28.2 C
Bengaluru
Wednesday, July 3, 2024

ವಸತಿ ಬೆಲೆ ಏರಿಕೆ: ಮುಂಬೈ 19ನೇ ಸ್ಥಾನದಲ್ಲಿ, ಬೆಂಗಳೂರಿಗೆ 22ನೇ ಸ್ಥಾನ

ಬೆಂಗಳೂರು;ಭಾರತದ ಪ್ರಮುಖ ನಗರಗಳಲ್ಲಿ(City) ಕಟ್ಟಿರುವ ಮನೆಗಳಿಗೆ ಭಾರೀ ಬೇಡಿಕೆಯಿದೆ. ಜಾಗತಿಕ ಸೂಚ್ಯಂಕದಲ್ಲಿ(In the global index) ಶೇಕಡಾವಾರು ಹೆಚ್ಚಳದ ವಿಷಯದಲ್ಲಿ ಮುಂಬೈ ಅತ್ಯುನ್ನತ ಶ್ರೇಣಿಯ ಭಾರತೀಯ ನಗರವಾಗಿದೆ. ರಿಯಲ್ ಎಸ್ಟೇಟ್(Realestate) ಸಲಹಾ ಸಂಸ್ಥೆಯ ವರದಿಯ ಪ್ರಕಾರ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಸತಿ ಬೆಲೆ ಏರಿಕೆ ಜಾಗತಿಕ ಸೂಚ್ಯಂಕದಲ್ಲಿ ಮುಂಬೈ 19ನೇ ಬೆಂಗಳೂರು 22ನೇ ಸ್ಥಾನದಲ್ಲಿವೆ. 2023ರ ಎರಡನೇ ತ್ರೈಮಾಸಿಕದಲ್ಲಿ ನಗರವು ವರ್ಷಕ್ಕೆ 6%ದಷ್ಟು ವಸತಿ ಬೆಲೆಯನ್ನು ಹೆಚ್ಚಿಸಲಾಗಿದ್ದುಅದರಲ್ಲೂ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ತರಹದ ನಗರಗಳಲ್ಲಿ ವಸತಿಗಳ ಬೆಲೆ ಗಣನೀಯ ಹೆಚ್ಚಳವಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಜೂನ್ ವರೆಗಿನ ಅವಧಿಯಲ್ಲಿ ವಸತಿ ಬೆಲೆ ಏರಿಕೆಯ ಜಾಗತಿಕ ಸೂಚ್ಯಂಕದಲ್ಲಿ ಬೆಂಗಳೂರು 22ನೇ ಸ್ಥಾನ ಗಿಟ್ಟಿಸಿಕೊಂಡಿದೆ. ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯ ವರದಿಯ ಪ್ರಕಾರ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್‌ನಿಂದ ಜೂನ್‌ವರೆಗಿನ ಜಾಗತಿಕ ಸೂಚ್ಯಂಕದಲ್ಲಿ ವಸತಿ ಬೆಲೆ ಏರಿಕೆಯನ್ನು ಅಳೆಯುವ ಜಾಗತಿಕ ಸೂಚ್ಯಂಕದಲ್ಲಿ ಭಾರತದ ನಗರಗಳಾದ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 95 ಮತ್ತು 77 ನೇ ಸ್ಥಾನದಿಂದ 19 ಮತ್ತು 22 ನೇ ಸ್ಥಾನಗಳಿಗೆ ಜಿಗಿದಿವೆ.ಸಂಸ್ಥೆಯು ‘ಗ್ಲೋಬಲ್ ರೆಸಿಡೆನ್ಶಿಯಲ್ ಸಿಟೀಸ್ ಇಂಡೆಕ್ಸ್ ಕ್ಯೂ2 2023’ ಎಂಬ ವರದಿಯಲ್ಲಿ ವಿಶ್ವದ ಹಲವಾರು ನಗರಗಳಲ್ಲಿ ವಸತಿ ಬೆಲೆಗಳಲ್ಲಿನ ಹಣದುಬ್ಬರವನ್ನು ವಿಶ್ಲೇಷಿಸಿದೆ. ಕ್ಯೂ2 ರಲ್ಲಿ ಸೂಚ್ಯಂಕದಲ್ಲಿ ಮುಂಬೈ ನಂತರ ಕರ್ನಾಟಕದ ರಾಜಧಾನಿ ಎರಡನೇ ಅತಿ ಹೆಚ್ಚು ಶ್ರೇಯಾಂಕದ ಭಾರತೀಯ ನಗರವಾಗಿದೆ ಎಂದು ಅದು ಗಮನಿಸಿದೆ,

ವಸತಿ ಬೆಲೆ ಹೆಚ್ಚಳ ಅಗ್ರಗಣ್ಯ ಭಾರತೀಯ ನಗರಗಳು ಹಾಗೂ ಜಾಗತಿಕ ಶ್ರೇಯಾಂಕ

*ಮುಂಬೈ: ಶೇ. 6ರಷ್ಟು ಬೆಲೆ ಹೆಚ್ಚಳ- ಜಾಗತಿಕ ಪಟ್ಟಿಯಲ್ಲಿ 19ನೇ ಸ್ಥಾನ

*ಬೆಂಗಳೂರು: ಶೇ. 5.3ರಷ್ಟು ಬೆಲೆ ಹೆಚ್ಚಳ- 22 ನೇ ಸ್ಥಾನ

*ನವದೆಹಲಿ: ಶೇ. 4.5 ರಷ್ಟು ಬೆಲೆ ಹೆಚ್ಚಳ- 25ನೇ ಸ್ಥಾನ

*ಚೆನ್ನೈ: ಶೇ. 2.5ರಷ್ಟು ಬೆಲೆ ಹೆಚ್ಚಳ- 39ನೇ ಸ್ಥಾನ

*ಕೋಲ್ಕತಾ: ಶೇ. 2.5ರಷ್ಟು ಬೆಲೆ ಹೆಚ್ಚಳ- 40ನೇ ಸ್ಥಾನ

 

Related News

spot_img

Revenue Alerts

spot_img

News

spot_img