28.8 C
Bengaluru
Saturday, June 29, 2024

ಇನ್ಮುಂದೆ ಆಸ್ತಿ ತೆರಿಗೆ ಪಾವತಿಗೆ ಬೆಂಗಳೂರು ಒನ್ ಕೇಂದ್ರಗಳಲ್ಲೇ ಅವಕಾಶ

#Henceforth #property tax #payment #Bangalore One centers
ಬೆಂಗಳೂರು: ಬೆಂಗಳೂರಿನ ನಾಗರಿಕರಿಗೆ ಕಂದಾಯ ಸೇವೆಗಳು ದೊಡ್ಡ ತಲೆನೋವಾಗಿವೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿ, ಪಹಣಿ ಇವೆಲ್ಲ ಮಾಡಿಸೋದು ಕಷ್ಟಕರವಾಗಿದೆ. ಇದೀಗ ಬಿಬಿಎಂಪಿ ಇದನ್ನು ಸರಳೀಕರಣ ಮಾಡಲು ಮುಂದಾಗಿದೆ. ಬಿಬಿಎಂಪಿ(BBMP) ಆದಾಯದ ಪ್ರಮುಖ ಮೂಲವಾದ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸಲು ತೆರಿಗೆ ಅಧಿಕಾರಿಗಳಿಗೆ ವಾರದ ಗುರಿ ನೀಡಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಅದರ ಜತೆಗೆ ಬಾಕಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,ಆಸ್ತಿ ತೆರಿಗೆ ಪಾವತಿಯನ್ನು ಆನ್ ಲೈನ್ ನಲ್ಲಿ ಮಾಡುವಂತೆ . ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ. ಆನ್‌ಲೈನ್‌ನಲ್ಲಿ ಸಾರ್ವಜನಿಕರು ತಾಂತ್ರಿಕ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಇದೇ ಮೊದಲ ಬಾರಿಗೆ ಬೆಂಗಳೂರು ಒನ್‌ಗಳಲ್ಲಿ(Bangloreone) ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಬಜೆಟ್‌ ನಲ್ಲಿ ಘೋಷಣೆ ಮಾಡಲು ಮುಂದಾಗಿದೆ. ಒಂದೇ ಕಂತಿನಲ್ಲಿ ಬಾಕಿ ತೆರಿಗೆ ಪಾವತಿಸುವವರಿಗೆ ಬಡ್ಡಿ ಅಥವಾ ದಂಡ ಮನ್ನಾ ಮಾಡುವುದು. ಬಿಬಿಎಂಪಿ(BBMP) ಕಾಯ್ದೆ 2020ರ ಪ್ರಕಾರ ಆಸ್ತಿ ತೆರಿಗೆ ಬಾಕಿ(Propertytax) ಇರುವ ಕಟ್ಟಡ ಮಾಲಿಕರಿಗೆ ದುಪ್ಪಟ್ಟು ದಂಡ ಅಥವಾ ಬಡ್ಡಿ ವಿಧಿಸಲಾಗುತ್ತದೆ.ಬಿಬಿಎಂಪಿ ಬಜೆಟ್‌ಗೆ ಸಾರ್ವಜನಿಕರಿಂದ ಸಾಲು ಸಾಲು ಸಲಹೆಗಳು ಬರುತ್ತಿವೆ. ಅದರಲ್ಲೂ ಕಂದಾಯ ವಿಭಾಗಕ್ಕೆ ಹಲವು ಸಲಹೆಗಳು ಬಂದಿವೆ, ಖಾತೆ ಬದಲಾವಣೆ, ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಹೀಗೆ ಹಲವು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲು ಸಲಹೆ ಬಂದಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಹಲವಾರು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

3 ವಿನಾಯಿತಿಗಳೇನು?

1. ಬೆಂಗಳೂರು ಒನ್‌ಗಳಲ್ಲಿ ಆಸ್ತಿ ತೆರಿಗೆ ಪಾವತಿ ಬಗ್ಗೆ ಬಜೆಟ್‌ನಲ್ಲಿ ಘೋಷಣೆ
2. ಆನ್‌ಲೈನ್‌ನಲ್ಲಿ ಖಾತೆ ಬದಲಾವಣೆ ಸೇವೆ
3. ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಖಾತೆ ಮಾಡಿಸಲು ಆನ್‌ಲೈನ್ ಸೇವೆ
4. ಡಿಜಿಟಲ್‌ನಲ್ಲಿ ಆಸ್ತಿ ಮ್ಯಾಪ್ ರೆಕಾರ್ಡಿಂಗ್ ಸೇವೆ
5. ಕಂದಾಯ ಸೇವೆಯನ್ನು ಡಿಜಿಟಲೀಕರಣ ಆಗಿ ಮಾರ್ಪಾಡು ಮಾಡುವುದು

Related News

spot_img

Revenue Alerts

spot_img

News

spot_img