ಹರಿಹರ ಜೂನ್ 16: ಗುತ್ತಿಗೆದಾರರೊಬ್ಬರ ಕಾಮಗಾರಿಗೆ ಅನುಮತಿ ನೀಡುವ ಸಲುವಾಗಿ 20 ಸಾವಿರ ಹಣ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ದಾವಣಗೆರೆ ಯ ಹರಿಹರ ತಾಲೂಕಿನಲ್ಲಿ ನಡೆದಿದೆ. ಹರಿಹರ ತಾಲೂಕಿನ ಎ.ಇ. ಅಬ್ದುಲ್ ಹಮೀದ್ ಎಂಬುವವರು ಕಾಮಗಾರಿಗೆ ಅನುಮತಿ ನೀಡಲು ಲಂಚವನ್ನು ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಹಿನ್ನಲೆ:
ದಾವಣಗೆರೆ ಯ ಹರಿಹರ ತಾಲೂಕಿನ ಗುತ್ತಿಗೆದಾರರೊಬ್ಬರ ಕಾಮಗಾರಿಗೆ ಅನುಮತಿ ನೀಡುವ ಸಲುವಾಗಿ ಎ.ಇ. ಅಬ್ದುಲ್ ಹಮೀದ್ 20 ಸಾವಿರ ಹಣ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಸಂಬಂಧ ಗುತ್ತಿಗೆದಾರರು ಲೋಕಾಯುಕ್ತ ಪೋಲೀಸರಿಗೆ ದೂರನ್ನು ನೀಡಿರುತ್ತಾರೆ.
ಇಂದು ಹರಿಹರದಲ್ಲಿ ಎ.ಇ. ಅಬ್ದುಲ್ ಹಮೀದ್ 20 ಸಾವಿರ ಹಣ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತ್ರತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೋಲೀಸರು , ಲಂಚದ ಹಣದ ಸಮೇತ ಎ.ಇ. ಅಬ್ದುಲ್ ಹಮೀದ್ ಅವರನ್ನು ಬಂಧಿಸಿದ್ದಾರೆ.
ಇದು ಎರಡನೇ ಘಟನೆ:
ನಿನ್ನೆಯಷ್ಟೇ ಹರಿಹರ ನಗರಸಭೆಯ ಸದಸ್ಯೆ ನಾಗರತ್ನ ಎಂಬುವರು ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ. ವಿಪರ್ಯಾಸ ಎಂದರೆ ಇಂದೂ ಸಹ ಹರಿಹರ ತಾಲೂಕಿನ ಎ.ಇ. ಅಬ್ದುಲ್ ಹಮೀದ್ ಎಂಬುವವರು ಕಾಮಗಾರಿಗೆ ಅನುಮತಿ ನೀಡಲು ಲಂಚವನ್ನು ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.