19.8 C
Bengaluru
Monday, December 23, 2024

ಜೈಲಿನಲ್ಲಿರುವ ಅಪರಾಧಿಗಳು ತಮ್ಮ ಆಸ್ತಿ ನೋಂದಣಿ ಮಾಡಿಸುವುದು ಹೇಗೆ ?

ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಜನಸಂಖ್ಯೆ ವಿಪರೀತಿಯಾಗಿ ಏರಿಕೆಯಾಗುತ್ತಿದ್ದು ಅದರಂತೆಯೇ ವಿವಿಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳಲ್ಲಿ ಜೈಲು ಪಾಲಗುವವರ ಸಂಖ್ಯೆ ಅಧಿಕವಾಗುತ್ತಲೇ ಹೋಗುತ್ತಿದೆ. ಎಲ್ಲರಂತೆ ಜೈಲಿನಲ್ಲಿರುವವರಿಗೂ ಸಹ ಬಂಧು ಬಳಗ, ಸಂಸಾರಗಳು, ಅಣ್ಣ ತಮ್ಮಂದಿರಿದ್ದು ಅವರಿಗೂ ಸಹ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಸ್ವತ್ತುಗಳು ಇರಬಹುದು ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೋನ್, ಮದುವೆ ವೆಚ್ಚಕ್ಕಾಗಿ ನಿವೇಶನ ಮಾರುವುದು, ನಿವೇಶನ ತೆಗೆದುಕೊಳ್ಳುವುದು, ನಿವೇಶನ ಕಟ್ಟುವುದು ಈ ರೀತಿ ಸಂದರ್ಭಗಳು ಸೃಷ್ಟಿಯಾಗುತ್ತವೆ.

ಭಾರತೀಯ ಸಂವಿಧಾನ ಮತ್ತು ಕಾನೂನಿನಲ್ಲಿ ಜೈಲಿನಲ್ಲಿರುವ ವಿಚಾರಣಾಧಿನ ಕೈದಿ ಮತ್ತು ಅಪರಾಧಿಗಳಿಗೆ ಜಮೀನು/ಆಸ್ತಿಗಳನ್ನು ತೆಗೆದುಕೊಳ್ಳಲು, ಮಾರಾಟ ಮಾಡಲು, ವಿಭಾಗ ಮಾಡಿಕೊಳ್ಳಲು, ಪವರ್ ಆಫ್ ಆಟಾರ್ನಿ ಮಾಡಲು, ಸಾಲ ತೆಗೆದುಕೊಳ್ಳಲು, ಸಾಲ ಕಟ್ಟಲು, ವಿಲ್ ಪತ್ರ ಮಾಡಲು, ಇದೇ ರೀತಿ ಯಾವುದೇ ಪತ್ರ ವ್ಯವಹಾರ ಮಾಡಲು ನಿರ್ಬಂಧಗಳು ಇರುವುದಿಲ್ಲ.

ಅವರೇನಾದರು ಸ್ವತ್ತುಗಳನ್ನು ನೊಂದಣಿ ಮಾಡಿಸಬೇಕಾದರೆ ಇತ್ತಿಚಿನ ಕಾನೂನಿನಲ್ಲಿ ಮಾನ್ಯವಿರುವ ಪವರ್ ಆಫ್ ಆಟಾರ್ನಿಯನ್ನು ನೀಡಬಹುದು. ಆ ಪವರ್ ಆಫ್ ಆಟಾರ್ನಿಗೆ ಸೂಕ್ತ ಸ್ಟಾಂಪ್ ಸುಂಕ ಕಟ್ಟಿರುವ ದಸ್ತಾವೇಜನ್ನು ರೆಡಿ ಮಾಡಿ ಭಾರತ ಸರ್ಕಾರದಿಂದ ಪರವಾನಗಿ ಪಡೆದ ನೋಟರಿಯವರನ್ನು ಜೈಲಿಗೆ ಕರೆಸಿಕೊಂಡು ಪವರ್ ಆಫ್ ಆಟಾರ್ನಿಯನ್ನು ಅವರ ಸಮಕ್ಷಮ ಸಹಿ ಮಾಡಿ ಕೊಡಬಹುದಾಗಿದೆ. ಈ ಕೆಲಸ ಜೈಲು ಅಧಿಕಾರಿಯವರ ಸಮಕ್ಷಮ ನಡೆಯಬೇಕು.

ಒಂದು ವೇಳೆ ಪವರ್ ಆಫ್ ಅಟಾರ್ನಿ ಅಥವಾ ಬೇರೆ ಯಾವುದೇ ರೀತಿಯ ದಾಖಲಾತಿಗಳನ್ನು ನೊಂದಣಿ ಮಾಡಬೇಕಾದರೆ ಉಪ ನೋಂದಾಣಾಧಿಕಾರಿಗಳಿಗೆ ಸಂಬಂಧಪಟ್ಟ ಜೈಲಿನಲ್ಲಿರುವವರು ವಕೀಲರ ಮುಖೇನ ಅಥಾವಾ ಅವರಿಗೆ ನಂಬಿಕೆ ಇರುವುವವರ ಮುಖೇನ ಜೈಲು ಅಧಿಕಾರಿಯವರ ಅನುಮತಿಯೊಡನೆ ಉಪನೊಂಧಾಣಾಧಿಕಾರಿಗಳಿಗೆ ಜೈಲಿಗೆ ಬಂದು ಖಾಸಗಿ ಹಾಜರಾತಿ ಮುಕೇನ ಪತ್ರವನ್ನು ನೊಂದಣಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಬಹುದು.

ಅರ್ಜಿಸಲ್ಲಿಸಿದ ನಂತರ ಉಪನೊಂಧಾಣಾಧಿಕಾರಿಯವರು 1000 ರೂ. ಶುಲ್ಕ ಪಡೆದು ಸಮಯ ನಿಗದಿ ಪಡಿಸಿ ಜೈಲಿಗೆ ಹೋಗಿ ಸಂಬಂಧ ಪಟ್ಟ ಪಾರ್ಟಿಗೆ ವಿಚಾರಣೆ ಮಾಡಿ ನೋಂದಣಿ ಕಾಯ್ದೆಯಲ್ಲಿ ಹೇಳಿರುವ ಪ್ರಕ್ರಿಯೆಯನ್ನು ಮಾಡಿ ಆ ದಸ್ತಾವೇಜನ್ನು ಸಂಬಂಧ ಪಟ್ಟ ಪಾರ್ಟಿಗಳಿಗೆ ಹಿಂದಿರುಗಿಸಬಹುದು.

Related News

spot_img

Revenue Alerts

spot_img

News

spot_img