ಬೆಂಗಳೂರು, ಜೂ. 13 : ಹಲವು ಕಾರಣಗಳಿಂದ ನಾವು ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆಯುತ್ತೇವೆ. ಆದರೆ, ಕೆಲವೊಮ್ಮೆ ದೊಡ್ಡ ಮೊತ್ತದ ಸಾಲವನ್ನು ಪಡೆಯಲು ಮನೆ, ಒಡವೆ, ಆಸ್ತಿಗಳನ್ನು ಅಡವಿಡಬೇಕಾಗುತ್ತದೆ. ಹೀಗೆ ಅಡವಿಟ್ಟು ಸಾಲ ಪಡೆದಾಗ ನಮ್ಮ ಆಸ್ತಿಯ ಮೂಲ ದಾಖಲೆಗಳು, ಇನ್ಶುರೆನ್ಸ್ ಪ್ರಮಾಣ ಪತ್ರ, ಒಡವೆಗಳು ಬ್ಯಾಂಕ್ ನಲ್ಲಿ ಇರುತ್ತವೆ. ಕೆಲವೊಮ್ಮೆ ಬ್ಯಾಂಕ್ ಗಳಲ್ಲಿ ಕೆಲ ಅನಾಹುತಗಳು ಸಂಭವಿಸಿದಾಗ ಡಾಕ್ಯುಮೆಂಟ್ ಗಳು ಕಳೆದು ಹೋಗುತ್ತವೆ. ಒಡವೆಗಳು ಕಳ್ಳತನವಾಗಿರುತ್ತವೆ. ಹೀಗಿದ್ದಾಗ ನಮ್ಮ ದಾಖಲೆಗಳು ಹೇಗೆ ಸಿಗುತ್ತವೆ..?
ಕೆಲ ಬ್ಯಾಂಕ್ ಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋಗುವುದು, ಕೆಲ ಪ್ರಕೃತಿ ಪ್ರವಾಹಗಳಿಂದಾಗಿ ಬ್ಯಾಂಕ್ ನಲ್ಲಿದ್ದ, ಹಣ, ಒಡವೆ, ದಾಖಲೆಗಳು ನಾಶವಾಗುವುದು ಸಾಮಾನ್ಯವಾಗಿ ಜರುಗುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಜನರ ದಾಖಲೆಗಳು ನಾಶವಾದಾಗ ಅವರಿಗೆ ಬ್ಯಾಂಕ್ ಗಳು ಪರಿಹಾರದ ಜೊತೆಗೆ ದಂಡವನ್ನೂ ಕಟ್ಟಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರಲು ಆರ್ ಬಿಐ ಚಿಂತನೆ ನಡೆಸಿದೆ. ಈ ಮೂಲಕ ಗ್ರಾಹಕರಿಗೆ ನೀಡುವ ಸೇವೆಯ ಮಟ್ಟವನ್ನು ಹೆಚ್ಚಿಸಲಿದೆ.
ಈ ಸಂಬಂಧ ಆರ್ ಬಿಐ ಉನ್ನತ ಮಟ್ಟದ ಸಮಿತಿಯನ್ನು ಕಳೆದ ವರ್ಷವೇ ರಚಿಸಿದೆ. ಮಾಜಿ ಡೆಪ್ಯೂಟಿ ಆರ್ಬಿಐ ಗವರ್ನರ್ ಬಿ.ಪಿ. ಡಕಣುಂಗೋ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಸಮಿತಿಯು ಹಲವು ಶಿಫಾರಸುಗಳನ್ನು ಒಳಗೊಂಡಿರುವ ವರದಿಯನ್ನು ಆರ್ ಬಿಐಗೆ ಸಲ್ಲಿಸಿದೆ. ಇದರ ಪ್ರಕಾರ ಗ್ರಃಕರು ಅಡವಿಟ್ಟ ದಾಖಲೆಗಳು ಕಳೆದು ಹೋದರೆ, ಸರ್ಟಿಫೈಡ್ ಕಾಪಿಗಳನ್ನು ಬ್ಯಾಂಕ್ ಗಳು ತನ್ನದೇ ಖರ್ಚಿನಲ್ಲಿ ತೆಗಿಸಿಕೊಡಸಬೇಕು. ಸಮಯ ವಿಳಂಬವಾದಾಗ ಅದರ ಒರಿಹಾರವನ್ನೂ ಕಟ್ಟಿ ಕೊಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.