ಬೆಂಗಳೂರು ಆ. 05 ;ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ಇಂದು ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಗೃಹ ಜ್ಯೋತಿ ಯೋಜನೆಯ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ,ಇಂಧನ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ಶರಣಪ್ರಕಾಶ ಪಾಟೀಲ್, ರಹೀಂ ಖಾನ್,ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಗೃಹ ಜ್ಯೋತಿ ಯೋಜನೆಯನ್ನು ಆಗಸ್ಟ್ 1 ರಂದು ಜಾರಿಗೆ ತರಲಾಗಿದೆ.ಯೋಜನೆ ಅಡಿಯಲ್ಲಿ ವಿದ್ಯುತ್ ಬಳಕೆ ಮತ್ತು ರಾಜ್ಯ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ‘ಶೂನ್ಯ’ ಬಿಲ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ಯೋಜನೆಯ ನೋಂದಣಿ ಜುಲೈ 1 ರಂದು ಪ್ರಾರಂಭವಾಗಿದೆ. ಜುಲೈ 27 ರ ಮೊದಲು ನೋಂದಾಯಿಸಿದ ಜನರು ಜುಲೈ ತಿಂಗಳಿನ ಉಚಿತ ವಿದ್ಯುತ್‌ಗೆ ಅರ್ಹರಾಗಿರುತ್ತಾರೆ. ಅದರ ನಂತರ ನೋಂದಾಯಿಸಿದ ಗ್ರಾಹಕರನ್ನು ಆಗಸ್ಟ್ ತಿಂಗಳಿಗೆ ಪರಿಗಣಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.ಕಲಬುರ್ಗಿಯ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದಂತ ಅವರು, ಡಿಸೆಂಬರ್ ನಲ್ಲಿ ಯುವನಿಧಿ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗುತ್ತದೆ. ಐದು ಗ್ಯಾರಂಟಿ ಯೋಜನೆ ಜಾರಿಗೆ ಹಣದ ಕೊರತೆ ಇಲ್ಲ. ಐದು ಗ್ಯಾರಂಟಿ ಯೋಜನೆ ಜೊತೆಗೆ ಕರ್ನಾಟಕ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.ಆಗಸ್ಟ್ 24ರಂದು ಗೃಹಲಕ್ಶ್ಷ್ಮಿ ಯೋಜನಗೆ ಚಾಲನೆ ನೀಡುತ್ತೇವೆ. ಈ ಯೋಜನೆ ಅಡಿಯಲ್ಲಿ ಮನೆ ಯಜಮಾನಿಗೆ 2 ಸಾವಿರ ನೀಡುತ್ತೇವೆ ಎಂದು ತಿಳಿಸಿದರು.ನಾವು ಕೊಟ್ಟ ಮಾತನ್ನು ತಪ್ಪಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ಖುಷಿಯಾಗಿದ್ದಾರೆ. ಎಂದರು