ಹಾಸನ (ಜು.05): ಕರ್ನಾಟಕದಲ್ಲಿ ಇತ್ತೀಚೆಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳಿಂದ ಬಿಸಿ ತಟ್ಟುತ್ತಿದೆ. ಜೂನ್ 28 ರಂದು ಕರ್ನಾಟಕದ ವಿವಿಧ ಕಡೆ ಲೋಕಾಯುಕ್ತ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಚಿನ್ನಾಭರಣ, ನಗದು ಹಾಗೂ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದರು. ಅದರಂತೆ ಇಂದು ಹಾಸನ ನಗರಸಭೆ ವಾರ್ಡ್ ಅಧಿಕಾರಿ ದುಬ್ಬೇಗೌಡ ಎಂಬುವರಿಂದ ಇ-ಸ್ವತ್ತು ಪಡೆಯಲು 25 ಸಾವಿರ ಲಂಚ ಕೇಳಿದ್ದು, ಅದನ್ನು ಪಡೆಯುವ ವೇಳೆ ನಗರಸಭೆ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್ ಬಾಲು ನೇತೃತ್ವದಲ್ಲಿ ದಾಳಿ ನಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ.