20.2 C
Bengaluru
Thursday, December 19, 2024

High Court:ಶಿವರಾಮ ಕಾರಂತ ಬಡಾವಣೆಯಲ್ಲಿ ಸದ್ಯ ಸೈಟ್ ಹಂಚಿಕೆಗೆ ಹೈಕೋರ್ಟ್‌ ಬ್ರೇಕ್‌

#High Court # breaks # current land allocation # Shivaram Karanta Barangay

ಬೆಂಗಳೂರು;ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕೋರ್ಟ್ ಅನುಮತಿ ಇಲ್ಲದೆ ಅಧಿಸೂಚನೆ ಹೊರಡಿಸಬಾರದು ಎಂದು ಹೈಕೋರ್ಟ್(Highcourt) ವಿಭಾಗೀಯ ನ್ಯಾಯಪೀಠವು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಬಡಾವಣೆ ನಿರ್ಮಾಣದ ಕುರಿತಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆಯೂ ತಾಕೀತು ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ನ್ಯಾಯಪೀಠ ಗುರುವಾರ ಪ್ರಕರಣದ ವಿಚಾರಣ ನಡೆಸಿ ಈ ಕುರಿತಂತೆ ಆದೇಶಿಸಿತು,ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಗುರುವಾರ ಈ ಆದೇಶ ಮಾಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಅಧಿಸೂಚನೆ ಹೊರಡಿಸದಂತೆ ಆದೇಶಿಸಿದೆಯಾದರೂ ಬಡಾವಣೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದೆ.ಬಿಡಿಎ(BDA) ಪರ ಹಾಜರಿದ್ದ ನ್ಯಾಯವಾದಿ ಶಿವಪ್ರಸಾದ್‌ ಶಾಂತನಗೌಡರ್‌, ಸುಪ್ರೀಂ ನಿರ್ದೇಶನದಂತೆ ಎಲ್ಲಾದಾಖಲೆಗಳನ್ನು ಬಿಡಿಎಗೆ ಸಲ್ಲಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿತ್ತು. ಆದರೆ, ಸಮಿತಿ ದಾಖಲೆಗಳನ್ನು ಪ್ರಾಧಿಕಾರಕ್ಕೆ ಇನ್ನೂ ಹಸ್ತಾಂತರ ಮಾಡಿಲ್ಲ ಎಂದು ಹೇಳಿದರು.2008 ರಲ್ಲಿ 3456 ಎಕರೆ ಜಮೀನನ್ನ ಬಿಡಿಎ(BDA) ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ 2008 ರ ಆಧಾರದ ಮೇಲೆ ಪರಿಹಾರ ನೀಡುವುದಕ್ಕೆ ಮಾಡಿದ್ದ ನಿರ್ಧಾರದ ವಿರುದ್ಧ ಭೂಮಿ ನೀಡಿದ ರೈತರು ಅಸಮಧಾನ ವ್ಯಕ್ತಪಡಿಸಿದ್ದರು. ಹಾಗೆನೇ ನೊಟಿಫಿಕೇಷನ್‌ಗೂ ಮೊದಲೆ ಕಟ್ಟಡ ನಿರ್ಮಿಸಿದ್ದವರು ಕೋರ್ಟ್ ಮೆಟ್ಟಿಲೇರಿದ್ದರು.

Related News

spot_img

Revenue Alerts

spot_img

News

spot_img