18.5 C
Bengaluru
Friday, November 22, 2024

ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವ ಗೃಹಿಣಿಯರಿಗೂ ಸಿಗುತ್ತದೆ ಕ್ರೆಡಿಟ್ ಕಾರ್ಡ್

ಬೆಂಗಳೂರು, ಮೇ. 24 : ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ಈಗಾಗಲೇ ನಮ್ಮ ರೆವೆನ್ಯೂಫ್ಯಾಕ್ಟ್ಸ್ ವೆಬ್ ಸೈಟ್ ನಲ್ಲಿ ಹಲವು ಮಾಹಿತಿಗಳನ್ನು ನೀಡಿದ್ದೇವೆ. ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವುದು ಹೇಗೆ..? ಕ್ರಡಿಟ್ ಕಾರ್ಡ್ ಅನ್ನು ಹೇಗೆ ಬಳಸಬೇಕು..? ಕ್ರೆಡಿಟ್ ಕಾರ್ಡ್ ನಲ್ಲಿ ಬಡ್ಡಿ ಎಷ್ಟು ಎಂಬ ಬಗ್ಗೆ ಮಾಹಿತಿಯನ್ನು ಕೂಡ ನೀಡಲಾಗಿದೆ. ಇನ್ನು ಇಷ್ಟು ದಿನ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬೇಕು ಎಂದರೆ, ಅವರಿಗೆ ಸಂಬಳ ಬರಬೇಕು. ಯಾವುದಾದರೂ ನೌಕರಿಯನ್ನು ಹೊಂದಿರಬೇಕು ಎಂದು ತಿಳಿದುಕೊಂಡಿದ್ದರು.

ಆದರೆ, ಕೆಲಸವಿಲ್ಲದವರೂ ಅಥವಾ ಬಿಸಿನೆಸ್ ಮಾಡುತ್ತಿರುವವರು ಕೂಡ ಕ್ರೆಡಿಟ್ ಕಾರ್ಡ್ ಅನ್ನು ಅರಾಮವಾಗಿ ಪಡೆಯಬಹುದು. ಇದರ ಬಗ್ಗೆ ಹೆಚ್ಚಿನವರಲ್ಲಿ ಮಾಹಿತಿ ಇರುವುದಿಲ್ಲ. ಹಾಗಾಗಿ ನಾವಿಂದು ಈ ಲೇಖನದಲ್ಲಿ ಕೆಲಸ ಇಲ್ಲದವರೂ ಹಾಗೂ ಗೃಹಿಣಿಯರು ಕೂಡ ಹೇಗೆ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು..? ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಿದ್ದೇವೆ. ನೀವೂ ಓದಿ ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ಪಡೆಯಿರಿ.

ಈಗ ನೌಕರಿಯಲ್ಲಿರುವವರಿಗೆ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಸಂಬಳ ಜಮೆ ಆಗುತ್ತದೆ. ಅವರ ವಹಿವಾಟನ್ನು ತಿಳಿದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ನೀಡಲು ಮುಂದೆ ಬರುತ್ತದೆ. ತಾವಾಗಿಯೇ ಕರೆದು ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಆದರೆ ಉದ್ಯಮಿಗಳು ಹಾಗೂ ಗೃಹಿಣಿಯರು ತಾವೇ ಬ್ಯಾಂಕ್ ಗೆ ಹೋಗಿ ಕ್ರೆಡಿಟ್ ಕಾರ್ಡ್ ಗಾಗಿ ಅಪ್ಲೈ ಮಾಡಬೇಕಾಗುತ್ತದೆ. ಉದ್ಯಮಿಗಳು, ತಾವು ತೆರಿಗೆ ಕಟ್ಟುವ ಬಿಲ್, ತಮ್ಮ ಬ್ಯಾಂಕ್ ಖಾತೆಯ ವಿವರ, ಅವರ ಹಣದ ವಹಿವಾಟು, ವ್ಯಾಪಾರಗಳ ಬಗ್ಗೆ ದಾಖಲೆಗಳ ಸಮೇತ ಬ್ಯಾಂಕ್ ಗೆ ತೆರಳಬೇಕು.

ಉದ್ಯಮಿಗಳು ಅಲ್ಲಿ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಕೊಟ್ಟರೆ, ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಇನ್ನು ಗೃಹಿಣಿಯರಿಗೆ ಹಣದ ಮೂಲವೇ ಪತಿ. ಅದೂ ಕೂಡ ಸಂಸಾರವನ್ನು ತೂಗಲು ಬಳಸಲಾಗುತ್ತದೆ. ಇನ್ನು ಹೇಗೆ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವುದು ಅಲ್ವಾ.. ಗೃಹಿಣಿಯರು ತಮ್ಮ ಬ್ಯಾಂಕ್ ಖಾತೆಯಲ್ಲಿ ಒಂದಿಷ್ಟು ಹಣವನ್ನು ಎಫ್ ಡಿ ಮಾಡಿದರೆ ಸಾಕು ಬ್ಯಾಂಕ್ ನವರು ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತಾರೆ. ಯಾಕೆಂದರೆ, ಬ್ಯಾಂಕ್ ನವರಿಗೆ ನಿಮ್ಮ ಎಫ್ ಡಿ ಹಣವೇ ಗ್ಯಾರೆಂಟಿ ಆಗಿರುತ್ತದೆ.

Related News

spot_img

Revenue Alerts

spot_img

News

spot_img