21.1 C
Bengaluru
Sunday, December 22, 2024

ಕೇಂದ್ರದಿಂದ ಐತಿಹಾಸಿಕ ಘೋಷಣೆ,ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ

#Historic #announcement # Centre# implementation # Citizenship #Amendment Act

ನವದೆಹಲಿ;ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯ ಕುರಿತಾಗಿ ಐತಿಹಾಸಿಕ ಘೋಷಣೆ ಮಾಡಿದೆ.ಇವುಗಳಲ್ಲಿ ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಆಕ್ಟ್(Citizenship Amendment Act) ಅಂದರೆ ನಾಗರಿಕ ತಿದ್ದುಪಡಿ ಮಸೂದೆಗೆ (CAA) ಮಾ. 11ರಂದು ಜಾರಿಯಾಗಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ & ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ತ್ವರಿತವಾಗಿ ಪತ್ತೆಹಚ್ಚಲು ದಾರಿ ಮಾಡಿಕೊಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನದ ನಿಯಮಗಳನ್ನು ಗೃಹ ಸಚಿವಾಲಯ (MHA) ಅಧಿಕೃತವಾಗಿ ಪ್ರಕಟಿಸಿದೆ.ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಬುಡಕಟ್ಟು ಪ್ರದೇಶದ ಜನರಿಗೆ ಸಿಎಎ ಅನ್ವಯವಾಗುವುದಿಲ್ಲ. ಅಂದರೆ, ಇವರು ಭಾರತೀಯರು ಎಂದೇ ಪರಿಗಣಿಸಲಾಗುತ್ತದೆ.ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳ OR ಅಲ್ಪಸಂಖ್ಯಾತರಾದ ಹಿಂದೂ, ಜೈನ, ಸಿಖ್, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಧರ್ಮದವರಿಗೆ,ಬೇರೆಯವರು ನಾಗರಿಕತ್ವಕ್ಕೆ ಅರ್ಜಿ ಹಾಕಲು, ಈ ದೇಶದಲ್ಲಿ ಕನಿಷ್ಠ 11 ವರ್ಷ ವಾಸ ಮಾಡಿರ ಬೇಕು. ಆದರೆ ಈ ಕಾಯ್ದೆ ಅಡಿಯಲ್ಲಿ ಅರ್ಜಿ ಹಾಕಲು 5 ವರ್ಷ ವಾಸ ಮಾಡಿದ್ದರೆ ಸಾಕು.ಇದಕ್ಕಾಗಿ ವಿಶೇಷವಾದ ವೆಬ್ ಪೋರ್ಟಲ್ ತಯಾರಿಸಲಿದ್ದು, ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಸಿಎಎ(CAA) ಎಂದರೇನು?

ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ & ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆ (CAA) ಉದ್ದೇಶವಾಗಿದೆ. NDA ಸರ್ಕಾರವು 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು 2019ರಲ್ಲಿ ಕಾನೂನಾಗಿ ಮಾಡಿತು. ಧರ್ಮದ ಆಧಾರದಲ್ಲಿ ಈ ಕಾಯ್ದೆ ತರಲಾಗುತ್ತಿದೆ ಎಂದು ಆರೋಪಿಸಿ, ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಹಾಗಾಗಿ ಇದರ ಜಾರಿಗೆಗೆ ತಡೆಹಿಡಿಯಲಾಗಿತ್ತು. ಇದೀಗ ಚುನಾವಣೆಗೂ ಮುನ್ನವೇ ಕೇಂದ್ರ ಅಧಿಸೂಚನೆ ಪ್ರಕಟಿಸಿದೆ,11 ಡಿಸೆಂಬರ್ 2019 ರಂದು, ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್ತು ಅಂಗೀಕಾರ ನೀಡಿದೆ. ಆದರೆ, ಆ ಕುರಿತು ಅಧಿಸೂಚನೆಯನ್ನು ಹೊರಡಿಸಿರಲಿಲ್ಲ.

Related News

spot_img

Revenue Alerts

spot_img

News

spot_img