26.7 C
Bengaluru
Sunday, December 22, 2024

ಹೆಚ್​ ವಿಶ್ವನಾಥ್ ಪುತ್ರ ಅಮಿತ್ ಗೆ 1 ಲಕ್ಷಕ್ಕೂ ಅಧಿಕ ಹಣ ವಂಚನೆ

ಬೆಂಗಳೂರು : ಆನ್‌ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ,ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಪುತ್ರ ಅಮಿತ್ ದೇವರಹಟ್ಟಿಗೆ ,ಸುಮಾರು 1.99 ಲಕ್ಷ ಹಣ ವರ್ಗಾವಣೆಯಲ್ಲಿ ವಂಚನೆ ಆಗಿರುವ ಘಟನೆ ನಡೆದಿದೆ.ಅಪರಿಚಿತ ವ್ಯಕ್ತಿಯಿಂದ ಈ ಘಟನೆ ನಡೆದಿದ್ದು, ಅಮಿತ್, ಹಣ ಡ್ರಾ ಮಾಡಲು ಎಟಿಎಂ ಗೆ ಹೋಗಿದ್ದರು , ಈ ಸಂದರ್ಭದಲ್ಲಿ ಹಣಬಾರದ ಹಿನ್ನೆಲೆಯಲ್ಲಿ ಕಸ್ಟಮರ್ ಕೇರ್ ನಂಬರ್ ಗೆ ಅಮಿತ್ ಅವರು ಗೂಗಲ್ ನಲ್ಲಿ ನಂಬರ್ ಹುಡುಕಿ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಹಣ ವರ್ಗಾವಣೆಯಲ್ಲಿ ವಂಚನೆ ಮಾಡಿದ್ದಾನೆ ಎಂದು ಮಾಹಿತಿ ತಿಳಿದುಬಂದಿದೆ. ಬ್ಯಾಂಕ್ ಖಾತೆ ವಿವರ ಪಡೆದು ಹಣ ವಂಚಿಸಿದ್ದಾನೆ. ಈ ಬಗ್ಗೆ ಅಮಿತ್ ದೇವರಹಟ್ಟಿ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Related News

spot_img

Revenue Alerts

spot_img

News

spot_img