ಬೆವರಿನ ದುಡ್ಡು ಎಂದರು.
ಅದಲ್ಲದೆ ಬಹಳ ಮುಖ್ಯವಾಗಿ ಪ್ರಧಾನಿ ಮೋದಿಯವರು ಬಂದಂತ ದಿನ , ಮಂಡ್ಯದಲ್ಲಿ ಅನ್ನದಾಸೋಹ, ಅಕ್ಷರದಾಸೋಹ ಮಾಡುತ್ತಿರುವ ಶ್ರೀ ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮಿಗಳನ್ನೇ ಮರೆತು ಅವರ ಹೆಸರಿರುವ ದ್ವಾರವನ್ನೇ ಬದಲಿಸಿ ಅವಿವೇಕ ತನಮೆರೆದಿರುವ ನಿಮಗೆ ಏನೆಂದು ಹೇಳಬೇಕೊ ತಿಳಿಯುತ್ತಿಲ್ಲ ಎಂದರು. C.T ರವಿ ಹಾಗೂ ಅಶ್ವತ್ ನಾರಾಯಣರನ್ನ ತರಾಟೆಗೆ ತೆಗೆದುಕೊಂಡ ಅವರು ನಿಮಗೆ ಯಾವ ಯೋಗ್ಯತೆ ಇದೆ ಎಂದು ಈ ರಾಜ್ಯದ ಸಚಿವರಾಗಿದ್ದೀರ ತಿಳಿಯುತ್ತಿಲ್ಲ ಎಂದರು. ನಿಮ್ಮನ್ನ ಆ ಸ್ಥಾನದಲ್ಲಿ ಕೂರಿಸಿರುವುದು ನಮ್ಮ ಜನಗಳ ತಪ್ಪು ಎಂದು ಹೇಳಿದರು.
ಯಾರು ಬರದಿದ್ದರು ಟೋಲ್ ವಿರುದ್ದವಾಗಿ ಹೋರಾಡಲು ನಾನು ತೀರ್ಮಾನಿಸಿದ್ದೇನೆ, ಎಲ್ಲಾ ನನ್ನ ಜನರು ಹಾಗೂ ಸಮಾಜದ ಗಣ್ಯರು ಬಂದು ನನ್ನ ಜೊತೆ ಕೈಜೋಡಿಸಿ ಎಂದರು.