* ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸಾ ಹಕ್ಕಿನ ಮೂಲಕ ಪಡೆಯಬಹುದು:-
ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಪತ್ರ, ಪಂಚಾಯಿತಿ ಪಾರಿಕತ್ತು, ನೋಂದಣಿ ಇಲ್ಲದ ವಿಭಾಗ ಪತ್ರಗಳು, ಮಾತಿನ ಮೂಲಕ ಮಾಡಿಕೊಂಡ ವಿಭಾಗ ಪತ್ರಗಳು(ಇವು ಇತ್ತೀಚಿನ ಕಾಲಘಟ್ಟದಲ್ಲಿ ನಂಬಲು ಅನರ್ಹವಾಗಿದ್ದು ಚಾಲ್ತಿ ಕಡಿಮೆ ಇರುತ್ತದೆ) ಈ ರೀತಿ ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸಾ ಹಕ್ಕಿನ ಮೂಲಕ ಪಡೆಯಬಹುದಾಗಿದೆ. ಇದು ನಿರ್ದಿಷ್ಟ ವರ್ಗಾವಣಾ ವಿಧಾನವಾಗಿದೆ.
* ಮರಣ ಶಾಸನ ಪತ್ರಗಳ ಮೂಲಕ ಪಡೆಯಬಹುದು:-
ಮರಣ ಶಾಸನ ಮಾಡಿದ ವ್ಯಕ್ತಿಯು ನಿಧನದ ನಂತರ ಮರಣ ಪ್ರಮಾಣ ಪತ್ರ ನೀಡಿ ಬರೆಸಿಕೊಂಡವರು ಮಾಲೀಕತ್ವವನ್ನು ಪಡೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಮರಣ ಶಾಸನಗಳ ಖಾತ್ರಿಪಡಿಸಲು ಸಂಬಂಧಪಟ್ಟ ನ್ಯಾಯಾಲಯದಿಂದ ಪ್ರೊಬೇಟ್ ಮಾಡಿಸಲು ಸಹಾ ಕೆಲವು ಕಂದಾಯಾಧೀಕಾರಿಗಳು ಕೇಳುವುದುಂಟು,ಪ್ರೊಬೇಟ್ ಎಂದರೆ ಮರಣಪತ್ರ ಬರೆದ ವಾರಸುದಾರರಿಂದ ಖಾತ್ರಿ ಪಡಿಸುವ ಒಂದು ನ್ಯಾಯಾದಾನದ ಕ್ರಮ, ಇದು ನಿರ್ದಿಷ್ಟ ವರ್ಗಾವಣಾ ವಿಧಾನವಾಗಿದೆ.
* ಸ್ವಯಾರ್ಜನೆ ಮೂಲಕ, ಖರೀದಿ ಇತ್ಯಾದಿ ರೀತಿಯಲ್ಲಿ ಪಡೆಯಬಹುದು:-
ಕ್ರಯ ಪತ್ರ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾವಣಿಯಾದ ತಕ್ಷಣ ಬರೆಸಿಕೊಂಡವರು ವಾರಸುದಾರರಾಗುತ್ತಾರೆ, ಇದು ಸಂಪೂರ್ಣ ವರ್ಗಾವಣಾ ವಿಧಾನವಾಗಿದೆ. ಆದ್ದರಿಂದ ವಾರುಸು ತನವು ಸಂಪೂರ್ಣ ಅಥವ ಶುದ್ಧವಾಗಿರುತ್ತದೆ.
* ದಾನ, ಟ್ರಸ್ಟ್,ವ್ಯವಸ್ಥಾಪತ್ರಗಳ ಮೂಲಕ ಪಡೆಯಬಹುದು:-
ಇದು ಸಹ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾವಣಿಯಾದ ತಕ್ಷಣ ಬರೆಸಿಕೊಂಡವರು ವಾರಸುದಾರರಾಗುತ್ತಾರೆ,
ದಾನ ಪತ್ರ ಇದು ಸಂಪೂರ್ಣ ವರ್ಗಾವಣಾ ವಿಧಾನವಾಗಿದೆ. ಆದ್ದರಿಂದ ವಾರುಸು ತನವು ಸಂಪೂರ್ಣ ಅಥವ ಶುದ್ಧವಾಗಿರುತ್ತದೆ.
ಟ್ರಸ್ಟ್,ವ್ಯವಸ್ಥಾಪತ್ರಗಳ ಇದು ಸಹ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾವಣಿಯಾದ ತಕ್ಷಣ ಬರೆಸಿಕೊಂಡವರು ವಾರಸುದಾರರಾಗುತ್ತಾರೆ. ಇದು ನಿರ್ದಿಷ್ಟ ವರ್ಗಾವಣಾ ವಿಧಾನವಾಗಿದೆ.
* ಸರ್ಕಾರದಿಂದ ಅನುದಾನ, ಇನಾಮು ಮೂಲಕ ಪಡೆಯಬಹುದು:-
ಇದು ಸರ್ಕಾರದ ಆದೇಶವಾದ ನಂತರ ಅಥವಾ ಸರ್ಕಾರದ ಆದೇಶವಾದ ನಂತರ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾವಣಿಯಾದ ತಕ್ಷಣ ಬರೆಸಿಕೊಂಡವರು ವಾರಸುದಾರರಾಗುತ್ತಾರೆ,
ಇದು ನಿರ್ದಿಷ್ಟ ವರ್ಗಾವಣಾ ವಿಧಾನವಾಗಿದೆ.
* ಕೋರ್ಟ್ ಡಿಕ್ರಿ ಮೂಲಕ ಪಡೆಯಬಹುದು:-
ನ್ಯಾಯಾಲಯ ಅಥವಾ ಅರೆ ನ್ಯಾಯಿಕ ಪ್ರಾಧಿಕಾರಗಳು ಆದೇಶವಾದ ನಂತರ ಅಥವಾ ಈ ಆದೇಶಗಳು ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾವಣಿಯಾದ ತಕ್ಷಣ ಬರೆಸಿಕೊಂಡವರು ವಾರಸುದಾರರಾಗುತ್ತಾರೆ.
ಇದು ನಿರ್ದಿಷ್ಟ ವರ್ಗಾವಣಾ ವಿಧಾನವಾಗಿದೆ.
ಯಾವುದೇ ಒಂದು ಸ್ಥಿರ ಸ್ವತ್ತಿಗೆ ಹಕ್ಕು , ಮಾಲೀಕತ್ವ, ಬಾದ್ಯತೆ ಹಾಗೂ ಹಿತಾಸಕ್ತಿಯನ್ನು ಖಾತ್ರಿ ಪಡಿಸುವ ಅಧಿಕಾರವು ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ.
ಈ ಮೇಲ್ಕಂಡ ವಿಧಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ಥಿರಾಸ್ತಿಯ ಮಾಲೀಕತ್ವವನ್ನು ಪಡೆಯಬಹುದಾಗಿದೆ. ಅಂದರೆ ಆಸ್ತಿಯ ಮಾಲೀಕತ್ವವನ್ನು ಎರಡು ವಿಧದಲ್ಲಿ ಪಡೆಯುತ್ತಾರೆ
* ಜನರು ತಮ್ಮ ತಮ್ಮಲ್ಲಿ ಮಾಡಿಕೊಂಡ ವ್ಯವಹಾರಗಳಿಂದಾಗಿ ಪಡೆಯಬಹುದು.
ಉದಾಹರಣೆಗೆ:- ಖರೀದಿ, ದಾನ ಇತ್ಯಾದಿ ವ್ಯವಹಾರಗಳ ಮೂಲಕ
* ಕಾನೂನಿನ ನಡವಳಿ ಮೂಲಕ.
ಉದಾಹರಣೆಗೆ:- ವಾರಸಾ,ಕೋರ್ಟ್ ಡಿಕ್ರಿ ಇತ್ಯಾದಿ ಮೂಲಕ