21.1 C
Bengaluru
Tuesday, July 9, 2024

ಗೃಹಲಕ್ಷ್ಮಿ ಯೋಜನೆ’ ಆ.20ರಂದು ಜಾರಿ 2000 ನಿಮ್ಮ ಖಾತೆಗೆ ಜಮಾ

#Gruhalakshmi #rajeevgandhi #2000rs

ಬೆಂಗಳೂರು: ರಾಜೀವ್ ಗಾಂಧಿ ಜನ್ಮದಿನದಂದು(ಆಗಸ್ಟ್.20ರ ) ಗೃಹಲಕ್ಷ್ಮಿ ಜಾರಿಗೊಳಿಸಲಾಗುತ್ತಿದೆ. ಅಂದು ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್‌ ಮಟ್ಟದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಸೂಚಿಸಿದ್ಧೇವೆ. 1 ಕೋಟಿ 28 ಲಕ್ಷ ಮಹಿಳೆಯರ ಅರ್ಜಿಯನ್ನು ಪರಿಗಣಿಸಿದ್ದೇವೆ. ಅವರ ಖಾತೆಗೆ 2000 ಜಮಾ ಆಗಲಿದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.ಇದೇ ವೇಳೆ ಯೋಜನೆಗೆ ಚಾಲನೆ ನೀಡಲು ರಾಜ್ಯಕ್ಕೆ ಆಗಮಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಅವರಿಗೆ ಆಹ್ವಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆ.20ರಂದು ಬೆಳಗಾವಿಯಲ್ಲಿ ದೊಡ್ಡ ಕಾರ್ಯಕ್ರಮ ನಡೆಸಿ, ಇಡೀ ದೇಶಕ್ಕೊಂದು ಸಂದೇಶ ಕಳಿಸಬೇಕೆಂಬುದು ಸರ್ಕಾರದ ಬಯಕೆ. ಹೀಗಾಗಿಯೇ ಆಹ್ವಾನ ನೀಡಲಾಗಿದೆ. ಬಹುತೇಕ ಪಾಲ್ಗೊಳ್ಳುವುದಾಗಿ ಒಪ್ಪಿಗೆಯೂ ಸಿಕ್ಕಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಈ ಕಾರ್ಯಕ್ರಮವನ್ನು ಪ್ರತಿ ಹಳ್ಳಿ ಹಳ್ಳಿಗೆ ಮುಟ್ಟಿಸುವ ಉದ್ದೇಶದಿಂದ, ಆ.20ರಂದು ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಸೂಚಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮನೆ ಯಜಮಾನಿಯ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಹಾಕಿದ್ದರೆ ಯಾವುದೇ ಗೊಂದಲ ಇಲ್ಲದೆ ಹಣ ಖಾತೆಗೆ ಬರಲಿದೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇದ್ದಲ್ಲಿ ತಕ್ಷಣವೇ ಲಿಂಕ್ ಮಾಡಬೇಕು.

Related News

spot_img

Revenue Alerts

spot_img

News

spot_img