ಅಬ್ಬ ಒಂದೊಂದೆ ಈ ಅಲಂಕಾರಿಕ ಸಸ್ಯಗಳನ್ನ ನೋಡ್ತಿದ್ರೆ ನಿಜಕ್ಕೂ ಕಣ್ಣು ಸಖ್ಖತ್ ತಂಪಾಗುತ್ತೆ. ಅಂದ್ಹಾಗೆ ನೀವ್ ನೋಡ್ತಿರೋದು ಇದು ನಿಜವಾದ ಗಿಡಗಳಲ್ಲ ಇದೆಲ್ಲಾ ಪ್ಲಾಸ್ಟಿಕ್ ಅನ್ನ ಮರುಬಳಕೆ ಮಾಡಿ ತಯಾರು ಮಾಡಿದಂತಹ ಸಸ್ಯಗಳು. ನೋಡಿದ್ರೆ ಇವುಗಳನ್ನ ಪ್ಲಾಸ್ಟಿಕ್ನಿಂದ ಮಾಡಿರೋದು ಅಂತ ಯಾರು ಅನ್ನೊಲ್ಲ, ಅನ್ನೋಕು ಯೋಚನೆ ಮಾಡಬೇಕಾಗುತ್ತೆ. ಈ ಎಲ್ಲಾ ಮನೆ ಅಂದ್ಮೇಲೆ ನಾಲ್ಕು ಗಿಡ ಇದ್ರೆ ನೋಡೋಕೆ ಚೆಂದ ಅಲ್ವಾ. ಹಾಗೇನೆ ಈ ಆಧುನಿಕ ಯುಗದಲ್ಲಿ ಮನೆಯ ಸೌಂದರ್ಯ ಹೆಚ್ಚಿಸುವುದಕ್ಕೆ ಕೃತಕವಾಗಿ ಪ್ಲಾಸ್ಟಿಕ್ ನಿಂದ ತಯಾರಿದ ಅಲಂಕಾರಿಕ ಸಸ್ಯಗಳನ್ನ ಬಳಸುವುದರ ಬಗ್ಗೆ ನಿಮ್ಗೆಷ್ಟು ಗೊತ್ತು..?
ಹೌದು ಪ್ಲಾಸ್ಟಿಕ್ ಸಮಸ್ಯೆಗೆ ಕಡಿವಾಣ ಹಾಕಲು ಮತ್ತು ಪ್ಲಾಸ್ಟಿಕ್ ಅನ್ನ ಮರು ಬಳಕೆ ಮಾಡೋದಿಕ್ಕೆ ಈ ಕೃತಕ ಅಲಂಕಾರಿಕ ಸಸ್ಯಗಳು ಉತ್ತಮ ಉಪಾಯ ಅಂತಾನೇ ಹೇಳಬಹುದಾಗಿದೆ. ಈಗಿನ ಕಾಲದಲ್ಲಂತೂ ಮನೆಗಳಲ್ಲಿ ನೈಸರ್ಗಿಕ ಜೀವವವಿರುವ ಸಸ್ಯಗಳನ್ನ, ಮನೆ ಸೌಂದರ್ಯ ಹೆಚ್ಚಿಸೋದಕ್ಕೆ ಅಂತಾನೇ ಬಳಸ್ತಾರೆ. ಆದರೆ ಅದನ್ನ ನಿರ್ವಹಣೆ ಮಾಡಲಾಗದೆ ಕೊನೆಗೆ ಒಣಗಿಸಿ ಎಸೆಯುತ್ತಾರೆ. ಯಾಕೆಂದರೆ ಕೆಲಸದ ಒತ್ತಡದಿಂದ ಮನೆಯ ಕಡೆ ಗಮನ ಹರಿಸಲಾಗುವುದಿಲ್ಲ ಇನ್ನು ಸಸ್ಯಗಳ ಪರಿಸ್ಥಿತಿ ಬಗ್ಗೆ ಅಂತು ಯೋಚಿಸೋದೆ ಬೇಡ.
ಹೀಗಾಗಿ ಸಾಕಷ್ಟು ಕಷ್ಟ ಅನುಭವಿಸ್ತಾರೆ. ಆದ್ರೆ ಇನ್ಮುಂದೆ ಇದಕ್ಕೆ ಫುಲ್ ಸ್ಟಾಪ್ ಇಡಬಹುದಾಗಿದೆ. ಹೌದು ನೀವ್ ಕೇಳ್ತಿರೋದು ಸತ್ಯ. ಸುಮಾರು ಸಾವಿರಾರು ರುಪಾಯಿ ತೆತ್ತು, ನಿಜವಾದ ಗಿಡಗಳನ್ನ ನಿರ್ವಹಣೆ ಮಾಡಲಾಗದೆ ತಿಪ್ಪೆ ಗುಂಡಿಗೆ, ಒಣಗಿಸಿ ಎಸೆಯುವ ಬದಲು ಈ ರೀತಿ ಪ್ಲಾಸ್ಟಿಕ್ ನಿಂದ ಕೃತಕವಾಗಿ ತಯಾರು ಮಾಡಿದ ಈ ಅದ್ಭುತ ಸಸ್ಯಗಳನ್ನ ನೀವು ಬಳಸಬಹುದಾಗಿದೆ. ನಿಮ್ಮ ಮನೆ ಹಾಲ್ ನಲ್ಲಿ, ಮಲಗುವ ಕೋಣೆಯಲ್ಲಿ, ಸ್ನಾನದ ಗೃಹದಲ್ಲಿ , ಪಡಸಾಲೆಯಲ್ಲಿ , ಅಡುಗೆಮನೆಯಲ್ಲಿ ಮತ್ತು ತಾರಸಿಯಲ್ಲಿ ಸೌಂದರ್ಯ ಹೆಚ್ಚಿಸೋದಕ್ಕೆ ಇಡಬಹುದಾಗಿದೆ. ಈ ಹಿಂದೆ ಜನ ಯಾಂತ್ರಿಕ ಜಗತ್ತಿನ ದಾಸರಾಗಿರಲಿಲ್ಲ. ಪ್ರಕೃತಿಯ ಆರಾಧಕರಾಗಿದ್ದರು. ತಮ್ಮ ಮನೆಗೆ ಬೇಕಾಗುವ ತರಕಾರಿ ಹಣ್ಣು-ಹಂಪಲುಗಳನ್ನು ಮನೆಯ ಹಿತ್ತಿಲಿನಲ್ಲಿಯೇ ಬೆಳೆಸಿಕೊಳ್ಳುತ್ತಿದ್ದ್ರು. ಆದರೆ ಈ ಆಧುನಿಕ ಒತ್ತಡದ ಜೀವನದಲ್ಲಿ ತಮ್ಮ ಜೀವಗಳ ಮೇಲೆಯೆ ಗಮನ ಕೊಡಲು ಸಮಯವಿಲ್ಲ
ಇನ್ನುಮನೆಯಲ್ಲಿರುವ ಸಸ್ಯಗಳ ಬಗ್ಗೆ ಗಮನ ಕೊಟ್ಟಂತೆಯೇ… ಮುಂದೆ ಅಕ್ಕ-ಪಕ್ಕ ಗಿಡಗಳನ್ನು ನೆಡುತ್ತಿದ್ದರು, ಅವರು ನೆಡುವ ಗಿಡ ಅಡುಗೆ ತಯಾರು ಮಾಡುವಾಗ ಉಪಯೋಗಕ್ಕೆ ಬರ್ತಾ ಇತ್ತು. ಈ ಓರಿಜಿನಲ್ ಗಿಡಗಳನ್ನ ನೀವು ದುಬಾರಿ ದುಡ್ಡುಕೊಟ್ಟು ತರಬೇಕಾಗುತ್ತೆ, ಆದರೆ ಇವು ತುಂಬಾ ಜೇಬಿಗೆ ಹೊರೆಯಂತು ಅಲ್ಲಾ..ಯಾವ್ ಯಾವ್ ಗಿಡ ಸಿಗುತ್ತೆ ಅಂತ ಯೋಚನೆ ಮಾಡ್ತಿದ್ದೀರಾ..? ಇಲ್ಲಿವೆ ನೋಡಿ ಆ ಗಿಡಗಳು..!
*white tulips
*red agave
*white viola
*pineapple gross ball
*green and clusterd plant
*green faux succulent plant
*faux plant
*alovera
*purple petunia
*plectranthurs plant
*apple leaves
*rosemary