21.2 C
Bengaluru
Monday, July 8, 2024

ಮನಿಪ್ಲಾಂಟ್ ಮನೆಯ ಅಲಂಕಾರವನ್ನು ಹೆಚ್ಚಿಸುವುದರ ಜೊತೆಗೆ ಸಂಪತ್ತನ್ನೂ ವೃದ್ಧಿಸುವ ಈ ಗಿಡವನ್ನು ಎಲ್ಲಿಡಬೇಕು ಗೊತ್ತೇ..?

ಬೆಂಗಳೂರು, ಡಿ. 12: ಮನಿಪ್ಲಾಂಟ್ ಈ ಸಸ್ಯ ಈಗ ಎಲ್ಲರಿಗೂ ಚಿರಪರಿಚಿತ. ಮನಿಪ್ಲಾಂಟ್ ಗಿಡವು ಹೆಸರೇ ಸೂಚಿಸುವಂತೆ ಮನೆಯ ಸಂಪತ್ತು ಹಾಗೂ ಅಭಿವೃದ್ಧಿಯನ್ನು ಸೂಚಿಸುತ್ತದೆ. ಮನಿಪ್ಲಾಂಟ್‌ ಗಿಡವನ್ನು ಈಗ ಕಚೇರಿ, ಮನೆಗಳಲ್ಲಿ ಎಲ್ಲರೂ ಬೆಳೆಸುತ್ತಾರೆ. ಇದರಿಂದ ಮನೆಯಲ್ಲಿ ಸಿರಿ ಹೆಚ್ಚಾಗುತ್ತದೆ ಎಂದು ಕೆಲವರು ಬೆಳೆಸಿದರೆ, ಮತ್ತೆ ಕೆಲವರು ಹಸಿರು ಬಳ್ಳಿಯ ಈ ಮನಿಪ್ಲಾಂಟ್‌ ಒಳಾಂಗಣದ ಅಂದವನ್ನೂ ಕೂಡ ಹೆಚ್ಚಿಸುತ್ತದೆ ಎಂದು ಮನೆಗೆ ತರುತ್ತಾರೆ. ಮನಿಪ್ಲಾಂಟ್ ಗಿಡವು ಮನೆಯೊಳಗಿದ್ದರೆ ಎಲ್ಲರಲ್ಲಿನ ಒತ್ತಡ, ನಿದ್ರಾಹೀನತೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಈ ಗಿಡವನ್ನು ಮನೆಯ ಹೊರಗಿಡುವುದಕ್ಕಿಂತಲೂ ಮನೆಯೊಳಗೆ ಇಡುವುದು ತುಂಬಾ ಒಳ್ಳೆಯದು.

ಮನೆಯಲ್ಲಿ ಇರುವ ಮನಿಪ್ಲಾಂಟ್‌ ಗಿಡವು ಎಷ್ಟು ಹಸಿರಾಗಿರುತ್ತದೆಯೋ ಅಷ್ಟೇಶುಭ ಎಂದು ಹೇಳುತ್ತಾರೆ. ಮನಿಪ್ಲಾಮಟ್‌ ಅನ್ನು ನಿಮ್ಮ ಮನೆಯೊಳಗಿನ ಗೋಡೆಗಳ ಮೂಲೆಗಳಲ್ಲಿ ಇಟ್ಟು ಬಳ್ಳಿಯನ್ನು ಹಬ್ಬಿಸಿದರೆ ಚೆನ್ನಾಗಿ ಕಾಣಿಸುತ್ತದೆ. ಮನೆಯ ಡೈನಿಂಗ್‌ ಟೇಬಲ್‌ ಮೇಲೆ ಚಿಕ್ಕ ಮನಿಪ್ಲಾಂಟ್‌ ಅನ್ನು ನೀರಿನ ಬಾಟಲಿಯಲ್ಲಿ ಹಾಕಿಟ್ಟರೂ ಅಲ್ಲಿನ ಅಂದವನ್ನು ಹೆಚ್ಚಿಸುತ್ತದೆ. ಅಡುಗೆ ಮನೆಯಲ್ಲಿ ಫ್ರಿಡ್ಜ್‌ ಮೇಲೆ ಅಥವಾ ಫ್ರಿಡ್ಜ್‌ ನ ಬಾಗಿಲಿಗೆ ಮ್ಯಾಗ್ನೆಟ್‌ ಬಾಟಲಿ, ಕಪ್‌ ತಂದು ಅದಕ್ಕೂ ಹಾಕಿಟ್ಟರೆ ಸುಂದರವಾಗಿರುತ್ತದೆ. ಹಾಲ್‌ ನಲ್ಲಿ ಟೀಪಾಯ್‌ ಇದ್ದರೆಅದರ ಮೇಲೆ, ರೂಮ್‌ ಬಾಗಿಲಿಗೆ, ಬೆಡ್‌ ಪಕ್ಕದಲ್ಲಿ ಬೆಡ್‌ ಲ್ಯಾಂಪ್‌ ಇದ್ದರೆ ಅದರ ಪಕ್ಕದಲ್ಲಿಟ್ಟರೂ ಆಕರ್ಷಣೀಯವಾಗಿರುತ್ತದೆ.

ಈ ಮನಿಪ್ಲಾಂಟ್‌ ಗಿಡದ ಒಂದು ಎಲೆ ಇದ್ದರೆ ಸಾಕು. ಈ ಎಲೆಯನ್ನು ನೀರಿನಲ್ಲಿ ಹಾಕಿಟ್ಟರೆ, 15 ಬೇರುಗಳು ಮೂಡಿ, ಬಳ್ಳಿ ಬೆಳೆಯಲು ಪ್ರಾರಂಬಿಸುತ್ತದೆ. ಹಾಗಾಗಿ ಮನೆಗೆ ಒಂದು ಗಿಡವನ್ನು ತಂದರೆ ಸಾಕು, ಒಂದು ಗಿಡವನ್ನೇ ಕತ್ತರಿಸಿ ಬೆಳೆಸಬಹುದು. ಇನ್ನು ಮನೆಯಲ್ಲಿ ಮನಿಪ್ಲಾಂಟ್‌ ಇದ್ದರೆ, ಅದರ ಎಲೆಗಳು ಬಾಡದಂತೆ ನೋಡಿಕೊಳ್ಳಿ. ಹಳೆಯ ಎಲೆ ಒಣಗಿದಂತೆ ಆಗುತ್ತಿದ್ದಂತೆ ಅದನ್ನು ಕಿತ್ತು ಬಿಸಾಡಿ. ಇದರಿಂದ ಮನೆಯಲ್ಲಿ ನಕರಾತ್ಮಕ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಹಸಿರಾಗಿರುವ ಎಲೆಗಳನ್ನು ಬಿಟ್ಟು, ಬಿಳಿಯಾಗಿದ್ದರೆ, ಹಳದಿ ಬಣ್ಣಕ್ಕೆ ತಿರುಗಿದರೆ, ಆ ಎಲೆಯನ್ನು ಹೆಚ್ಚು ಸಮಯ ಹಾಗೆ ಬಿಡಬೇಡಿ.

ಇನ್ನು ಮನಿಪ್ಲಾಂಟ್‌ ನಲ್ಲಿ ವಿವಿಧ ಬಗೆಯ ಗಿಡಗಳಿವೆ. ಈ ಸಸ್ಯ, ಹಚ್ಚ ಹಚಿರು, ತಿಳಿ ಹಸಿರು, ಬಿಳಿ ಮಚ್ಚೆ ಅಥವಾ ಗೆರೆಗಳುಳ್ಳ ಮನಿಪ್ಲಾಂಟ್‌ ಕೂಡ ಸಿಗುತ್ತವೆ. ತರುವಾಗಲೇ ನಿಮಗೆ ಎಂತಹ ಎಲೆಗಳಿರುವ ಗಿಡ ಇಷ್ಟವಾಗುತ್ತದೋ ಅದನ್ನು ನೋಡಿ ತನ್ನಿ. ಮನಿಪ್ಲಾಂಟ್‌ ಗಿಡವು ಸಮೃದ್ಧೀಯ ಸಂಕೇತವಾಗಿರುವುದರಿಂದ ಒಣಗದಂತೆ ಎಚ್ಚರ ವಹಿಸಿ. ಗಾಜಿನ ಬಾಟಲಿ, ಸೆರಾಮಿಕ್‌ ಪಾಟ್‌ ಗಳಲ್ಲಿ ಹಾಕಿಡಿ. ಇದು ಬಳ್ಳಿಯಾಗಿರುವುದರಿಂದ ಮೇಲಕ್ಕೆ ಹಬ್ಬುವಂತೆ ಸಪೋರ್ಟ್‌ ಕೊಡಿ. ಇನ್ನು ಮನಿಪ್ಲಾಂಟ್‌ ಅನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡುವುದರಿಂದ ಅಭಿವೃದ್ಧಿ ಕಾಣುತ್ತೀರಿ ಎನ್ನಲಾಗಿದೆ.

 

ಈಶಾನ್ಯ ದಿಕ್ಕಿನಲ್ಲಿ ಹೊರತು ಪಡಿಸಿ ಮನೆಯ ಯಾವ ಭಾಗದಲ್ಲಿ ಬೇಕಾದರೂ ಈ ಗಿಡವನ್ನು ಇಡಬಹುದು. ಆಗ್ನೇಯ ದಿಕ್ಕಿನಲ್ಲಿ ಗಣೇಶ ಇರುವುದರಿಂದ ಗಿಡದ ಬೆಳವಣಿಯಮತೆಯೇ ಮನೆಯೂ ಸಮೃದ್ಧಿ ಹೊಂದುತ್ತದೆ ಎಂದು ಹೇಳಲಾಗಿದೆ. ಮನಿಪ್ಲಾಮಟ್‌ ಗಿಡಕ್ಕೆ ನಿತ್ಯ ನೀರು ಹಾಕುವುದು ಬೇಡ. ಇದನ್ನು ನೀವು ನೀರಿನಲ್ಲಿ ಬೆಳೆಸುವುದಾದರೆ 15 ದಿನಕ್ಕೊಮ್ಮೆ ನೀರನ್ನು ಬದಲಿಸಿ. ಮಣ್ಣಿನ ಪಾಟ್‌ ನಲ್ಲಿ ಇಡುವುದಾದರೆ, 2-3 ದಿನಕ್ಕೊಮ್ಮೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ. ಇಲ್ಲವೇ, ಸ್ಪ್ರೇ ಮಡಿದರೂ ಸಾಕು. ಇದಕ್ಕೆ ಹೆಚ್ಚು ನೀರಿನ ಅಗತ್ಯವಿರುವುದಿಲ್ಲ. ಮನಿಪ್ಲಾಮಟ್‌ ಅನ್ನು ಮನೆಗೆ ತಂದು ನಿಮಗೆ ಬೇಕಾದ ಹಾಗೆ ಮನೆಯನ್ನು ಅಂದಗೊಳಿಸಿ ಆನಂದಿಸಿ.

Related News

spot_img

Revenue Alerts

spot_img

News

spot_img