21.1 C
Bengaluru
Monday, July 8, 2024

Home Decor Tips: ಮನೆಗೆ ತಾಜಾತನ ತರುವ ಹಸಿರು ಗೋಡೆ!

ಹೊಸದಾದ ಗೋಡೆಯ ಬಣ್ಣವು ನಿಮ್ಮ ಮನೆಯನ್ನು ವಿಶೇಷವಾಗಿ ಪರಿವರ್ತಿಸಬಲ್ಲದು. ಮನೆಗೆ ಉಲ್ಲಾಸಕರ ವಾತಾವರಣ ತುಂಬಲು ಹಸಿರು ಬಣ್ಣಗಳು ಬಹಳ ಸೂಕ್ತವಾಗಿರಲಿವೆ. ಹಸಿರು ಬಣ್ಣದ ಸರಿಯಾದ ಶೇಡ್‌ಗಳನ್ನು ಸಂಯೋಜನೆಯಿಂದ ನಿಮ್ಮ ಮನೆಯ ಒಳಾಂಗಣಕ್ಕೆ ಒಂದು ಬಗೆಯ ಸಮಾಧಾನಕರ ನೋಟವನ್ನು ನೀಡುತ್ತದೆ ಮತ್ತು ಕೋಣೆಗಳಲ್ಲಿ ತಾಜಾತನದ ಅನುಭವ ಉಂಟಾಗುತ್ತದೆ. ಮುಂದಿನ ಬಾರಿ ಮನೆ ನವೀಕರಣದ ಸಂದರ್ಭದಲ್ಲಿ ಹಸಿರು ಬಣ್ಣಗಳ ಆಯ್ಕೆ ಬಗೆಗೆ ಇಲ್ಲಿವೆ ಒಂದಷ್ಟು ಹೊಳಹುಗಳು.

ಲಿವಿಂಗ್ ರೂಮ್‌ಗಾಗಿ ಮಿಂಟ್ ಗ್ರೀನ್ ಗೋಡೆ ಬಣ್ಣ
ಲಿವಿಂಗ್‌ ರೂಮ್‌ನ ಹಿತವಾದ ನೋಟಕ್ಕಾಗಿ ನಾಜೂಕಾದ ಮಿಂಟ್‌ ಗ್ರೀನ್ ಬಣ್ಣವನ್ನು ಆಯ್ದುಕೊಳ್ಳಿ. ಅದಕ್ಕೆ ತದ್ವಿರುದ್ಧ ಬಣ್ಣಗಳ ಕಣ್ಣು ಕೋರೈಸುವಂತಹ ಕಲಾಕೃತಿಗಳನ್ನು ಗೋಡೆಯ ಮೇಲೆ ಬಳಸಿರಿ.

ಊಟದ ಕೋಣೆಗಾಗಿ ಪಾಚಿ ಹಸಿರು:
ತೆರೆದ ಕೋಣೆಗಳಿಗಾಗಿ ಹಸಿರು ಬಣ್ಣದ ವಾರ್ಮರ್‌ ಶೇಡ್‌ಗಳು ಹೆಚ್ಚು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅಡುಗೆ ಮತ್ತು ಊಟದ ಕೋಣೆಗೆ ತಿಳಿ ಹಸಿರು ಬಣ್ಣವನ್ನು ಬಳಸಿರಿ. ಬ್ಯಾಕ್‌ಸ್ಪ್ಲ್ಯಾಶ್ನಲ್ಲಿ ಮೊರಾಕ್ಕನ್‌ ಕ್ಲೇ ಟೈಲ್ಸ್‌ ಆಯ್ಕೆ ಮಾಡಿಕೊಂಡರೆ ಅದು ಪಾಚಿ ಹಸಿರು ಬಣ್ಣಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ ಮತ್ತು ಒಂದು ವಿಶ್ರಾಂತ ಭಾವವನ್ನು ಮೂಡಿಸುತ್ತದೆ. ಅದಕ್ಕೆ ಹೊಂದಿಕೆ ಆಗುವಂತಹ ಸ್ಟೂಲ್‌ಗಳನ್ನು ಜೋಡಿಸಿ.

ಲಿವಿಂಗ್‌ ರೂಮ್‌ ವಿಚಾರದಲ್ಲೂ ತಿಳಿ ಪಾಚಿ ಬಣ್ಣ ಅತ್ಯುತ್ತಮ ಆಯ್ಕೆಯೇ ಹೌದು. ಅದನ್ನೇ ಡೈನಿಂಗ್‌ ಕೋಣೆಗೂ ವಿಸ್ತರಿಸಬಹುದು. ಕಂದು ಅಥವಾ ಬಂಗಾರದ ಬಣ್ಣ ಅದರ ಅಂದವನ್ನು ನೂರ್ಮಡಿಗೊಳಿಸುತ್ತದೆ.

ಶಯನ ಗೃಹಕ್ಕೆ ಸೇಜ್‌ ಗ್ರೀನ್:
ಮಲಗುವ ಕೋಣೆಗಳ ಗೋಡೆಗಳಿಗೆ ಸೇಜ್‌ ಗ್ರೀನ್ ಥೀಮ್ ಆಯ್ಕೆ ಮಾಡಿಕೊಳ್ಳಿ. ಇದು ಹಸಿರು ಬಣ್ಣದ ಬೂದು-ಹಸಿರು ಛಾಯೆ. ಈ ತಿಳಿ ಛಾಯೆಗಳು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ಪರಿಪೂರ್ಣವಾಗಿವೆ. ಬಿಳಿ ಹಾಸಿಗೆ ಮತ್ತು ತಟಸ್ಥ ಬಣ್ಣದ ಸಂಯೋಜನೆಯು ಹಸಿರು ಬಣ್ಣದ ಗೋಡೆಯ ವಿನ್ಯಾಸದೊಂದಿಗೆ ಸರಿಯಾದ ಎದ್ದುಕಾಣುತ್ತದೆ.

ಒಂದು ವೇಳೆ ನಿಮಗೆ ಲಿವಿಂಗ್‌ ರೂಮ್‌ಗೆ ಹಸಿರು ಬಣ್ಣ ಇಷ್ಟವಾಗದಿದ್ದಲ್ಲಿ, ಕೇಂದ್ರ ಭಾಗದಲ್ಲಿ ಮಾತ್ರ ಹಸಿರು ಅಗತ್ಯ ಎನಿಸಿದರೆ ಒಳಾಂಗಣವನ್ನು ಆಹಾ ಎನಿಸುವ ಟ್ರೆಂಡಿ ಮತ್ತು ಸುಂದರವಾಗಿ ವಿನ್ಯಾಸಗೊಳಿಸಿ.

ಅಡುಗೆ ಮನೆಗಾಗಿ ಪಚ್ಚೆ ಹಸಿರು:
ಆಧುನಿಕ ಅಡುಗೆ ಕೋಣೆಗಳು ಪಚ್ಚೆ ಅಥವಾ ಮರಕತ ಹಸಿರು ಬಣ್ಣದಲ್ಲಿ ಮನಮುಟ್ಟುವಂತಿರುತ್ತವೆ. ಇದರ ಜೊತೆಗೆ ಬೇಕಾದರೆ ಲೋಹ ವರ್ಣವನ್ನು ಸಂಯೋಜನೆ ಮಾಡಿದರೆ ಇನ್ನಷ್ಟು ಎದ್ದು ಕಾಣುತ್ತದೆ. ಅಂದವನ್ನು ಹೆಚ್ಚಿಸಲು ಸ್ಟೇನ್‌ಲೆಸ್‌ ಸ್ಟೀಲ್‌ ಕೌಂಟರ್‌ಟಾಪ್‌ಗಳು ಮತ್ತು ಕ್ಯಾಬಿನೆಟ್‌ಗಳನ್ನು ಅಳವಡಿಸಿ.

ಸ್ನಾನ ಗೃಹಕ್ಕೆ ಸ್ಮೋಕಿ ಗ್ರೀನ್:
ಸ್ನಾನಗೃಹ ಸೇರಿದಂತೆ ಯಾವುದೇ ಕೋಣೆಗಳಿಗಾದರೂ ತಟಸ್ಥ ಬಣ್ಣದ ಥೀಮ್‌ ಆಗಿ ಸ್ಮೋಕಿ ಗ್ರೀನ್‌ ಬಳಸಬಹುದು. ಸಣ್ಣ ಸ್ನಾನಗೃಹಗಳಿಗೆ ಈ ಬಣ್ಣ ಬಳಸಿದರೆ ಆವರಣವು ವಿಶಾಲವಾಗಿ ಕಾಣಿಸುತ್ತದೆ.

Related News

spot_img

Revenue Alerts

spot_img

News

spot_img