ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಪ್ರತಿದಿನ ಕಿತ್ತಾಟ ಹಾಗೂ ಸೇಡಿನ ಆಟ ನಡೀತಾನೆ ಇರುತ್ತೆ. ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಒಳಜಗಳಗಳು ನಡೀತಿದ್ದಾವೆ. ಪ್ರತಿಸಲದಂತೆ ಇವತ್ತು ಸಹ ಬಿಗ್ ಬಾಸ್ ವಿಭಿನ್ನ ಟಾಸ್ಕ್ ನೀಡಿತ್ತು. ಎದುರಾಳಿ ತಂಡದ ಆಟಗಾರರ ದಾಳಿಗಳಿಂದ ತಮ್ಮ ಬಟ್ಟೆಗಳನ್ನು ಸೇಫ್ ಮಾಡಿಟ್ಟುಕೊಳ್ಳಬೇಕು ಅನ್ನೋದು ಟಾಸ್ಕ್. ಈ ಟಾಸ್ಕ್ ವೇಳೆ ದೊಡ್ಡ ಫೈಟ್ ನಡೆದಿದೆ. ವಿನಯ್ ಗೌಡ ಮತ್ತು ಅವಿನಾಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ಅದು ಹೊಡೆದಾಟದ ಮಟ್ಟಕ್ಕೆ ಹೋಗಿದೆ. ಮನೆಯ ಸದಸ್ಯರೆಲ್ಲರೂ ಭಯ ಪಡುವಂತ ಹಂತಕ್ಕೆ ಈ ಕಾಳಗ ಹೋಗಿದ್ದು, ಟಾಸ್ಕ್ ನಡುವೆ ಬಿದ್ದ ಕಾರ್ತಿಕ್‌ಗೆ ಆಸ್ಪತ್ರೆಗೆ ಪಾಲಾಗಿದ್ದಾರೆ.
ಬಿಗ್ ಬಾಸ್ ಯಾರು ಗೆಲ್ತಾರೆ …!
ಬಿಗ್ ಬಾಸ್ ಮನೆಯಲ್ಲಿ ಈಗಿರುವ ಸ್ಪರ್ಧಿಗಳಲ್ಲಿ ಎಲ್ಲರೂ ಗೆಲ್ಲಲು ಹಠಕ್ಕೆ ಬಿದ್ದಿದ್ದಾರೆ. ಬರೋಬ್ಬರಿ 12 ವಾರದವರೆಗೂ ಬಂದಿದ್ದಾರೆ ಆದರೆ ಅದರಲ್ಲಿ ಈಗ ಉಳಿದುಕೊಳ್ಳಬೇಕಾದ್ರೆ ಸಾಕಷ್ಟು ಹಠಕ್ಕೆ ಬಿದ್ದು ಆಡಬೇಕಿದೆ. ಹೀಗಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಅವರು ಗೆಲ್ಲುತ್ತಾರೆ, ಇವರು ಗೆಲ್ಲುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಸಂಗೀತಾ ಹೆಸರು ಹೇಳುತ್ತಿದ್ದರೆ ಹಲವರು ಕಾರ್ತಿಕ್ ಹೆಸರು ಹೇಳುತ್ತಿದ್ದಾರೆ. ಇನ್ನೂ ಕೆಲವರು ತನಿಷಾ ಗೆಲ್ಲುತ್ತಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಪ್ರತಾಪ್ ಸದ್ಯಕ್ಕೆ ಯಾಕೋ ಆಟವಾಡದೆ ಸೈಲೆಂಟ್ ಆಗಿದ್ದಾರೆ ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಯಾರು ಅತ್ಯಂತ ಬುದ್ದಿವಂತಿಕೆಯ ಆಟ ಆಡುತ್ತಾರೆ..!
ಈ ವಾರದ ಟಾಸ್ಕ್ ನಲ್ಲಿ ಯಾವ ಸ್ಪರ್ಧಿಗಳು ಚೆನ್ನಾಗಿ ಪರ್ಫಾರ್ಮ್ ಮಾಡುತ್ತಾರೆ, ಯಾವ ಟೀಮ್ ಗೆಲ್ಲುತ್ತದೆ. ಯಾರು ಅತ್ಯಂತ ಬುದ್ದಿವಂತಿಕೆಯ ಆಟ ಆಡುತ್ತಾರೆ ಎಲ್ಲ ಅಂಶಗಳ ಮೇಲೆ ಫೈನಲ್ ಗೆಲುವು ನಿರ್ಧಾರವಾಗಲಿದೆ. ಫೈನಲ್‌ನಲ್ಲಿ ಗೆಲ್ಲಬೇಕು ಎಂದರೆ ಕೊನೆಯವರೆಗೆ ಹೋರಾಡಬೇಕು. ಅದನ್ನು ಯಾರು ಮಾಡುತ್ತಾರೆ, ಯಾರಿಗೆ ಆ ಸಾಮರ್ಥ್ಯವಿದೆ ಎಂಬುದನ್ನು ಕಾದು ನೋಡಬೇಕಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಅವರು ಗೆಲ್ತಾರೆ, ಇವರು ಗೆಲ್ತಾರೆ ಎನ್ನುವಂತಹ ಚರ್ಚೆಗಳು ಬಹಳಷ್ಟು ಕೇಳಿ ಬರ್ತಿದ್ದಾವೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು